ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ಗೆ ಸಂಕಷ್ಟ?
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸುವಲ್ಲಿ ಗ್ಯಾರಂಟಿ ಯೋಜನೆ ಪ್ರಭಾವ ಎಷ್ಟು ಇತ್ತೋ, ಅಷ್ಟೇ ಪ್ರಭಾವ ಬೀರಿದ್ದು ಬಿಜೆಪಿ ವಿರುದ್ಧದ 40% ಕಮಿಷನ್ ಆರೋಪ. ಅಂದಿನ ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ಪಡೆದು ಪ್ರತಿ, ಕಾಮಗಾರಿಗಳನ್ನ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದರು ಕಾಂಗ್ರೆಸ್ ನಾಯಕರು. ಇದೇ ಆರೋಪ ಇದೀಗ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ಗೆ ದೊಡ್ಡ ಗಂಡಾಂತರ ತಂದಂತೆ ಕಾಣುತ್ತಿದೆ!
ಕರ್ನಾಟಕದ ಚುನಾಣೆಗೆ ಕಾಂಗ್ರೆಸ್ ನಾಯಕರು ಎರಡು ರೀತಿಯ ರಣತಂತ್ರ ರೂಪಿಸಿದ್ದರು. ಈ ಪೈಕಿ ಒಂದು ತಂತ್ರ ಗ್ಯಾರಂಟಿ ಯೋಜನೆಗಳನ್ನ ಹೈಪ್ ಮಾಡುವುದು, ಮತ್ತೊಂದ್ಕಡೆ ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದ ಭ್ರಷ್ಟಾಚಾರ ಆರೋಪವನ್ನು ದೊಡ್ಡ ಮಟ್ಟದಲ್ಲೇ ಪ್ರದರ್ಶನ ಮಾಡುವುದು. ಈ ಮೂಲಕ ರಾಜ್ಯದ ಮತದಾರರ ಗಮನ ಸೆಳೆಯುವಲ್ಲಿ ಕೂಡ ಕಾಂಗ್ರೆಸ್ ನಾಯಕರು ಗೆಲುವು ಕಂಡಿದ್ದರು. ಇದೀಗ ಅದೇ ಕಾಂಗ್ರೆಸ್ ನಾಯಕರಿಗೆ ದೊಡ್ಡ ಸಂಕಷ್ಟ ತಂದಿದೆ. ಅದರಲ್ಲೂ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಗೆ ಮತ್ತೊಮ್ಮೆ ಹೀಗೆ, ಸಮಸ್ಯೆಯೊಂದು ಸುತ್ತಿಕೊಂಡಿದೆ!

ರಾಹುಲ್ ಗಾಂಧಿಗೆ ಎದುರಾಯ್ತು ಸಮಸ್ಯೆ?
ಹಿಂದೆ ಕರ್ನಾಟಕದಲ್ಲಿ ಆಡಳಿತ ನಡೆಸಿದ್ದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿದ್ದ 40% ಕಮಿಷನ್ ಆರೋಪದ ಬಗ್ಗೆ, ಬಿಜೆಪಿ ನಾಯಕರು ಕೋರ್ಟ್ ಮೆಟ್ಟಿಲನ್ನೂ ಏರಿದ್ದರು. ಈ ಮೂಲಕ ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಸಮರ ಸಾರಿದ್ದರು. ಈ ಸಮರ ಈಗ ಫಲ ನೀಡಿದ್ದು, ಕಾಂಗ್ರೆಸ್ ನಾಯಕರಿಗೆ ದೊಡ್ಡ ಕಂಟಕ ಎದುರಾಗಿದೆ. ಇಷ್ಟೇ ಅಲ್ಲದೆ ರಾಹುಲ್ ಗಾಂಧಿ ಅವರಿಗೂ ಇದರಿಂದ ದೊಡ್ಡ ಸಮಸ್ಯೆ ತಲೆದೂರಿದೆ. ಹಾಗಾದರೆ ಏನದು ಸಮಸ್ಯೆ? ಕೋರ್ಟ್ ಹೇಳಿದ್ದು ಏನು? ತಿಳಿಯೋಣ ಬನ್ನಿ.
2024ರ ಲೋಕಸಭೆ ಚುನಾವಣೆಗೆ ಮುನ್ನ...
ಹೌದು, ಬಿಜೆಪಿ ಸರ್ಕಾರ ವಿರುದ್ಧದ 40 ಪರ್ಸೆಂಟ್ ಕಮಿಷನ್ ಆರೋಪದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿಗೆ ಬೆಂಗಳೂರು ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಅಲ್ಲದೆ ಇದರ ಜೊತೆ ಖುದ್ದು ಹಾಜರಾಗುವಂತೆ ಸೂಚನೆ ಕೂಡ ಕೊಟ್ಟಿದೆ. ಹೀಗೆ 2024ರ ಲೋಕಸಭೆ ಚುನಾವಣೆ ಹವಾ ಶುರುವಾಗುವ ಮೊದಲು, ಕಾಂಗ್ರೆಸ್ ನಾಯಕರಿಗೆ ಹೊಸ ಟೆನ್ಷನ್ ಕೂಡ ಎದುರಾಗಿದೆ.

'ಪೇ ಸಿಎಂ' ಪೋಸ್ಟರ್ ವಿವಾದ
2023ರ ಕರ್ನಾಟಕ ವಿಧಾನಸಭೆ ಚುನಾವಣೆ ಆರಂಭಕ್ಕೂ ಮೊದಲು 40% ಕಮಿಷನ್ ಆರೋಪ ದೊಡ್ಡ ಸದ್ದು ಮಾಡಿತ್ತು. ಅಲ್ಲದೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ 'ಪೇ ಸಿಎಂ' ಪೋಸ್ಟರ್‌ಗಳನ್ನ ಕೂಡ ಹಾಕಲಾಗಿತ್ತು. ಇದು ಸಾಲದು ಎನ್ನುವಂತೆ ಕಾಂಗ್ರೆಸ್ ನಾಯಕರು, ಬಿಜೆಪಿ ಸರ್ಕಾರ ಅಂದ್ರೆ ಬೊಮ್ಮಾಯಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಜಾಹೀರಾತು ನೀಡಿದ್ದರು. ಕರ್ನಾಟಕದ ದೊಡ್ಡ ದೊಡ್ಡ ನ್ಯೂಸ್ ಪೇಪರ್‌ಗಳ ಮೂಲಕ ಜಾಹೀರಾತು ನೀಡಿ, ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ರು. ಭ್ರಷ್ಟಾಚಾರ ರೇಟ್ ಕಾರ್ಡ್ ಕೂಡ ನೀಡಿದ್ದರು, ಇದು ವಿವಾದ ಎಬ್ಬಿಸಿತ್ತು.
ಮಾರ್ಚ್ 28ಕ್ಕೆ ಹಾಜರ್ ಆಗಬೇಕು!
ಇನ್ನು ಹೀಗೆ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಸರ್ಕಾರ ಹಾಗೂ ನಾಯಕರ ವಿರುದ್ಧ ಅಪಪ್ರಚಾರ ಮಾಡಿದ್ದಾರೆ, ಜಾಹೀರಾತಿನಿಂದ ಬಿಜೆಪಿ ಪಕ್ಷಕ್ಕೂ ಹಾನಿಯಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಕೋರ್ಟ್ ಮೆಟ್ಟಿಲೇರಿತ್ತು. ಬಿಜೆಪಿ ಪರ ವಕೀಲ ವಿನೋದ್ ಕುಮಾರ್ ಅವರು ವಾದ ಮಂಡಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ & ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಮನ್ಸ್ ನೀಡಿದೆ. ಈ ಮೂಲಕ ಮಾರ್ಚ್ 28 ಕ್ಕೆ ಖುದ್ದು ಹಾಜರಾಗಿ ಎಂದು ಈ ಮೂವರಿಗೂ ಸೂಚನೆ ನೀಡಲಾಗಿದೆ.












Click it and Unblock the Notifications