ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪ್ರವಾಹ, ಮೂಲಸೌಕರ್ಯ ಕುರಿತು ಟೀಕೆ ಮಾಡುತ್ತಿದ್ದಾಗ ಸ್ವಾಮೀಜಿಯಿಂದ ಮೈಕ್‌ ಕಿತ್ತುಕೊಂಡ ಬೊಮ್ಮಾಯಿ- ವಿಡಿಯೊ ನೋಡಿ

ಬೆಂಗಳೂರಿನ ಮಹದೇವಪುರದಲ್ಲಿ ಗುರುವಾರ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಟೀಕೆಗಳಿಗೆ ಪ್ರತಿಕ್ರಿಯಿಸಲು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಪಕ್ಕದಲ್ಲಿ ಕುಳಿತಿದ್ದ ಸ್ವಾಮೀಜಿ ಕೈಯಿಂದ ಮೈಕ್ ಅನ್ನು ಕಿತ್ತುಕೊಂಡಿದ್ದಾರೆ. ಏನಿದು ಘಟನೆ, ವಿಡಿಯೊ ಇದೆ

|
Google Oneindia Kannada News

ಬೆಂಗಳೂರು, ಜನವರಿ 27: ಬೆಂಗಳೂರಿನ ಮಹದೇವಪುರದಲ್ಲಿ ಗುರುವಾರ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಟೀಕೆಗಳಿಗೆ ಪ್ರತಿಕ್ರಿಯಿಸಲು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಪಕ್ಕದಲ್ಲಿ ಕುಳಿತಿದ್ದ ಸ್ವಾಮೀಜಿ ಕೈಯಿಂದ ಮೈಕ್ ಅನ್ನು ಕಿತ್ತುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಠಾಧೀಶ ಈಶ್ವರಾನಂದಪುರಿ ಸ್ವಾಮಿ ಅವರು ಕ್ಷೇತ್ರದಲ್ಲಿನ ಪ್ರವಾಹ ಮತ್ತು ಮೂಲಸೌಕರ್ಯಗಳ ಕೊರತೆಯ ಬಗ್ಗೆ ಪ್ರಸ್ತಾಪಿಸಿ, ರಾಜಕಾರಣಿಗಳೇ ಈ ತೊಂದರೆಗೆ ಕಾರಣ ಎಂದು ದೂರುತ್ತಿದ್ದರು. ಆ ವೇಳೆ, ಸ್ವಾಮೀಜಿ ಅವರ ಕೈಯಲ್ಲಿದ್ದ ಮೈಕ್‌ ಅನ್ನು ಕಿತ್ತುಕೊಂಡ ಬೊಮ್ಮಾಯಿ, 'ನಾನು ಕೇವಲ ಆಶ್ವಾಸನೆಗಳನ್ನು ನೀಡುವವನಲ್ಲ. ಹಿಂದೆ ಆಡಳಿತ ನಡೆಸಿದ ಮುಖ್ಯಮಂತ್ರಿಗಳ ಹಾಗೇ ನಾನು ನಡೆದುಕೊಳ್ಳುವುದಿಲ್ಲ. ನನ್ನ ಕೈಯಿಂದ ಆಗುವ ಕೆಲಸವನ್ನು ನಾನು ಮಾಡುತ್ತೇನೆ. ಆಗಿಲ್ಲವೆಂದರೆ, ಇಲ್ಲವೆಂದು ಹೇಳುತ್ತೇನೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಣ ಬಿಡುಗಡೆ ಮಾಡಿದ್ದೇನೆ' ಎಂದು ತಿಳಿಸಿದರು. ಕೆಲ ತಿಂಗಳ ಹಿಂದೆ ಮಹಾದೇವಪುರದಲ್ಲಿ ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದರಿಂದ ಇಲ್ಲಿನ ನಿವಾಸಿಗಳು ತತ್ತರಿಸಿ ಹೋಗಿದ್ದರು.

ರೈತಪರ ಹೋರಾಟ, ಜ್ಞಾನಾಧಾರಿತ ಅಭಿವೃದ್ಧಿಗೆ ಎಸ್.ಎಂ.ಕೃಷ್ಣ ಅವರು ದೊಡ್ಡ ಕಾಣಿಕೆ: ಬಸವಸರಾಜ ಬೊಮ್ಮಾಯಿ ರೈತಪರ ಹೋರಾಟ, ಜ್ಞಾನಾಧಾರಿತ ಅಭಿವೃದ್ಧಿಗೆ ಎಸ್.ಎಂ.ಕೃಷ್ಣ ಅವರು ದೊಡ್ಡ ಕಾಣಿಕೆ: ಬಸವಸರಾಜ ಬೊಮ್ಮಾಯಿ

ಸಿದ್ದರಾಮಯ್ಯ ವಿರುದ್ಧ ಬೊಮ್ಮಾಯಿ ವಾಗ್ದಾಳಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಕಾಂಗ್ರೆಸ್ ನಾಯಕರು ತಮ್ಮ ಮತ್ತು ತಮ್ಮ ಪಕ್ಷದ ಮೇಲಿನ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳನ್ನು ಹತ್ತಿಕ್ಕಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಲೋಕಾಯುಕ್ತದ ರೆಕ್ಕೆಗಳನ್ನು ಕತ್ತರಿಸಿ ಎಸಿಬಿ ಸ್ಥಾಪಿಸಿದರು ಎಂದು ವಾಗ್ದಾಳಿ ನಡೆಸಿದ್ದಾರೆ. ಜನಸಂಕಲ್ಪ ಯಾತ್ರೆ ಸಮಾವೇಶ ಉದ್ದೇಶಿಸಿ ಮಾತನಾಡಿದ ಬೊಮ್ಮಾಯಿ, ‘ಕಾಂಗ್ರೆಸ್ ಆಡಳಿತಾವಧಿಯಲ್ಲಿ ದಾಖಲಾದ ಎಲ್ಲ 59 ಭ್ರಷ್ಟಾಚಾರ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಸರ್ಕಾರ ಹಸ್ತಾಂತರಿಸಲಿದೆ' ಎಂದರು.

 ಸಿದ್ದರಾಮಯ್ಯ ವಿರುದ್ಧ ಬೊಮ್ಮಾಯಿ ವಾಗ್ದಾಳಿ

ಸಿದ್ದರಾಮಯ್ಯ ವಿರುದ್ಧ ಬೊಮ್ಮಾಯಿ ವಾಗ್ದಾಳಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಕಾಂಗ್ರೆಸ್ ನಾಯಕರು ತಮ್ಮ ಮತ್ತು ತಮ್ಮ ಪಕ್ಷದ ಮೇಲಿನ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳನ್ನು ಹತ್ತಿಕ್ಕಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಲೋಕಾಯುಕ್ತದ ರೆಕ್ಕೆಗಳನ್ನು ಕತ್ತರಿಸಿ ಎಸಿಬಿ ಸ್ಥಾಪಿಸಿದರು ಎಂದು ವಾಗ್ದಾಳಿ ನಡೆಸಿದ್ದಾರೆ. ಜನಸಂಕಲ್ಪ ಯಾತ್ರೆ ಸಮಾವೇಶ ಉದ್ದೇಶಿಸಿ ಮಾತನಾಡಿದ ಬೊಮ್ಮಾಯಿ, ‘ಕಾಂಗ್ರೆಸ್ ಆಡಳಿತಾವಧಿಯಲ್ಲಿ ದಾಖಲಾದ ಎಲ್ಲ 59 ಭ್ರಷ್ಟಾಚಾರ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಸರ್ಕಾರ ಹಸ್ತಾಂತರಿಸಲಿದೆ' ಎಂದರು.

 ಸಿದ್ದರಾಮಯ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು

ಸಿದ್ದರಾಮಯ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು

''ಸಿದ್ದರಾಮಯ್ಯ ಸರಕಾರ (2013-18) ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದಲ್ಲಿ ಮುಳುಗಿತ್ತು. ಅವರು ಮಕ್ಕಳ ಹಾಸಿಗೆ, ದಿಂಬುಗಳನ್ನು ಸಹ ಬಿಡಲಿಲ್ಲ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಬಿಲ್ ಹಗರಣದಲ್ಲಿ ಭಾಗಿಯಾಗಿದ್ದಾರೆ. ಬಿಡಿಎ, ಇಂಧನ ಮತ್ತು ಇತರೆ ಇಲಾಖೆಗಳಲ್ಲಿ ಹಲವಾರು ಭ್ರಷ್ಟಾಚಾರ ಪ್ರಕರಣಗಳು ನಡೆದಿವೆ' ಎಂದು ಬೊಮ್ಮಾಯಿ ಆರೋಪಿಸಿದರು. ‘ಸಿದ್ದರಾಮಯ್ಯ ಅವರು ಜನಪರ ಆಡಳಿತ ನೀಡಿದ್ದೇವೆ ಎಂದು ಹೇಳಿಕೊಳ್ಳುತ್ತಲೇ ಇದ್ದಾರೆ. ಆದರೆ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಏನಾಯಿತು? ಜನ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನೆಲಕಚ್ಚಲಿದೆ' ಎಂದು ಬೊಮ್ಮಾಯಿ ಹೇಳಿದರು.

 ಅನ್ನಭಾಗ್ಯ ಯೋಜನೆ ಬಗ್ಗೆ ಸುಳ್ಳು ಹೇಳಿಕೆ

ಅನ್ನಭಾಗ್ಯ ಯೋಜನೆ ಬಗ್ಗೆ ಸುಳ್ಳು ಹೇಳಿಕೆ

'ಅನ್ನಭಾಗ್ಯ ಯೋಜನೆ ಬಗ್ಗೆ ಸುಳ್ಳು ಹೇಳಿಕೆ ನೀಡಿರುವ ಸಿದ್ದರಾಮಯ್ಯ, ಕೇಂದ್ರದಿಂದ ನೀಡುತ್ತಿರುವ ಅಕ್ಕಿಗೆ ಬಗ್ಗೆ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಈಗ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ. ಅಕ್ಕಿಯ ಪ್ರಮಾಣವನ್ನು ಏಕೆ ಕಡಿಮೆ ಮಾಡಿದ್ದಾರೆ? ಅಧಿಕಾರದಲ್ಲಿದ್ದಾಗ 7 ಕೆಜಿಯಿಂದ 4 ಕೆಜಿಗೆ ಯೋಜನೆ ಏಕೆ ಹಮ್ಮಿಕೊಂಡರು? ಆಹಾರ ಧಾನ್ಯಗಳ ಕಳ್ಳತನದ ಬಗ್ಗೆ ತನಿಖೆ ನಡೆಸುತ್ತಿದ್ದ ಅಧಿಕಾರಿಯನ್ನು ಕೊಂದವರು ಯಾರು?," ಎಂದು ಮುಖ್ಯಮಂತ್ರಿ ಕೇಳಿದರು.

 ಜಾರಕಿಹೊಳಿ ವಿರುದ್ಧ ದೂರು

ಜಾರಕಿಹೊಳಿ ವಿರುದ್ಧ ದೂರು

'ಅವರು ತಮ್ಮ ರಾಜಕೀಯ ಮಾಡಲು ಜನರಲ್ಲಿ ಗೊಂದಲ ಸೃಷ್ಟಿಸಲು ಇಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ' ಎಂದು ಬೊಮ್ಮಾಯಿ ತಿಳಿಸಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವುದು ಗ್ಯಾರಂಟಿ ಎಂದ ಬೊಮ್ಮಾಯಿ, ‘ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸಿ ಕಾನೂನು ಪ್ರಕ್ರಿಯೆಗೆ ಅವಕಾಶ ಮಾಡಿಕೊಡಿ, ಎದುರಿಸಲು ಸಿದ್ಧರಿದ್ದೇವೆ' ಎಂದು ದೂರು ದಾಖಲಿಸುವ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. 'ಅಂತಹ ದೂರುಗಳನ್ನು ನೀಡಿದರೆ ಅವರ ವಿರುದ್ಧ ನೂರು ದೂರು ದಾಖಲಿಸಬಹುದು (ಕಾಂಗ್ರೆಸ್), ಇದು ಕೀಳುಮಟ್ಟದ ರಾಜಕಾರಣ, ಅಂತಿಮವಾಗಿ ಜನರೇ ತೀರ್ಮಾನಿಸುತ್ತಾರೆ, ಜನತಾ ನ್ಯಾಯಾಲಯವೇ ಇದಕ್ಕೆ ಉತ್ತರ ನೀಡಲಿದೆ' ಎಂದಿದ್ದಾರೆ. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಕೂಡ ಯಾವುದೇ ವ್ಯಕ್ತಿ ಹೇಳಿಕೆ ನೀಡಿದರೆ ಅದನ್ನು ಅವರ ಸಂಘಟನೆ ಅಥವಾ ಸರ್ಕಾರಕ್ಕೆ ಸಲ್ಲುವುದಿಲ್ಲ ಎಂದು ಹೇಳಿದೆ ಎಂಬುದಾಗಿ ಬೊಮ್ಮಾಯಿ ತಿಳಿಸಿದ್ದಾರೆ.

 ಕುಕ್ಕರ್ ವಿತರಣೆ

ಕುಕ್ಕರ್ ವಿತರಣೆ

ಕುಣಿಗಲ್‌ನಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರು ವಿತರಿಸುತ್ತಿದ್ದ ಕುಕ್ಕರ್‌ಗಳನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಬಿಲ್‌ಗಳಿಲ್ಲದ ಕಾರಣ ದಂಡ ವಿಧಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಇತರ ಕಡೆಯೂ ಇಂತಹ ಘಟನೆಗಳು ನಡೆದಿದ್ದು, ಸಂಪೂರ್ಣ ಮಾಹಿತಿ ಪಡೆಯುತ್ತೇವೆ. ಅವರ ವಿರುದ್ಧ ಖಂಡಿತವಾಗಿಯೂ ಪ್ರಕರಣ ದಾಖಲಿಸುತ್ತೇವೆ ಎಂದರು. 'ಚುನಾವಣೆಯಲ್ಲಿ ಸೋಲು ಖಚಿತವಾಗಿರುವ ಕಾರಣ ರಾಜಕೀಯ ಕಾರಣಗಳಿಗಾಗಿ ಕಾಂಗ್ರೆಸ್ ಸುಳ್ಳು ಮತ್ತು ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡಿ ಜನರನ್ನು ದಾರಿ ತಪ್ಪಿಸುತ್ತಿದೆ. ಅವರು ಇಂತಹ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಜನರಿಗೆ ಅರಿವಿದೆ. ಎಲ್ಲವೂ ಕಾನೂನು ಪ್ರಕಾರವೇ ನಡೆಯುತ್ತದೆ' ಎಂದು ಬೊಮ್ಮಾಯಿ ಹೇಳಿದ್ದಾರೆ.

English summary
Karnataka Chief Minister Basavaraj Bommai snatched the mic from the hands of Swamiji, who was sitting next to him, to respond to criticism at a public event in Mahadevpur, Bengaluru on Thursday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X