ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಸರ್ಕಾರದ ಯಾವ್ಯಾವ ಹಗರಣಗಳ ತನಿಖೆಗೆ ಸಿಎಂ ಸೂಚನೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 11: ಸಿದ್ದರಾಮಯ್ಯ ಸರ್ಕಾರದ ಒಟ್ಟು ಐದು ಹಗರಣಗಳ ತನಿಖೆಗೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಈ ಹಗರಣಗಳ ಬಗ್ಗೆ ಹಲವಾರು ದೂರುಗಳು ಬಂದಿರುವುದು ಮತ್ತು ಮಾಧ್ಯಮಗಳಲ್ಲಿ ವರದಿ ಬಂದಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ಯೋಜನೆ ಬಗ್ಗೆ ತನಿಖೆಗೆ ಸಿಎಂ ಆದೇಶಸಿದ್ದರಾಮಯ್ಯ ಸರ್ಕಾರದ ಯೋಜನೆ ಬಗ್ಗೆ ತನಿಖೆಗೆ ಸಿಎಂ ಆದೇಶ

ತನಿಖೆಗೆ ವಹಿಸಿರುವ ಹಗರಣಗಳು:

-ಕೃಷಿ ಭಾಗ್ಯ ಯೋಜನೆಯಲ್ಲಿ 914 ಕೋಟಿ ಮೊತ್ತದ ಹಗರಣ ನಡೆದಿರುವ ಆರೋಪ
-ತ್ಯಾಜ್ಯ ವಿಲೇವಾರಿ ಹೆಸರಲ್ಲಿ 1066 ಕೋಟಿ ಮೊತ್ತದ ಅವ್ಯವಹಾರ ಆರೋಪ
-ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳ ನಿರ್ಮಾಣದಲ್ಲಿ 410 ಕೋಟಿ ಅವ್ಯವಹಾರ ಆರೋಪ
-ತ್ಯಾಜ್ಯ ವಿಲೇವಾರಿ ವಾಹನಗಳ ಖರೀದಿ ಮತ್ತು ನಿರ್ವಹಣಾ ಗುತ್ತಿಗೆಯಲ್ಲಿ 96 ಕೋಟಿ ಮೊತ್ತದ ಟಿಪಿಎಸ್ ಹಗರಣ ನಡೆದಿರುವ ಆರೋಪ
-ಬೆಳ್ಳಳ್ಳಿ, ಬಾಗಲೂರು ಮತ್ತು ಮಿಟ್ಟಗಾನ ಹಳ್ಳಿ ಕ್ವಾರಿಗಳಿಗೆ ಲೈನರ್ ಗಳ ಅಳವಡಿಕೆ ಹೆಸರಿನಲ್ಲಿ 109 ಕೋಟಿ ರೂ ಹಗರಣ ನಡೆದಿರುವ ಆರೋಪವಿದೆ.

 ತ್ಯಾಜ್ಯ ವಿಲೇವಾರಿ ಹಗರಣ

ತ್ಯಾಜ್ಯ ವಿಲೇವಾರಿ ಹಗರಣ

96 ಕೋಟಿ ಮೊತ್ತದ ತ್ಯಾಜ್ಯ ವಿಲೇವಾರಿ ವಾಹನಗಳ ಖರೀದಿ ನಿರ್ವಹಣಾ ಗುತ್ತಿಗೆ (ಟಿಪಿಎಸ್) ಹಗರಣ ಹಾಗೂ ಬೆಳ್ಳಳ್ಳಿ, ಬಾಗಲೂರು, ಮಿಟ್ಟಗಾನಹಳ್ಳಿ ಕ್ವಾರಿಗಳಿಗೆ ಲೈನರ್‍ಗಳ ಅಳವಡಿಕೆ ಹೆಸರಿನಲ್ಲಿ ನಡೆದಿರುವ 109 ಕೋಟಿ ಹಗರಣಗಳ ಬಗ್ಗೆ ತನಿಖೆ ನಡೆಸಿ ಎರಡು ತಿಂಗಳೊಳಗೆ ಸಮಗ್ರ ವರದಿ ನೀಡುವಂತೆ ಆದೇಶಿಸಲಾಗಿದೆ.

 ಎನ್‌ಆರ್‌ ರಮೇಶ್ ಆರೋಪಿಸಿದ ಹಗರಣಗಳು ಯಾವುವು?

ಎನ್‌ಆರ್‌ ರಮೇಶ್ ಆರೋಪಿಸಿದ ಹಗರಣಗಳು ಯಾವುವು?

ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಆರೋಪಿಸಿದ್ದ 9014 ಕೋಟಿ ಮೊತ್ತದ ಕೃಷಿಭಾಗ್ಯ, 1066 ಕೋಟಿ ಮೊತ್ತದ ತ್ಯಾಜ್ಯ ವಿಲೇವಾರಿ ಹಗರಣ, 4010 ಕೋಟಿ ಮೊತ್ತದ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳ ನಿರ್ಮಾಣ ಹಗರಣ,

 ಕೃಷಿ ಭಾಗ್ಯ ಯೋಜನೆ ಹಗರಣ

ಕೃಷಿ ಭಾಗ್ಯ ಯೋಜನೆ ಹಗರಣ

ಕೃಷಿ ಭಾಗ್ಯ ಯೋಜನೆಗೆ ಸಂಬಂಧಿಸಿದಂತೆ 131 ತಾಲ್ಲೂಕುಗಳಲ್ಲಿ ಆಯಾ ಜಿಲ್ಲಾ ಕೃಷಿ ನಿರ್ದೇಶಕರುಗಳು ಖುದ್ದು ತಪಾಸಣೆ ನಡೆಸಿ ಪರಿಶೀಲನಾ ವರದಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶಿಸಿದ್ದಾರೆ.

 ಕೃಷಿ ಭಾಗ್ಯ ಯೋಜನೆಯಲ್ಲಿ ಅಕ್ರಮ, ಯಾರ್ಯಾರಿಗೆ ಸಂಕಷ್ಟ

ಕೃಷಿ ಭಾಗ್ಯ ಯೋಜನೆಯಲ್ಲಿ ಅಕ್ರಮ, ಯಾರ್ಯಾರಿಗೆ ಸಂಕಷ್ಟ

ಮಾಜಿ ಸಚಿವರಾದ ಕೃಷ್ಣಭೈರೇಗೌಡ, ಕೃಷಿ ಇಲಾಖೆ ಕಾರ್ಯದರ್ಶಿಗಳು, 26 ಜಿಲ್ಲೆಗಳ ಕೃಷಿ ಇಲಾಖೆ ಕೃಷಿ ನಿರ್ದೇಶಕರು, 131 ತಾಲ್ಲೂಕುಗಳ ಉಪನಿರ್ದೇಶಕರುಗಳು ಹಾಗೂ ತ್ಯಾಜ್ಯ ವಿಲೇವಾರಿ ಕಾರ್ಯಗಳಲ್ಲಿ ನಡೆದಿರುವ ಹಗರಣಗಳಿಗೆ ಸಂಬಂಧಿಸಿದಂತೆ ಕೆ.ಜೆ.ಜಾರ್ಜ್, 41 ಮಂದಿ ಕಸ ವಿಲೇವಾರಿ ಗುತ್ತಿಗೆದಾರರು, ಟಿಪಿಎಸ್ ಸಂಸ್ಥೆ ಮುಖ್ಯಸ್ಥರು, ರಾಣಾಜಾರ್ಜ್ ಪಾಲುದಾರ ಸಂದೀಪ್‍ರೆಡ್ಡಿ ಸೇರಿದಂತೆ ಹಲವು ಮಂದಿ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸಂಕಷ್ಟ ಎದುರಾಗಲಿದೆ.

 ತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿ ಮಾಡುತ್ತಿದ್ದ ವೆಚ್ಚವೆಷ್ಟು?

ತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿ ಮಾಡುತ್ತಿದ್ದ ವೆಚ್ಚವೆಷ್ಟು?

ವರ್ಷವೊಂದಕ್ಕೆ ತ್ಯಾಜ್ಯ ವಿಲೇವಾರಿಗೆ 1067 ಕೋಟಿ ರೂ.ಗಳನ್ನು ಬಿಬಿಎಂಪಿ ವೆಚ್ಚ ಮಾಡುತ್ತಿದೆ. ಇದರಲ್ಲಿ ಭಾರೀ ಹಗರಣವೇ ನಡೆದಿದೆ ಎಂದು ಎನ್.ಆರ್.ರಮೇಶ್ ಆರೋಪಿಸಿ ತನಿಖೆಗೆ ಆಗ್ರಹಿಸಿದ್ದಾರೆ.

ಸಂತ್ರಸ್ತರ ಮನೆ ನಿರ್ಮಾಣಕ್ಕೆ 5 ಲಕ್ಷ: ಯಡಿಯೂರಪ್ಪ ಭರವಸೆಸಂತ್ರಸ್ತರ ಮನೆ ನಿರ್ಮಾಣಕ್ಕೆ 5 ಲಕ್ಷ: ಯಡಿಯೂರಪ್ಪ ಭರವಸೆ

ಸುಮಾರು 4010 ಕೋಟಿ ರೂ.ನಷ್ಟು ಹಣ ವೆಚ್ಚ ಮಾಡಿ ಏಳು ತ್ಯಾಜ್ಯ ವೈಜ್ಞಾನಿಕ ಸಂಸ್ಕರಣಾ ಘಟಕಗಳನ್ನು ನಿರ್ಮಾಣ ಮಾಡಿದ್ದು, ಈ ಪೈಕಿ ಬಹುತೇಕ ಘಟಕಗಳು ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿವೆ. ಮೆಕ್ಯಾನಿಕಲ್, ಸ್ವೀಪರ್‍ಗಳು ಮತ್ತು ಕಾಂಪ್ಯಾಕ್ಟರ್‍ಗಳ ಖರೀದಿ ಮತ್ತು ನಿರ್ವಹಣೆಗೆ ನೂರಾರು ಕೋಟಿ ರೂ. ಅನುಗತ್ಯ ವೆಚ್ಚ ಮಾಡಲಾಗಿದೆ.

ಬಾಗಲೂರು, ಮಿಟ್ಟಗಾನಹಳ್ಳಿ, ಬೆಳ್ಳಳ್ಳಿ ಕ್ವಾರಿಗಳಿಗೆ ನೂರಾರು ಕೋಟಿ ರೂ. ವೆಚ್ಚ ಮಾಡಿ ಅಂತಾರಾಷ್ಟ್ರೀಯ ಗುಣಮಟ್ಟದ ಲೈನರ್‍ಗಳನ್ನು ಅಳವಡಿಸುವುದರಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಹಲವು ದಾಖಲೆಗಳ ಸಮೇತ ಆರೋಪಿಸಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತನಿಖೆಗೆ ಆದೇಶಿಸಿದ್ದಾರೆ.

English summary
Karnataka Chief Minister BS Yediyurappa Orders CBI probe Into 5 cases Including Agriculture, Garbage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X