ರಾಜ್ಯಪಾಲರನ್ನು ಭೇಟಿಯಾದ ಕುಮಾರಸ್ವಾಮಿ: ಕುತೂಹಲದ ಹುಟ್ಟಿಸಿದ ಭೇಟಿ
ಬೆಂಗಳೂರು, ಜೂನ್ 08: ಸಿಎಂ ಕುಮಾರಸ್ವಾಮಿ ಅವರು ಇಂದು ದಿಢೀರನೆ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿ ಭಾರಿ ಕುತೂಹಲ ಮೂಡಿಸಿದೆ.
ರಾಜ್ಯಪಾಲರನ್ನು ಕುಮಾರಸ್ವಾಮಿ ಭೇಟಿ ಮಾಡಿರುವುದು ಭಾರಿ ಕುತೂಹಲ ಕೆರಳಿಸಿದ್ದು, ಯಾವ ಕಾರಣಕ್ಕಾಗಿ ರಾಜ್ಯಪಾಲರನ್ನು ಸಿಎಂ ಭೇಟಿ ಆಗಿದ್ದಾರೆ ಎಂಬ ಬಗ್ಗೆ ಚರ್ಚೆ ಪ್ರಾರಂಭವಾಗಿದೆ.
ಮೂವರು ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ಪಕ್ಕಾ
ಸಿಎಂ ಏನಾದರೂ ಸರ್ಕಾರದ ಬಗ್ಗೆ ಭಾರಿ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆಯೇ, ಅಥವಾ ಮಾಧ್ಯಮಗಳ ಮೇಲೆ ಗರಂ ಆಗಿರುವ ಸಿಎಂ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಸುಗ್ರೀವಾಜ್ಞೆಯನ್ನೇನಾದರೂ ಹೊರಡಿಸಲಿದ್ದಾರೆಯೇ? ಇನ್ನೂ ಹಲವು ಊಹಾಪೋಹಗಳು ಹರಿದಾಡುತ್ತಿವೆ.
ಸಚಿವ ಸಂಪುಟ ಪುನರ್‌ರಚನೆ ಕಸರತ್ತು ಬಹುತೇಕ ಅಂತ್ಯವಾಗಿದ್ದು, ಸಂಪುಟ ಪುನರ್ ರಚನೆಗೆ ರಾಜ್ಯಪಾಲರ ಸಮಯಾವಕಾಶ ಕೇಳಲು ಕುಮಾರಸ್ವಾಮಿ ರಾಜ್ಯಪಾಲರನ್ನು ಭೇಟಿ ಆಗಿದ್ದಾರೆ ಎನ್ನಲಾಗಿದ್ದು, ಈ ಸಾಧ್ಯತೆ ಸತ್ಯಕ್ಕೆ ಹತ್ತಿರವಾಗಿದೆ.