ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ

|
Google Oneindia Kannada News

ಬೆಂಗಳೂರು, ಮಾರ್ಚ್ 16; ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣಿಕರಿಗೆ ಕರ್ನಾಟಕ ಸರ್ಕಾರ ಸಿಹಿ ಸುದ್ದಿ ನೀಡಿದೆ. ಸ್ವತಃ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈ ಕುರಿತು ಸೂಚನೆ ನೀಡಿದ್ದಾರೆ.

ಡೀಸೆಲ್ ಬೆಲೆ ಹೆಚ್ಚಾದ ಬಳಿಕ ಬಿಎಂಟಿಸಿ ಪ್ರಯಾಣದರ ಏರಿಕೆ ಮಾಡಲು ಮುಂದಾಗಿತ್ತು. ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರೇ ಬಿಎಂಟಿಸಿ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ ಎಂದು ಹೇಳಿದ್ದರು.

ಆರ್ಥಿಕ ಸಂಕಷ್ಟ,ಬಸ್ ನಿಲ್ದಾಣವನ್ನೇ ಅಡವಿಟ್ಟ ಬಿಎಂಟಿಸಿ ಆರ್ಥಿಕ ಸಂಕಷ್ಟ,ಬಸ್ ನಿಲ್ದಾಣವನ್ನೇ ಅಡವಿಟ್ಟ ಬಿಎಂಟಿಸಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಶೇ 18 ರಿಂದ 20ರಷ್ಟು ಪ್ರಯಾಣದರವನ್ನು ಏರಿಕೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಆದರೆ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪ್ರಸ್ತಾವನೆಗೆ ತಡೆ ನೀಡಿದ್ದಾರೆ.

ಬಿಎಂಟಿಸಿ ಎಸಿ ಬಸ್‌ಗಳ ದರ ಕಡಿಮೆ ಮಾಡಿದ್ರೂ ಪ್ರಯಾಣಿಕರು ಅಷ್ಟಕ್ಕಷ್ಟೇಬಿಎಂಟಿಸಿ ಎಸಿ ಬಸ್‌ಗಳ ದರ ಕಡಿಮೆ ಮಾಡಿದ್ರೂ ಪ್ರಯಾಣಿಕರು ಅಷ್ಟಕ್ಕಷ್ಟೇ

"ಸದ್ಯಕ್ಕೆ ಬಿಎಂಟಿಸಿ ಪ್ರಯಾಣ ದರ ಏರಿಕೆ ಬೇಡ. ಪ್ರಸ್ತಾವನೆಯನ್ನು ತಡೆ ಹಿಡಿಯಿರಿ" ಎಂದು ಸಾರಿಗೆ ಸಚಿವ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಸೂಚನೆ ಕೊಟ್ಟಿದ್ದಾರೆ. ಇದರಿಂದಾಗಿ ದರ ಏರಿಕೆಗೆ ತಾತ್ಕಾಲಿಕ ತಡೆ ಬಿದ್ದಿದೆ.

ಹೊಸ ಎಸಿ ಬಸ್‌ಗಳ ಖರೀದಿ ನಿಲ್ಲಿಸಿದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಹೊಸ ಎಸಿ ಬಸ್‌ಗಳ ಖರೀದಿ ನಿಲ್ಲಿಸಿದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ

ದರ ಏರಿಕೆ ಸುಳಿವು ಕೊಟ್ಟಿದ್ದ ಸಚಿವರು

ದರ ಏರಿಕೆ ಸುಳಿವು ಕೊಟ್ಟಿದ್ದ ಸಚಿವರು

"ಕಳೆದ ವರ್ಷ ಮೂರು ಸಾರಿಗೆ ನಿಗಮಗಳ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಆದರೆ, ಬಿಎಂಟಿಸಿ ಪ್ರಯಾಣದರ ಏರಿಕೆಯಾಗಿರಲಿಲ್ಲ. ಸಾರ್ವಜನಿಕರಿಗೆ ಹೊರೆಯಾಗದಂತೆ ಟಿಕೆಟ್ ದರ ಏರಿಕೆ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ" ಎಂದು ಫೆಬ್ರವರಿಯಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದರು.

ಪ್ರಯಾಣ ದರ 2014-15ರಲ್ಲಿ ಏರಿಕೆ

ಪ್ರಯಾಣ ದರ 2014-15ರಲ್ಲಿ ಏರಿಕೆ

ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು, "ಕಳೆದ ವರ್ಷ ಮೂರು ಸಾರಿಗೆ ನಿಗಮಗಳ ಪ್ರಯಾಣದರವನ್ನು ಶೇ 12ರಷ್ಟು ಏರಿಕೆ ಮಾಡಲಾಗಿತ್ತು. 2014-15ರ ಬಳಿಕ ಬಿಎಂಟಿಸಿ ಪ್ರಯಾಣ ದರ ಹೆಚ್ಚಳ ಮಾಡಿಲ್ಲ. ಮುಖ್ಯಮಂತ್ರಿಗಳು ಪ್ರಯಾಣದ ದರ ಹೆಚ್ಚಳದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ" ಎಂದು ಹೇಳಿದ್ದರು.

ಸುಮಾರು 700 ಕೋಟಿ ನಷ್ಟ

ಸುಮಾರು 700 ಕೋಟಿ ನಷ್ಟ

ಕೋವಿಡ್ ಪರಿಸ್ಥಿತಿ, ಇಂಧನಗಳ ಬೆಲೆ ಏರಿಕೆ ಹಿನ್ನಲೆಯಲ್ಲಿ ಬಿಎಂಟಿಸಿಗೆ 2020-21ನೇ ಸಾಲಿನಲ್ಲಿ ಸುಮಾರು 700 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. 2019-20ರಲ್ಲಿ ಸಂಸ್ಥೆ 540 ಕೋಟಿ ನಷ್ಟದಲ್ಲಿತ್ತು. ಆದ್ದರಿಂದ ದರ ಏರಿಕೆಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಸಹಜ ಸ್ಥಿತಿಗೆ ಇನ್ನೂ ಬಂದಿಲ್ಲ

ಸಹಜ ಸ್ಥಿತಿಗೆ ಇನ್ನೂ ಬಂದಿಲ್ಲ

ಲಾಕ್ ಡೌನ್ ಮುಕ್ತಾಯಗೊಂಡು ಜನ ಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಆದರೆ, ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಸಹಜ ಸ್ಥಿತಿಗೆ ಬಂದಿಲ್ಲ ಎಂದು ಸಂಸ್ಥೆ ಹೇಳುತ್ತಿದೆ. ಲಾಕ್ ಡೌನ್‌ಗೂ ಮೊದಲು ಬಸ್‌ಗಳಲ್ಲಿ ಪ್ರತಿದಿನ ಸುಮಾರು 35 ಲಕ್ಷ ಜನರು ಸಂಚಾರ ನಡೆಸುತ್ತಿದ್ದರು. ಪ್ರಸ್ತುತ 20 ಲಕ್ಷ ಜನರು ಸಂಚಾರ ನಡೆಸುತ್ತಿದ್ದಾರೆ.

English summary
Chief minister of Karnataka B. S. Yediyurappa directed transport minister Laxman Savadi to put hold on BMTC fare hike. Bengaluru Metropolitan Transport Corporation (BMTC) proposed to hike fare by 18 to 20 percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X