12 ಉಗ್ರರ ಹೆಣ ಬಿದ್ದ ತಕ್ಷಣ ಬೆಂಗಳೂರಲ್ಲಿ ದಿಢೀರ್ ಭಾರಿ ಸದ್ದು... India Strikes Pakistan
ಪಾಪಿ ಪಾಕಿಸ್ತಾನದ ಉಗ್ರರ ಎದೆಯಲ್ಲಿ ಇವತ್ತು ಆತಂಕ ಶುರುವಾಗಿದೆ, ಭಾರತೀಯ ಸೇನೆ ಭರ್ಜರಿಯಾಗಿ ದಾಳಿ ಮಾಡಿ ಪಾಪಿ ಪಾಕಿಸ್ತಾನಕ್ಕೆ ಸರಿಯಾಗಿ ಬುದ್ಧಿ ಕಲಿಸಿದೆ. ಉಗ್ರರ ಪ್ರತಿ ಬಿಡಾರಗಳನ್ನೂ ಉಡೀಸ್ ಮಾಡಲು ಹೊಸ ಹೆಜ್ಜೆ ಇಟ್ಟಿದೆ ಇಂಡಿಯನ್ ಆರ್ಮಿ. ಅದರಲ್ಲೂ ಭಾರತೀಯ ಸೇನೆಯ ದಾಳಿ ಕಂಡು ಸ್ವತಃ ಪಾಕಿಸ್ತಾನದ ಸರ್ಕಾರವೇ ಶೇಕ್ ಆಗುತ್ತಿದ್ದು, ಈ ಸಮಯದಲ್ಲಿ ಭಾರತ & ಪಾಕಿಸ್ತಾನದ ನಡುವೆ ಯುದ್ಧದ ರಣಕಹಳೆ ಮೊಳಗಿದೆ. ಇಂತಹ ಸಂದರ್ಭದಲ್ಲೇ, 12 ಉಗ್ರರ ಹೆಣ ಬಿದ್ದ ತಕ್ಷಣ ಬೆಂಗಳೂರಲ್ಲಿ ದಿಢೀರ್ ಭಾರಿ ಸದ್ದು...
ಪಾಕಿಸ್ತಾನದ ವಿರುದ್ಧ ಸಂಪೂರ್ಣ ತಯಾರಿ ಮಾಡಿಕೊಂಡು ಈಗ ದಾಳಿಯನ್ನು ನಡೆಸಲಾಗಿದೆ. ಭಾರತ ಸೇನೆಯಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮೇಲೆ ದಾಳಿ ಮಾಡಲಾಗಿದೆ. 'ಆಪರೇಷನ್ ಸಿಂಧೂರ್' ಹೆಸರಲ್ಲಿ ಪಾಕಿಸ್ತಾನದ 9 ಪ್ರದೇಶಗಳ ಮೇಲೆ ಹೀಗೆ ಭಾರಿ ದೊಡ್ಡ ಪ್ರಮಾಣದಲ್ಲೇ ಕ್ಷಿಪಣಿ ದಾಳಿ ನಡೆಸಿ ತಕ್ಕಪಾಠ ಕಲಿಸಲಾಗಿದೆ. ಏಪ್ರಿಲ್ 22ರ ಮಂಗಳವಾರ ಉಗ್ರರ ದಾಳಿಯಲ್ಲಿ 26 ಭಾರತೀಯರು ಬಲಿಯಾದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಉಗ್ರರ ವಿರುದ್ಧ ರಿವೇಂಜ್ ತೆಗೆದುಕೊಂಡಿದೆ. ಇದೇ ಸಮಯದಲ್ಲಿ ಬೆಂಗಳೂರಿನಲ್ಲೂ ಭಾರಿ ಸದ್ದು ಮೊಳಗಿದೆ.

ರಾಜಧಾನಿ ಬೆಂಗಳೂರಲ್ಲೂ ಭಾರಿ ಸದ್ದು!
ಭಾರತೀಯ ಸೇನೆ ಜಗತ್ತಿನಲ್ಲೇ ಅತ್ಯಂತ ಬಲಿಷ್ಠ ಸೇನೆಗಳ ಪೈಕಿ ಒಂದಾಗಿದ್ದು, ಇದೀಗ ಭಾರತದ ಶತ್ರು ಪಾಕಿಸ್ತಾನ ವಿರುದ್ಧ ಭರ್ಜರಿಯಾಗಿ ಸೇಡಿಗೆ ಸೇಡು ತೀರಿಸಿಕೊಂಡಿದೆ ಇಂಡಿಯನ್ ಆರ್ಮಿ. ಪಾಕಿಸ್ತಾನ ಉದ್ಧಾರ ಆಗುವ ಕೆಲಸಕ್ಕಿಂತ ಹಾಳು ಮಾಡುವ ಕೆಲಸವನ್ನೇ ಹೆಚ್ಚಿಸಿದೆ. ಪಾಕಿಸ್ತಾನ ಉಗ್ರರ ಕಾರ್ಖಾನೆ ಆಗಿ, ಪದೇ ಪದೇ ಅಲ್ಲಿಂದಲೇ ಉಗ್ರರು ನುಸುಳಿ ಬರ್ತಾ ಇದ್ದಾರೆ. ಈಗಲೂ ಪಾಕಿಸ್ತಾನದ ಮೂಲಕ ನುಗ್ಗಿ ಬಂದಿದ್ದ ಉಗ್ರರು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ದಾಳಿಯ ನಡೆಸಿ 26 ಜನರನ್ನ ಕೊಲೆ ಮಾಡಿದ್ದರು. ಇದೇ ಕಾರಣಕ್ಕೆ ಇದೀಗ ಭಾರತೀಯ ಸೇನೆಯಿಂದ ರಿವೇಂಜ್ ಕಂಪ್ಲೀಟ್ ಆಗಿದೆ, ಈ ಸಮಯದಲ್ಲೇ ಬೆಂಗಳೂರಲ್ಲೂ ಭಾರಿ ಸದ್ದು ಮೊಳಗಿಬಿಟ್ಟಿದೆ!
ಬೆಂಗಳೂರಿನಲ್ಲಿ ಶಬ್ಧ ಬಂದಿದ್ದು ಯಾಕೆ?
ಅಂದಹಾಗೆ ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ದಾಳಿ ನಡೆಸಿ ಉಗ್ರರ ರುಂಡ ಚಂಡಾಡಿದ ಹಿನ್ನೆಲೆ ಬೆಂಗಳೂರಿನಲ್ಲಿ ಸಂಭ್ರಮಿಸಲಾಗಿದೆ. ಬೆಂಗಳೂರಿನ ಹಲವು ಭಾಗದಲ್ಲಿ ಪಟಾಕಿಯ ಸಿಡಿಸಿ, ಅಬ್ಬರದಿಂದ ಸಂಭ್ರಮ ಪಡಲಾಗಿದೆ. ಈ ಮೂಲಕ ಒಂದು ಕಡೆ ಪಾಕಿಸ್ತಾನದ ಗಡಿ ಭಾಗದಲ್ಲಿ ಭಾರತೀಯ ಸೇನೆಯಿಂದ ಬಾಂಬ್ ಹಾಕಿ ಕಾರ್ಯಾಚರಣೆ ಮಾಡಿದ್ದರೆ, ಇನ್ನೊಂದು ಕಡೆ ನಮ್ಮ ಬೆಂಗಳೂರಿನಲ್ಲಿ ಪಟಾಕಿ ಸಿಡಿಸುವ ಮೂಲಕ ಭರ್ಜರಿಯಾಗಿ ಸಂಭ್ರಮಿಸಲಾಗಿದೆ. ಈ ಮೂಲಕ ಭಾರತೀಯರು ಈ ಕಾರ್ಯಾಚರಣೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಹಾಗೇ ಇಂದು ಬೆಂಗಳೂರು ನಗರ ಮಾಕ್ ಡ್ರಿಲ್‌ಗೆ ಕೂಡ ಸಾಕ್ಷಿ ಆಗಲಿದ್ದು, ಯುದ್ಧ ಸಮಯಕ್ಕೆ ಮೊದಲು ನಾಗರಿಕರಿಗೆ ಈ ಟ್ರೈನಿಂಗ್ ನೀಡಲಾಗುತ್ತದೆ.












Click it and Unblock the Notifications