• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

5ನೇ ಲಾಕ್‌ಡೌನ್‌ನಲ್ಲಿ ಯಾವುದಕ್ಕೆ ವಿನಾಯಿತಿ? ಸುಳಿವು ನೀಡಿದ ಡಿಸಿಎಂ

|

ಬೆಂಗಳೂರು, ಮೇ 28: ಈ ವಾರಾಂತ್ಯಕ್ಕೆ ನಾಲ್ಕನೇ ಹಂತದ ಲಾಕ್‌ಡೌನ್‌ ಮುಗಿಯಲಿದೆ. ಅಲ್ಲಿಂದ ಮತ್ತೊಂದು ಹಂತದ ಲಾಕ್‌ಡೌನ್‌ ಆರಂಭವಾಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. ಏಕಂದ್ರೆ, ದೇಶದಲ್ಲಿ ಕೊರೊನಾ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬಂದಿಲ್ಲ, ದಿನದಿಂದ ದಿನಕ್ಕೆ ಹೊಸ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.

ಈ ಹಿನ್ನೆಲೆಯಲ್ಲಿ 5ನೇ ಲಾಕ್‌ಡೌನ್‌ ಮಾಡುವುದು ಅನಿವಾರ್ಯ ಎನ್ನಲಾಗುತ್ತಿದೆ. ಈ ಬಗ್ಗೆ ಯಾರೂ ಕೂಡ ಅಧಿಕೃತಪಡಿಸಿಲ್ಲ. ಕೇಂದ್ರದ ನಿರ್ದೇಶನಕ್ಕಾಗಿ ಕಾಯಲಾಗುತ್ತಿದೆ. ಈ ನಡುವೆ ಕರ್ನಾಟಕ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಜೂನ್ 1ರ ನಂತರ ರಾಜ್ಯದ ಪರಿಸ್ಥಿತಿ ಹೇಗಿರಲಿದೆ ಎಂದು ಸುಳಿವು ನೀಡಿದ್ದಾರೆ.

 ಲಾಕ್ಡೌನ್ 5.0 ಹೇಗಿರಬಹುದು? 11 ನಗರಗಳ ಮೇಲ್ಯಾಕೆ ಕಣ್ಣು? ಲಾಕ್ಡೌನ್ 5.0 ಹೇಗಿರಬಹುದು? 11 ನಗರಗಳ ಮೇಲ್ಯಾಕೆ ಕಣ್ಣು?

ಮತ್ತಷ್ಟು ಕ್ಷೇತ್ರಗಳಿಗೆ ವಿನಾಯಿತಿ ಸಿಗಲಿದೆ

ಮತ್ತಷ್ಟು ಕ್ಷೇತ್ರಗಳಿಗೆ ವಿನಾಯಿತಿ ಸಿಗಲಿದೆ

ನಾಲ್ಕು ಹಂತದ ಲಾಕ್ ಡೌನ್ ನಲ್ಲಿ ಹಲವು ವಿನಾಯತಿ ಕೊಡಲಾಗಿದೆ. 5ನೇ ಹಂತದ ಲಾಕ್ ಡೌನ್ ನಲ್ಲಿಯೂ ಕೆಲವು ವಿನಾಯಿತಿ ಕೋರಿ ಕೇಂದ್ರಕ್ಕೆ ಸಿಎಂ ಪತ್ರ ಬರೆದಿದ್ದಾರೆ ಎಂದು ಡಿಸಿಎಂ ಹೇಳಿದ್ದಾರೆ. ಅಲ್ಲಿಗೆ ರಾಜ್ಯದಲ್ಲಿ ಜೂನ್ 1ರ ನಂತರ ಮತ್ತಷ್ಟು ಕ್ಷೇತ್ರಗಳಿಗೆ ವಿನಾಯಿತಿ ಸಿಗುವುದು ಬಹುತೇಕ ಖಚಿತ.

ಹೋಟೆಲ್, ಮಾಲ್ ತೆರೆಯಲು ಒತ್ತಾಯ

ಹೋಟೆಲ್, ಮಾಲ್ ತೆರೆಯಲು ಒತ್ತಾಯ

ನಾಲ್ಕನೇ ಲಾಕ್‌ಡೌನ್‌ನಲ್ಲಿ ಹಲವು ಕ್ಷೇತ್ರಗಳಿಗೆ ಕೆಲಸ ಮಾಡಲು ಅವಕಾಶ ಕೊಡಲಾಗಿತ್ತು. ಈ ಬಾರಿ ಮಾಲ್, ರೆಸ್ಟೋರೆಂಟ್ ಗಳ ಓಪನ್ ಮಾಡಲು ಮನವಿ ಬಂದಿದ್ದೆ. ಶಾಲಾ-ಕಾಲೇಜುಗಳ ಓಪನ್ ಗೂ ಮನವಿ ಬಂದಿದೆ. ಜೂನ್ 1 ರಿಂದ ವಿವಿಧ ಕ್ಷೇತ್ರಗಳಲ್ಲಿ ಸಡಿಲಿಕೆ ಕೊಡಬೇಕು ಎಂಬ ಒತ್ತಾಯ ಬಂದಿದೆ. ಆದರೆ, ಸಿನಿಮಾ, ಮಾಲ್ ಬಿಟ್ಟು ಬಾಕಿ ಕ್ಷೇತ್ರದಲ್ಲಿ ಸಡಿಲಗೊಳಿಸುವ ಒತ್ತಾಯ ಇದೆ' ಎಂದು ಡಿಸಿಎಂ ಹೇಳಿದ್ದಾರೆ.

ಕೋವಿಡ್19 ನಿಯಂತ್ರಿಸುವ ವಿಚಾರದಲ್ಲಿ ಅವ್ಯವಹಾರ ವಿಚಾರ

ಕೋವಿಡ್19 ನಿಯಂತ್ರಿಸುವ ವಿಚಾರದಲ್ಲಿ ಅವ್ಯವಹಾರ ವಿಚಾರ

''ಪಿಪಿಇ ಕಿಟ್ ಖರೀದಿಯಲ್ಲಿ ಅವ್ಯವಹಾರ ವಿಚಾರ. ಇದು ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನ. ಯಾರು ಎಲ್ಲಿಬೇಕೆಂದಲ್ಲಿ ಖರೀದಿಸಲು ಅವಕಾಶ ಇಲ್ಲ. ಪಿಪಿಇ ಕಿಟ್, ವೆಂಟಿಲೇಟರ್ ಸೇರಿದಂತೆ ವಿವಿಧ ಸಾಮಾಗ್ರಿಗಳು ನಮ್ಮಲ್ಲಿ ಎಲ್ಲ ಉತ್ಪಾದನೆ ಆಗ್ತಿವೆ. ಆರಂಭದ ಪರಿಸ್ಥಿತಿಗೂ ಸದ್ಯದ ಪರಿಸ್ಥಿತಿಗೂ ವ್ಯತ್ಯಾಸ ಇದೆ. ದುರುದ್ದೇಶದಿಂದ ಯಾರು ಕೆಲಸ ಮಾಡ್ತಿಲ್ಲ'' ಎಂದು ಅಶ್ವಥನಾರಾಯಣ ಸ್ಪಷ್ಟನೆ ನೀಡಿದ್ದಾರೆ.

ಯಲಹಂಕ ಸಾವರ್ಕರ್ ವಿಚಾರ

ಯಲಹಂಕ ಸಾವರ್ಕರ್ ವಿಚಾರ

'ಕ್ಷುಲಕವಾಗಿ ಕಳಂಕ ತರಲು ವಿಪಕ್ಷಗಳು ಮಾಡ್ತಿವೆ. ನಮ್ಮ ರಾಜ್ಯದ ಮಹಾನ್ ವ್ಯಕ್ತಿಗಳ ಹೆಸರು ಈಗಾಗ್ಲೆ ನಾಮಕರಣ ಮಾಡಲಾಗಿದೆ. ಸಾವರ್ಕರ್ ದೇಶಕ್ಕೆ ಹೋರಾಡಿದ ಮಹಾನ್ ವ್ಯಕ್ತಿ. ದೇಶಕ್ಕಾಗಿ ಹಿಂಸೆ ಸಹಿಸಿಕೊಂಡು ಹೋರಾಟ ಮಾಡಿದವರು. ಸಾವರ್ಕರ್ ಯಾರು ಮಾಡದ ಸಾಹಸವನ್ನು ಮಾಡಿದ್ದಾರೆ. ಸಾವರ್ಕರ್ ಹೆಸರು ನಾಮಕರಣ ಇಂದಿನ ಪೀಳಿಗೆಗೆ ಪ್ರಸ್ತುತ. ವಿಪಕ್ಷಗಳು ಇಲಸಲ್ಲದ ಹೇಳಿಕೆ ಕೊಟ್ಟು ಸಾವರ್ಕರ್ ಗೆ ಅಗೌರವ ತೋರಿದ್ದಾರೆ. ಸಾವಿರ ಪರ್ಸೆಂಟ್ ಸಾವರ್ಕರ್ ಹೆಸರು ಇಡ್ತೇವಿ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದು ಡಾ.ಅಶ್ವಥ ನಾರಾಯಣ ಹೇಳಿದ್ದಾರೆ.

English summary
Karnataka deputy CM ashwath narayan clarified about Lockdown 5. gym and restaurant will not open, may be hotels have chance to re starts, he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X