• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜ್ಯ ಸಚಿವ ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು

|

ಬೆಂಗಳೂರು, ಮೇ 27: ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ವೇಳೆ ಪ್ರಮುಖ ಆಡಳಿತಾತ್ಮಕ ವಿಷಯಗಳು ಚರ್ಚೆ ಮಾಡಲಾಗಿದ್ದು, ಅನೇಕ ಯೋಜನೆಗಳಿಗೆ ಒಪ್ಪಿಗೆ ಸೂಚಿಸಲಾಗಿದೆ.

ರಾಜ್ಯ ಸಚಿವ ಸಂಪುಟ ಸಭೆ ಬಳಿಕೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಿಂದಾಲ್ ಸಂಸ್ಥೆಗೆ ಜಮೀನು ನೀಡುವುದು ಹಿಂದಿನ ಸಂಪುಟದಲ್ಲಿ ತೆಗೆದುಕೊಂಡಿರುವ ತೀರ್ಮಾನ, ಈ ಸಂಪುಟ ಒಪ್ಪಿಗೆ ನೀಡಿಲ್ಲ ಎಂದು ಹೇಳಿದರು. ಆ ಮೂಲಕ ಭಾರೀ ವಿವಾದ ಉಂಟು ಮಾಡಿದ್ದ ಸರ್ಕಾರದ ನಿರ್ಧಾರವನ್ನು ತಾತ್ಕಲಿಕವಾಗಿ ತಡೆಹಿಡಿಯಲಾಗಿದೆ.

ಜಿಂದಾಲ್‌ಗೆ ಜಮೀನು ನೀಡುವ ಬಗ್ಗೆ ಮುಂದೆ ಏನ್ ಆಗುತ್ತದೆ ಎನ್ನುವ ಬಗ್ಗೆ ಗೊತ್ತಿಲ್ಲ. ಜಿಂದಾಲ್ ಕುರಿತು ಹೈಕೋರ್ಟ್‌ನಲ್ಲಿ ಪಿಐಎಲ್ ಇದೆ. ಸುಪ್ರೀಂ ಕೋರ್ಟ್‌ನಲ್ಲಿಯೂ ಪ್ರಕರಣ ಇದೆ. ಅಂದು ಕರ್ನಾಟಕ ಹೈಕೋರ್ಟ್ ಹೇಳಿತ್ತು. ಈಗ ಪಿಐಎಲ್ ಆಧಾರದಲ್ಲಿ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಕೋರ್ಟ್ ಏನು ತೀರ್ಪು ನೀಡುತ್ತದೆ ನೋಡಿ ಮುಂದೆ ತೀರ್ಮಾನ ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು

ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು

* 90 ಕೋಟಿ ರೂ. ವೆಚ್ಚದಲ್ಲಿ ಪಶು ಸಂಗೋಪನೆ ಇಲಾಖೆಯಿಂದ ಪಿಪಿಪಿ ಮಾದರಿಯಲ್ಲಿ ಹಾವೆರಿಯಲ್ಲಿ ಅಲ್ಟ್ರಾ ಪ್ಯಾಕೇಜ್ ಮಿಲ್ಕ್ ಪ್ರೊಡಕ್ಟ್ ಯುನಿಟ್ ಸ್ಥಾಪನೆ.
* ಕರ್ನಾಟಕ ಎಲೆಕ್ಟ್ರಿಕ್ ಎನರ್ಜಿ ಸ್ಟೊರೇಜ್ ಪಾಲಿಸಿ ಶೇ.15 ಬಂಡವಾಳ ಸಬ್ಸಿಡಿಯನ್ನು ಕೊಡುವುದು, ಐದು ಕಂತುಗಳಲ್ಲಿ ನೀಡುವುದು, ಗರಿಷ್ಠ 50 ಎಕರೆಗೆ ನಿಗದಿಪಡಿಸುವುದು.
* ಕೆಪಿಎಸ್‌ಸಿ ಮಾಜಿ ಅಧ್ಯಕ್ಷರ ತನಿಖೆಗೆ ಅವಕಾಶ ನೀಡಲಾಗಿಲ್ಲ, ಈ ಬಗ್ಗೆ ಅಸೆಂಬ್ಲಿಯಲ್ಲಿ ಚರ್ಚೆಯಾಗಿತ್ತು, ರಾಜ್ಯಪಾಲರೂ ಇದನ್ನು ತಿರಸ್ಕರಿಸಿದ್ದರು. ಸೆಕ್ರೆಟರಿ ಎಕ್ಸಾಮಿನೇಷನ್ ಅಥಾರಿಟಿ ಇರುತ್ತಾರೆ. ಅದಕ್ಕಾಗಿ ಈ ಪ್ರಸ್ತಾಪ ಕೈ ಬಿಡಲಾಗಿದೆ.
* ಹಾಸನ ಮೆಡಿಕಲ್ ಕಾಲೇಜಿನಲ್ಲಿ 52 ಹೊಸ ಪಿಜಿ ಸೀಟ್ ಹೆಚ್ಚಳಕ್ಕೆ ಒಪ್ಪಿಗೆ

ಆದಿ ಚುಂಚನಗಿರಿ ಮಠಕ್ಕೆ ಜಮೀನು

ಆದಿ ಚುಂಚನಗಿರಿ ಮಠಕ್ಕೆ ಜಮೀನು

* ಕಂದಾಯ ಇಲಾಖೆಯಲ್ಲಿ 18.07 ಎಕರೆ ಆದಿನಾರಾಯಣ ಹಳ್ಳಿ ದೊಡ್ಡಬಳ್ಳಾಪುರದಲ್ಲಿ ಹಿಂಡಗಿ ಆ್ಯಾಕ್ಟಿವ್ ಕಂಪನಿಗೆ ಗೋಮಾಳ ಜಮೀನು ನೀಡಲು ತೀರ್ಮಾನ
* ಆದಿ ಚುಂಚನಗಿರಿ ಮಠಕ್ಕೆ ಜಮೀನು ಹಿಂದಿನ ಸಂಪುಟದಲ್ಲಿ ತೀರ್ಮಾನವಾಗಿತ್ತು. ಬಸವನಗುಡಿ ಲ್ಯಾಂಡ್ 25 ವರ್ಷ ಲೀಸ್ ಮುಂದುವರಿಕೆ.
* ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮಸ್ಕಿ, ಇಂಡಿ, ಚಡಚಣ, ಕೋಲಾರಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿ.

ಉತ್ತರಹಳ್ಳಿ ರಸ್ತೆ ನಿರ್ಮಾಣಕ್ಕೆ 25.7 ಕೋಟಿ ರೂ.

ಉತ್ತರಹಳ್ಳಿ ರಸ್ತೆ ನಿರ್ಮಾಣಕ್ಕೆ 25.7 ಕೋಟಿ ರೂ.

* ಪಾಂಡವಪುರ, ನಾಗಮಂಗಲ, ಬಹುಗ್ರಾಮ ಕುಡಿಯುವ ನೀರು, ಹುಬ್ಬಳ್ಳಿ-ಧಾರವಾಡ, ಉಡುಪಿ, ಬೈಂದೂರು ಕ್ಷೇತ್ರಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿ
* ಹೊಳಲ್ಕೆರೆ ತಾಲೂಕಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ
* ಸಿಂಗಸಂದ್ರದಲ್ಲಿ 75 ಕೋಟಿ ರೂ. ವೆಚ್ಚದ ಕಮರ್ಷಿಯಲ್ ಕಾಂಪ್ಲೆಕ್ಸ್
* ಕಲಬುರಗಿಯಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್

* ಮೈಸೂರು ರಸ್ತೆಯಿಂದ ಉತ್ತರಹಳ್ಳಿ ರಸ್ತೆ ನಿರ್ಮಾಣಕ್ಕೆ 25.7 ಕೋಟಿ ರೂ.

ಹಾಸನದಲ್ಲಿ ಐದು ಪಾರ್ಕ್ ಅಭಿವೃದ್ಧಿಗೆ ಒಪ್ಪಿಗೆ

ಹಾಸನದಲ್ಲಿ ಐದು ಪಾರ್ಕ್ ಅಭಿವೃದ್ಧಿಗೆ ಒಪ್ಪಿಗೆ

* ಕನಕಪುರ ಸಿಟಿ ಮುನ್ಸಿಪಲ್ ಕೋರ್ಟ್ 7 ರಿಂದ 10 ರೂ. ಕೋಟಿಗೆ ಹೆಚ್ಚಳ
* ಕಲಬುರಗಿ ನಗರದಲ್ಲಿ 50-50 ಮಾದರಿಯಲ್ಲಿ ಬಿಲ್ಡಿಂಗ್
* ಹಾಸನದಲ್ಲಿ ಐದು ಪಾರ್ಕ್ ಅಭಿವೃದ್ಧಿಗೆ ಒಪ್ಪಿಗೆ
* ಅಣ್ಣಿಗೆರೆ, ಸುರಪುರ, ಶಹಾಪುರ, ಶಿವಮೊಗ್ಗ, ಹೊನ್ನಾಳಿ ಟೌನ್‌ಗಳ ಕುಡಿಯುವ ನೀರು ಯೋಜನೆ 770 ಕೋಟಿ ರೂ.
* ಎಲ್ಲ ಜಿಲ್ಲೆಗಳಲ್ಲಿ ಕೋವಿಡ್ ಮಕ್ಕಳ ವಾರ್ಡ್ ಆರಂಭಿಸುವುದು.
* ಆಕ್ಸಿಜನ್ ಪ್ರಮಾಣ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲು ತೀರ್ಮಾನ

ಮಕ್ಕಳಿಗೆ ಪ್ರತ್ಯೇಕ ಕೊಠಡಿ ನಿರ್ಮಾಣಕ್ಕೆ ಕ್ರಮ

ಮಕ್ಕಳಿಗೆ ಪ್ರತ್ಯೇಕ ಕೊಠಡಿ ನಿರ್ಮಾಣಕ್ಕೆ ಕ್ರಮ

* ಲಾಕ್‌ಡೌನ್ ಪ್ಯಾಕೇಜ್ ಸಮುದಾಯಕ್ಕೆ ದೊರೆತಿಲ್ಲ, ಅದನ್ನು ಆರ್ಥಿಕ ಇಲಾಖೆ ಜೊತೆ ಸಿಎಂ ಚರ್ಚೆ ಮಾಡಿ ನಂತರ ನಿರ್ಧಾರ ತೆಗೆದುಕೊಳ್ಳುತ್ತಾರೆ.

* ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳಿಗೆ ವಿಶೇಷ ಪರಿಹಾರ ನೀಡುವ ಬಗ್ಗೆ ಚರ್ಚೆಯಾಗಿದೆ. ಕೇಂದ್ರದಿಂದ ಈ ಬಗ್ಗೆ ಹೊಸ ಗೈಡ್‌ಲೈನ್ಸ್ ಬರಲಿದೆ. ಬಂದ ಬಳಿಕ ಅಂತಿಮ ನಿರ್ಧಾರ.

* ಸಚಿವ ಸಂಪುಟ ಸಭೆಯಲ್ಲಿ ಕೊರೊನಾ ವಿಚಾರ ಚರ್ಚೆಯಾಗಿದೆ

* ಮಕ್ಕಳ ಕೊರೊನಾ ಕೇಸ್ ಹೆಚ್ಚಳವಾಗುತ್ತಿರುವ ಹಿನ್ನೆಲೆ, ಮಕ್ಕಳಿಗೆ ಪ್ರತ್ಯೇಕ ಕೊಠಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.

  ಎಲ್ಲಾ High command ನಿರ್ಧಾರ !! Dhruvanarayan KPCC Working president | Oneindia Kannada
  ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಔಷಧಿ ಬಗ್ಗೆ ಚರ್ಚೆ

  ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಔಷಧಿ ಬಗ್ಗೆ ಚರ್ಚೆ

  * ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಔಷಧಿ ಬಗ್ಗೆಯೂ ಚರ್ಚೆಯಾಗಿದೆ. ಕಿಮ್ಸ್‌ನಲ್ಲಿ ವಯಲ್ ಬರುತ್ತಿಲ್ಲ. ಹೀಗಾಗಿ ಅಲ್ಲಿಗೆ ಹೆಚ್ಚು ವಯಲ್ ಕಳಿಸಲು ನಿರ್ಧಾರ ಮಾಡಲಾಗಿದೆ.

  * ಮೇಕೆದಾಟು ಯೋಜನೆ ವಿಚಾರವಾಗಿ ಸಿಎಂ ನೇತೃತ್ವದಲ್ಲಿ ಒಂದು ಸಭೆಯಾಗಿದೆ. ಅದಕ್ಕಾಗಿ ಪ್ರತ್ಯೇಕ ಕಮಿಟಿ ಕೂಡ ರಚನೆಯಾಗಿದೆ. ತಮಿಳುನಾಡಿನ ರೈತರು ಮೇಕೆದಾಟು ಬಳಿ ಹೋಗಿರೋದು ಸುದ್ದಿಯಾಗಿದೆ. ಕಚ್ಚಾ ರಸ್ತೆಯ ವೀಕ್ಷಣೆ ಮಾಡಿದ್ದಾರೆ. ಟೀಮ್ ಮಾಡಿ ಇನ್ಸ್‌ಪೆಕ್ಷನ್ ಮಾಡಲು ನಿರ್ಧರಿಸಲಾಗಿದೆ. ಎನ್‌ಜಿಟಿ ಮುಂದೆ ಚಾಲೆಂಜ್ ಮಾಡಬೇಕು. ಅದನ್ನು ಲೀಗಲ್ ಟೀಮ್ ನೋಡಿಕೊಳ್ಳುತ್ತಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

  English summary
  A significant State Cabinet meeting was held on Thursday under the leadership of CM BS Yediyurappa. Know More.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X