Get Updates
Get notified of breaking news, exclusive insights, and must-see stories!

Karnataka Budget 2023: ಇಂದಿನಿಂದ ಬಜೆಟ್ ಅಧಿವೇಶನ ಆರಂಭ; 7 ಮಸೂದೆಗಳು ಮಂಡನೆ

ರಾಜ್ಯದಲ್ಲಿ ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಇಂದಿನಿಂದ ಆರಂಭವಾಗುವ ಬಜೆಟ್ ಅಧಿವೇಶನ ಮಹತ್ವ ಪಡೆದುಕೊಂಡಿದೆ.

ಬೆಂಗಳೂರು, ಫೆಬ್ರವರಿ. 10: ಬಿಜೆಪಿ ಸರ್ಕಾರದ ಅಡಿಯಲ್ಲಿ ವಿಧಾನಮಂಡಲದ ಅಧಿವೇಶನವು ಶುಕ್ರವಾರದಿಂದ ಆರಂಭವಾಗಲಿದ್ದು, ರಾಜ್ಯ ವಿಧಾನಸಭಾ ಚುನಾವಣೆ ಕೂಡ ಹತ್ತಿರದಲ್ಲಿ ಇರುವ ಕಾರಣ ಈ ಅಧಿವೇಶನ ಮೂರು ಪಕ್ಷಗಳಿಗೂ ಮುಖ್ಯವಾಗಿದೆ.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಿ ಅಧಿವೇಶನವನ್ನು ವಾಕ್ಸಮರಕ್ಕೆ ಬಳಸಿಕೊಳ್ಳುವ ಸಾಧ್ಯತೆಯಿದ್ದು, ಈಗಾಗಲೇ ಎಲ್ಲಾ ಪಕ್ಷಗಳು ತಯಾರಿ ಮಾಡಿಕೊಂಡಿವೆ. ರಾಜ್ಯದಲ್ಲಿ ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಶುಕ್ರವಾರ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರಾದ ತಾವರಚಂದ್ ಗೆಹ್ಲೋಟ್ ಭಾಷಣ ಮಾಡುವುದರೊಂದಿಗೆ ಅಧಿವೇಶನ ಪ್ರಾರಂಭವಾಗುತ್ತದೆ. ಫೆಬ್ರವರಿ 24 ರವರೆಗೆ ಅಧಿವೇಶನ ನಡೆಯಲಿದೆ. ಈ ಚುನಾವಣಾ ಪೂರ್ವ ಬಜೆಟ್ ಅಧಿವೇಶನವು ಹದಿನೈದನೇ ರಾಜ್ಯ ವಿಧಾನಸಭೆಯ ಹದಿನೈದನೇ ವಿಧಾನಮಂಡಲದ ಅಧಿವೇಶನವಾಗಿದೆ.

Karnataka Budget 2023: Budget Session to begin on February 10, 7 bills to be tabled

ಫೆ.13 ರಿಂದ 16ರ ವರೆಗೆ ರಾಜ್ಯಪಾಲರ ಭಾಷಣಕ್ಕೆ ಧನ್ಯವಾದ ನಿರ್ಣಯವನ್ನು ವಿಧಾನಸಭೆ ಅಂಗೀಕರಿಸಲಿದ್ದು, ಫೆ.17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಬಜೆಟ್ ಮಂಡಿಸಲಿದ್ದು, ಇದಾದ ಬಳಿಕ ವಿಧಾನಸಭೆ ಪ್ರಕಾರ ಫೆ.24ರ ವರೆಗೆ ಬಜೆಟ್ ಮೇಲೆ ಚರ್ಚೆ ನಡೆಯಲಿದೆ.

ಚುನಾವಣಾ ತಯಾರಿಯಲ್ಲಿರುವ ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ಭ್ರಷ್ಟಾಚಾರದ ಆರೋಪಗಳು, ಹಣದ ಕೊರತೆ ಮತ್ತು ಉದ್ಯೋಗ ಹಗರಣಗಳು ಸೇರಿದಂತೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಲು ಅವಕಾಶವನ್ನು ಹುಡುಕುತ್ತಿವೆ.

ಇನ್ನು, ಅಧಿವೇಶನಕ್ಕೆ ಹಾಜರಾತಿ ಕಡಿಮೆಯಾಗುವ ಭಯದಿಂದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಎಲ್ಲಾ ಸದಸ್ಯರು ತಪ್ಪದೇ ಅಧಿವೇಶನದಲ್ಲಿ ಹಾಜರಿರಬೇಕು. ವಿಧಾನಸಭಾ ಚುನಾವಣೆ ಇದೆ. ಆದರೆ, ಪ್ರಚಾರಕ್ಕೆ ಇನ್ನೂ ಸಮಯವಿದೆ. ಸದಸ್ಯರು ವಿಧಾನಮಂಡಲ ಕಲಾಪಕ್ಕೆ ಗೈರಾಗಬಾರದು ಎಂದು ಮನವಿ ಮಾಡಿದ್ದಾರೆ.

Karnataka Budget 2023: Budget Session to begin on February 10, 7 bills to be tabled

ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲವಾರು ಚುನಾಯಿತ ಪ್ರತಿನಿಧಿಗಳ ವೇಳಾಪಟ್ಟಿಯನ್ನು ನೋಡಿದರೆ ಅವರು, ಅಧಿವೇಶನ ಬಿಟ್ಟು ಈಗಾಗಲೇ ಚುನಾವಣಾ ಚಟುವಟಿಕೆಗಳಲ್ಲಿ ನಿರತರಾಗಿರುವಂತೆ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.

ವಿಧಾನಸಭೆ ಕಾರ್ಯದರ್ಶಿ ಕಚೇರಿಗೆ ಇದುವರೆಗೆ 1,300 ಪ್ರಶ್ನೆಗಳು ಬಂದಿದ್ದು, ಅಧಿವೇಶನದಲ್ಲಿ ಚರ್ಚಿಸಲಾಗುವುದು. ಅವುಗಳಲ್ಲಿ ಕೆಲವು ಸದನದಲ್ಲಿ ಉತ್ತರಿಸಲಾಗುವುದು. ಉಳಿದವರಿಗೆ ಲಿಖಿತ ಉತ್ತರಗಳನ್ನು ನೀಡಲಾಗುವುದು.

*7 ಮಸೂದೆಗಳು ಮಂಡನೆಯಾಗಲಿವೆ*

ಆರು ಖಾಸಗಿ ವಿಶ್ವವಿದ್ಯಾಲಯಗಳ ವಿಧೇಯಕ ಸೇರಿದಂತೆ ಏಳು ವಿಧೇಯಕಗಳನ್ನು ಸದನದಲ್ಲಿ ಮಂಡಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಮಂಡನೆಯಾಗಲಿರುವ ಮಸೂದೆಗಳು

1. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ, 2022

2. ಕರ್ನಾಟಕ ರಾಜ್ಯ ಒಕ್ಕಲಿಗ ಸಂಘ ವಿಶ್ವವಿದ್ಯಾಲಯ ಮಸೂದೆ, 2022;

3. ಕಿಷ್ಕಿಂಧಾ ವಿಶ್ವವಿದ್ಯಾಲಯ ಮಸೂದೆ, 2022

4. ಜಿ ಎಂ ವಿಶ್ವವಿದ್ಯಾಲಯ ಮಸೂದೆ, 2022

5. ಟಿ ಜಾನ್ ಯೂನಿವರ್ಸಿಟಿ ಬಿಲ್, 2022

6. ಸಪ್ತಗಿರಿ NPS ವಿಶ್ವವಿದ್ಯಾಲಯ ಮಸೂದೆ, 2022

7. ಆಚಾರ್ಯ ವಿಶ್ವವಿದ್ಯಾಲಯ ಮಸೂದೆ, 2022

ಇದುವರೆಗೆ 15ನೇ ವಿಧಾನಸಭೆಯ ಅವಧಿಯಲ್ಲಿ 156 ದಿನಗಳ ಕಾಲ ಶಾಸಕಾಂಗ ಕಲಾಪ ನಡೆದಿದೆ. ಇನ್ನು, ವಿಧಾನಸೌಧದಲ್ಲಿ ಬಜೆಟ್ ಅಧಿವೇಶನದ ಹಿನ್ನೆಲೆ ಫೆಬ್ರವರಿ 10 ರಿಂದ 24ರ ವರೆಗೆ ವಿಧಾನಸೌಧದ ಸುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ ಪ್ರತಿ ದಿನ ಬೆಳಗ್ಗೆ 6 ರಿಂದ ಮಧ್ಯಾಹ್ನ 12ರ ವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+