ಬಿಜೆಪಿ-ಜೆಡಿಎಸ್ ಮೈತ್ರಿ: ಡಿವೋರ್ಸ್ಗೆ ಅರ್ಜಿ ಹಾಕಿ ತಾಳಿ ಕಟ್ಟಿದಂತಿದೆ: ಕಾಂಗ್ರೆಸ್
ಬೆಂಗಳೂರು, ಅಕ್ಟೋಬರ್ 08: ಲೋಕಸಭಾ ಚುನಾವಣೆ 2024ರ ಸಂಬಂಧ ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ ನಡೆಯುತ್ತಿರುವ ಮೈತ್ರಿಯು ಡಿವೋರ್ಸ್ಗೆ ಅರ್ಜಿ ಹಾಕಿಕೊಂಡು ನಂತರ ತಾಳಿ ಕಟ್ಟಿದಂತಿದೆ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಲೇವಡಿ ಮಾಡಿದೆ.
ಬಿಜೆಪಿ-ಜೆಡಿಎಸ್ ಪಕ್ಷ ಮೈತ್ರಿಗೆ ಹಲವರ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಭಾನುವಾರ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರಸ್, ಕುಟುಂಬಸ್ಥರ ಒಪ್ಪಿಗೆ ಇಲ್ಲದೆ ಓಡಿ ಹೋಗಿ ಲವ್ ಮ್ಯಾರೇಜ್ ಆದಂತಿದೆ ಈ ಬಿಜೆಪಿ-ಜೆಡಿಎಸ್ ಮೈತ್ರಿ.

ಬಹುತೇಕ ಜೆಡಿಎಸ್ ಶಾಸಕರಿಗೆ ತಮ್ಮ ಪಕ್ಷವು ಬಿಜೆಪಿ ಜೊತೆ ಹೋಗುವುದು ಇಷ್ಟವಿಲ್ಲ. ಇತ್ತ ಬಿಜೆಪಿಯಲ್ಲಿ ಜೆಡಿಎಸ್ ಜೊತೆ ಹೋಗುವುದು ಇಷ್ಟವಿಲ್ಲ. ಇದು ಎರಡು ಪಕ್ಷಗಳ ಮೈತ್ರಿಯಲ್ಲ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನಡುವಿನ ವೈಯುಕ್ತಿಕ ಮೈತ್ರಿ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಕಾಂಗ್ರೆಸ್ ದೂರವಿಡಲು ಮೈತ್ರಿ
ಮುಂಬರಲಿರುವ ಲೋಕಸಭಾ ಚುನಾವನೆ ಪ್ರಯುಕ್ತ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಮೈತ್ರಿಗೆ ಮುಂದಾಗಿವೆ. ಈ ಕುರಿತು ಈಗಾಗಲೆ ಬಿಜೆಪಿ ವರಿಷ್ಠರನ್ನು ಜೆಡಿಎಸ್ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಮಾತನಾಡಿದ್ದಾರೆ.
ಪಕ್ಷದ ಹಿತ ದೃಷ್ಟಿಯಿಂದ ಈ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಜೆಡಿಎಸ್ ನಾಯಕ ಸಮರ್ಥನೆ ನೀಡದ್ದಾರೆ. ಇತ್ತ ಅಧಿಕಾರ ಕಸಿಕೊಂಡಿರುವ ಕಾಂಗ್ರೆಸ್ ಗೆ ಹೆಚ್ಚು ಸ್ಥಾನ ಸಿಗದಂತೆ ಮಾಡಿ ಸೋಲಿಗೆ ತಕ್ಕ ಉತ್ತರ ಕೊಡಲು ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.

ಬಿಜೆಪಿಯಲ್ಲಿ ಹಲವರಿಗೆ ಮೈತ್ರಿ ಇಷ್ಟವಿಲ್ಲ
ಈ ಎಲ್ಲ ಬೆಳವಣಿಗೆ ಮಧ್ಯೆ ಇತ್ತೀಚೆಗೆ ಬಿಜೆಪಿ ಜೆಡಿಎಸ್ ಮೈತ್ರಿಗೆ ಬಿಜೆಪಿ ನಾಯಕರಿಗೆ ಇಷ್ಟವಿಲ್ಲದ ಸಂಗತಿ ಬೆಳಕಿಗೆ ಬಂದಿದೆ. ಈ ಪೈಕಿ ಸದಾನಂದಗೌಡರು ಮುಕ್ತವಾಗಿಯೇ ಆಕ್ಷೇಪ ಹೊರ ಹಾಕಿದ್ದಾರೆ. ಬಿಜೆಪಿ ವರಿಷ್ಠರು ರಾಜ್ಯದ ನಾಯಕರು ಮತ್ತು ಕಾಯರ್ಕತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಈ ಮೈತ್ರಿ ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಮೂಲಕ ಡಿವಿ ಸದಾನಂದಗೌಡರು ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದ ಮಾಜಿ ಸಚಿವ ಎಸ್‌ಟಿ ಸೋಮಶೇಖರ್ ಅವರ ಮಾತಿಗೆ ಧ್ವನಿಯಾಗಿದ್ದಾರೆ. ಇತ್ತ ಕಾಂಗ್ರೆಸ್ ಎರಡು ಪಕ್ಷದ ಮೈತ್ರಿಗೆ ಲೇವಡಿ ಮಾಡುವ ಜೊತೆಗೆ ಜೆಡಿಎಸ್ ಶಾಸಕರಿಗೂ ಈ ಮೈತ್ರಿ ಇಷ್ಟವಿಲ್ಲ ಎಂದು ಹೇಳಿದೆ. ಮತ್ತೋಮ್ಮೆ ನರೇಂದ್ರ ಮೋದಿಯವರು ಪ್ರಧಾನಿ ಆಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ ಆದರೆ ಏಕಪಕ್ಷಿಯವಾಗಿ ಮೈತ್ರಿ ಮಾಡಿಕೊಳ್ಳುವುದು ಸರಿಯಲ್ಲ. ಇದರಿಂದ ರಾಜ್ಯಕ್ಕೆ ಅನುಕೂಲ ಆಗದು ಎಂದು ಡಿವಿ ಸದಾನಂದಗೌಡು ಅಭಿಪ್ರಾಯ ಹೊರ ಹಾಕಿದ್ದಾರೆ.












Click it and Unblock the Notifications