ರಾಜಧಾನಿ ಗೆದ್ದವರು ರಾಜ್ಯ ಗೆಲ್ಲುತ್ತಾರೆ ಎಂಬ ನಂಬಿಕೆ: ಬೆಂಗಳೂರನ್ನು ಗೆಲ್ಲಲ್ಲು ಕಾಂಗ್ರೆಸ್, ಬಿಜೆಪಿ ಮೆಗಾ ಪ್ಲ್ಯಾನ್

ಬೆಂಗಳೂರು, ಏಪ್ರಿಲ್. 05: ರಾಜ್ಯ ರಾಜಧಾನಿ ಬೆಂಗಳೂರನ್ನು ಗೆದ್ದವರೇ ರಾಜ್ಯವನ್ನು ಗೆಲ್ಲುತ್ತಾರೆ ಎಂಬ ನಂಬಿಕೆ ಇದೆ. ಈ ಸತ್ಯವನ್ನು ಅರಿತುಕೊಂಡಿರುವ ರಾಜಕೀಯ ಪಕ್ಷಗಳು ಇಲ್ಲಿ ತಮ್ಮ ಪಕ್ಷದ ಧ್ವಜಗಳನ್ನು ಹಾರಿಸಲು ಕಾತುರದಲ್ಲಿವೆ. ಅದರಲ್ಲೂ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಇಲ್ಲಿ ಸಾಧ್ಯವಾದಷ್ಟು ಸ್ಥಾನಗಳಲ್ಲಿ ಗೆಲ್ಲಲು ಸರ್ವ ಪ್ರಯತ್ನ ಮಾಡುತ್ತಿವೆ.

ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಸಾಧ್ಯವಾದಷ್ಟು ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಮತ್ತು ಕಾಂಗ್ರೆಸ್ ರಣತಂತ್ರ ಹೂಡುತ್ತಿವೆ. ನಗರದ ಮೂಲಭೂತ ಸೌಕರ್ಯಗಳನ್ನು ಸರಿ ಮಾಡಿಸುವ ಮೂಲಕ, ರಸ್ತೆ, ಟ್ರಾಫಿಕ್ ಅವ್ಯವಸ್ಥೆಗಳನ್ನು ಸರಿ ಮಾಡಿಸುವತ್ತ ರಾಜಕೀಯ ಪಕ್ಷಗಳು ತೊಡಗಿಕೊಂಡಿವೆ. ಆದರೆ, ಇವಷ್ಟೇ ಮತಗಳಾಗಿ ಪರಿವರ್ತನೆಯಾಗುವುದಿಲ್ಲ ಎಂಬುದು ನಾಯಕರಿಗೆ ತಿಳಿದಿದೆ.

Karnataka Election 2023: BJP, Congress Both Want to Cross 15 Seat Mark in Bengaluru

ಸರ್ಕಾರ ರಚಿಸಲು ಸಿಲಿಕಾನ್ ಸಿಟಿಯಲ್ಲಿ ಗೆಲ್ಲುವು ಸಾಧಿಸುವುದು ಎಷ್ಟು ಮುಖ್ಯ ಎಂಬುದಕ್ಕೆ 2008 ರಲ್ಲಿ ಬಿಜೆಪಿ 17, ಕಾಂಗ್ರೆಸ್ 10 ಮತ್ತು ಜೆಡಿಎಸ್ ಒಂದು ಸ್ಥಾನವನ್ನು ಗೆದ್ದು ಬಿಜೆಪಿ ಅಧಿಕಾರಕ್ಕೆ ಬಂದಿತು. 2013ರಲ್ಲಿ ಕಾಂಗ್ರೆಸ್‌ 13, ಬಿಜೆಪಿ 12, ಜೆಡಿಎಸ್‌ ಮೂರು ಗೆದ್ದು ನಂತರ ಕಾಂಗ್ರೆಸ್‌ ಸರ್ಕಾರ ರಚಿಸಿತ್ತು. 2018ರಲ್ಲಿ ಬಿಜೆಪಿ 12, ಕಾಂಗ್ರೆಸ್ 14 ಮತ್ತು ಜೆಡಿಎಸ್ 2 ಸ್ಥಾನಗಳನ್ನು ಗೆದ್ದಿದ್ದವು.

ಟ್ರಾಫಿಕ್ ಅವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯಗಳಂತಹ ಸಮಸ್ಯೆಗಳು ಬೆಂಗಳೂರಿಗರಿಗೆ ತಪ್ಪಿಲ್ಲ. ನಗರದಲ್ಲಿ ಅಂಕಿಅಂಶಗಳು ಏರಿಳಿತಗೊಳ್ಳುತ್ತಲೇ ಇರುತ್ತವೆ, ಎರಡೂ ಪಕ್ಷಗಳಲ್ಲಿ ಯಾವುದಾದರೂ ಒಂದು ಪಕ್ಷಕ್ಕೆ ಅನುಕೂಲವಾಗುತ್ತದೆ. ಬಿಜೆಪಿ ಮತ್ತು ಕಾಂಗ್ರೆಸ್ ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಕನಿಷ್ಟ 15 ಸ್ಥಾನಗಳನ್ನು ದಾಟಲು ಪ್ರಯತ್ನಿಸುತ್ತವೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, "ಬೆಂಗಳೂರಿನಲ್ಲಿ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ, ಇನ್ನು ಕೆಲವರು ಬಿಜೆಪಿಗೆ ಮತ ಹಾಕುತ್ತಾರೆ. ಆದರೆ ಯಾವಾಗಲೂ ಶೇ.15 ರಿಂದ 20ರಷ್ಟು ಮತದಾರರು ಜಾತಿ, ಧರ್ಮದ ಬಗ್ಗೆ ತಲೆಕೆಡಿಸಿಕೊಳ್ಳದೆ ತಟಸ್ಥರಾಗಿರುತ್ತಾರೆ .ಈ ವರ್ಗವನ್ನು ಗುರಿಯಾಗಿಟ್ಟುಕೊಂಡು ಈ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಬಹುದು" ಎಂದಿದ್ದಾರೆ.

ಈ ಜಾತಿ, ಧರ್ಮದ ಬಗ್ಗೆ ತಲೆಕೆಡಿಸಿಕೊಳ್ಳದ ಮತದಾರರು ಈ ಬಾರಿ ಕಾಂಗ್ರೆಸ್ ಜೊತೆ ಇರುತ್ತಾರೆ ಎಂಬ ವಿಶ್ವಾಸ ನಮಗಿದೆ. ಭ್ರಷ್ಟಾಚಾರ, ವಿಫಲ ಆಡಳಿತ, ಹಗರಣಗಳು ಮತ್ತು ಬಿಜೆಪಿ ಸರ್ಕಾರಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳು ಇದಕ್ಕೆ ಕಾರಣ. ನಾವು ನಗರದಲ್ಲಿ 15 ರಿಂದ 16 ಸೀಟುಗಳನ್ನು ಗುರಿಯಾಗಿಸಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

Karnataka Election 2023: BJP, Congress Both Want to Cross 15 Seat Mark in Bengaluru

ಬಿಜೆಪಿ ಕೂಡ ಇದೇ ಸಂಖ್ಯಾಬಲವನ್ನು ತನ್ನ ಗುರಿಯಾಗಿಸಿಕೊಂಡಿದೆ. 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಬಿಜೆಪಿ ಸೇರಿದ ಶಾಸಕರು ಬಿಎಸ್‌ ಯಡಿಯೂರಪ್ಪ ಅವರಿಗೆ ಸರ್ಕಾರ ರಚನೆ ಸಹಾಯ ಮಾಡಿದ್ದರು. ಯಶವಂತಪುರ, ರಾಜರಾಜೇಶ್ವರಿನಗರ, ಮಹಾಲಕ್ಷ್ಮಿ ಲೇಔಟ್‌ ಮತ್ತು ಕೆಆರ್‌ ಪುರಂನಲ್ಲಿ ಸ್ಪರ್ಧಿಸಿ ಗೆದ್ದು, ಬಿಜೆಪಿ ಸರ್ಕಾರ ರಚನೆಗೆ ಅಡಿಗಲ್ಲು ಹಾಕಿದ್ದರು.

ಚುನಾವಣೆಯಲ್ಲಿ ಇದೇ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡಿದ್ದ ಬಿಜೆಪಿ ಕಾರ್ಯಕರ್ತರು ಉಪ ಚುನಾವಣೆಯಲ್ಲಿ ಅವರ ಗೆಲುವಿಗೆ ಶ್ರಮಿಸಿದ್ದರು. ಆದರೆ ಈ ಬಾರಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿಯಾಗಿಲ್ಲದ ಕಾರಣ ಈ ಪ್ರಯತ್ನ ಫಲ ನೀಡದಿರಬಹುದು ಎಂದು ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ಭವಿಷ್ಯ ನುಡಿದಿದ್ದಾರೆ.

ಈಗ ಬಿಜೆಪಿಗೆ ಸೇರಿರುವ ಗೋವಿಂದರಾಜನಗರ, ಚಿಕ್ಕಪೇಟೆ, ಬಸವನಗುಡಿ ಕ್ಷೇತ್ರಗಳನ್ನು ಗೆಲ್ಲಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಅದೇ ರೀತಿ ಜಯನಗರ, ಹೆಬ್ಬಾಳ ಮತ್ತು ಪಕ್ಷದ ಶಾಸಕರು ಪ್ರತಿನಿಧಿಸುವ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಉತ್ತಮ ಅವಕಾಶಗಳಿವೆ. ಪಕ್ಷಾಂತರದಿಂದಾಗಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಕೆಲವು ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಗಳಿಗೆ ಕಾಲಿಟ್ಟಿತು. ಆದರೆ ಶಾಂತಿನಗರ ಮತ್ತು ಸರ್ವಜ್ಞನಗರದಂತಹ ಕೆಲವು ಕ್ಷೇತ್ರಗಳು ಕಾಂಗ್ರೆಸ್ ಕೋಟೆಗಳಾಗಿದ್ದು, ಬಿಜೆಪಿ ಗೆಲ್ಲಲು ಸಾಧ್ಯವಾಗಿಲ್ಲ.

2018 ರಲ್ಲಿ, ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡು ಬೃಹತ್ ರೋಡ್‌ಶೋ ನಡೆಸಿದರು, ಆದರೆ ಫಲಿತಾಂಶದಲ್ಲಿ ಯಾವ ವ್ಯತ್ಯಾಸವು ಕಂಡು ಬರಲಿಲ್ಲ. ಹಾಗಾಗಿ ಇದು ಕಾಂಗ್ರೆಸ್ ಭದ್ರಕೋಟೆ. ಚುನಾವಣೆ ನಡೆಯದ ಬಿಬಿಎಂಪಿ ಕೌನ್ಸಿಲ್ ಗೈರುಹಾಜರಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ಕಂಟಕ ತಂದಿದೆ. ಕಾರ್ಪೊರೇಟರ್‌ಗಳು ವೈಯಕ್ತಿಕ ಮತದಾರರೊಂದಿಗೆ ತಮ್ಮ ಸಂಪರ್ಕದೊಂದಿಗೆ ತಮ್ಮ ಪಕ್ಷಗಳನ್ನು ಗೆಲ್ಲಲು ಸಹಾಯ ಮಾಡುತ್ತಾರೆ.

"ಈ ಬಾರಿ ಕಾರ್ಪೊರೇಟರ್‌ಗಳ ಅನುಪಸ್ಥಿತಿಯಲ್ಲಿ, ರಸ್ತೆ ಮೂಲಸೌಕರ್ಯ, ಗುಂಡಿಗಳು ಮತ್ತು ಟ್ರಾಫಿಕ್ ಜಾಮ್‌ಗಳಂತಹ ನಾಗರಿಕ ಸಮಸ್ಯೆಗಳನ್ನು ಕ್ಷೇತ್ರದ ಶಾಸಕರು ನಿರ್ವಹಿಸಬೇಕಾಗುತ್ತದೆ. ಆದರೆ, ಅವುಗಳನ್ನು ಪರಿಹರಿಸದಿದ್ದರೆ, ನಾವು ಜನರ ಕೋಪವನ್ನು ಎದುರಿಸಬೇಕಾಗುತ್ತದೆ" ಎಂದು ಶಾಸಕರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+