ಸಿದ್ದು ಬಜೆಟ್ ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?
ಬೆಂಗಳೂರು, ಫೆ.14 : ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಸಿಎಂ ಸಿದ್ದರಾಮಯ್ಯ 2014-15ರ ಬಜೆಟ್ ಮಂಡಿಸಿದ್ದಾರೆ. ಬೆಂಗಳೂರು ನಗರದ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡುತ್ತೇ ಎಂದು ಹೇಳಿದ್ದ ಸಿದ್ದರಾಮಯ್ಯ ಬೆಂಗಳೂರಿಗೆ ಬಜೆಟ್ ನಲ್ಲಿ ನೀಡಿದ್ದೇನು?
ನಮ್ಮ ಮೆಟ್ರೋ ಯೋಜನೆ ಮತ್ತು ಬೆಂಗಳೂರು ನಗರದ ಕಸದ ಸಮಸ್ಯೆ ನಿವಾರಿಸಲು ಸಿದ್ದರಾಮಯ್ಯ ತಮ್ಮ ಬಜೆಟ್ ನಲ್ಲಿ ಆದ್ಯತೆ ನೀಡಿದ್ದಾರೆ. ಹೊಸ ಪಾರ್ಕಿಂಗ್ ನೀತಿ ಅನುಷ್ಠಾನಗೊಳಿಸಲು ಸಿಎಂ ಅನುದಾನ ನೀಡಿದ್ದಾರೆ. ಕೆಂಪೇಗೌಡ ಬಡಾವಣೆಯ ನಿವೇಶನಗಳನ್ನು ಹಂಚಿಕೆ ಮಾಡುವುದಾಗಿಯೂ ಪ್ರಕಟಿಸಿದ್ದಾರೆ. [ಸಿದ್ದು ಬಜೆಟ್ ಮುಂಖ್ಯಾಶಗಳು]

ಬೆಂಗಳೂರಿಗೆ ಸಿಕ್ಕಿದ್ದಿಷ್ಟು.
* ನಮ್ಮ ಮೆಟ್ರೋ ಎರಡನೇ ಹಂತಕ್ಕಾಗಿ 24,000 ಕೋಟಿ ರು ನೀಡಿಕೆ
* 200 ಕೋಟಿ ವೆಚ್ಚದಲ್ಲಿ ರೇಲ್ವೆ ಕ್ರಾಸಿಂಗ್ ಬಳಿ ಸೇತುವೆ
* 39 ಕೆರೆಗಳ ಪುನಶ್ಚೇತನಕ್ಕೆ ಕ್ರಮ
* 10 ಕೋಟಿ ರು. ವೆಚ್ಚದಲ್ಲಿ 54 ಕೆರೆಗಳಿಗೆ ತಂತಿಬೇಲಿ
* ದೇವನಹಳ್ಳಿಯಲ್ಲಿ ವಿಶೇಷ ಆರ್ಥಿಕ ವಲಯದಡಿಯಲ್ಲಿ ಆಭರಣ ಪಾರ್ಕ್
* ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ನಿರ್ಮಾಣ
* ಬಿಡಿಎನಿಂದ ಕಡಿಮೆ ವೆಚ್ಚದ 8000 ಫ್ಲಾಟ್ ಗಳ ನಿರ್ಮಾಣ
* ಚಾಲುಕ್ಯ ಸರ್ಕಲ್ ನಿಂದ ಹೆಬ್ಬಾಳ ಜಂಕ್ಷನ್ ತನಕ ಎಲಿವೇಟೆಡ್ ಕಾರಿಡಾರ್
* ಕೆಂಪೇಗೌಡ ಲೇಔಟ್ 5000 ನಿವೇಶನಕ್ಕಾಗಿ ಮಾರ್ಚ್ ನಿಂದ ಅರ್ಜಿ ಆಹ್ವಾನ
* ಗ್ರೇಡ್ ಸಪರೇಟರ್ ನಿರ್ಮಾಣ ಕಾಮಗಾರಿಗೆ 200 ಕೋಟಿ
* ಘನ ತ್ಯಾಜ್ಯ ಸಂಸ್ಕರಣೆ, ವಿಲೇವಾರಿಗೆ 100 ಕೋಟಿ ರೂ.
* 100 ಕೋಟಿ ವೆಚ್ಚದಲ್ಲಿ ಪಾದಚಾರಿ ಮಾರ್ಗ ಅಭಿವೃದ್ಧಿ
* ಮಹಾರಾಣಿ ವಾಣಿಜ್ಯ ಮತ್ತು ಎಂಬಿಎ ಕಾಲೇಜು ಹಾಗೂ ವಸತಿ ನಿಲಯ ಸ್ಥಾಪನೆ
* ಬಿಬಿಎಂಪಿ ವಲಯದ 110 ಹಳ್ಳಿಗಳಿಗೆ ಕುಡಿಯುವ ನೀರು
* ಜಕ್ಕೂರು ವಿಮಾನ ನಿಲ್ದಾಣಕ್ಕೆ 2 ಕೋಟಿ ಅನುದಾನ
* ಬೆಂಗಳೂರಿನ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅನಾಹುತ ತಡೆಗೆ ಅಗತ್ಯ ಕ್ರಮ
* ಸಗಮ ಸಂಚಾರಕ್ಕಾಗಿ ಆಯ್ದ ಆರ್ಟೀರಿಯಲ್, ಸಬ್ ಆರ್ಟೀರಿಯಲ್ ರಸ್ತೆ ಅಭಿವೃದ್ಧಿಗೆ 500 ಕೋಟಿ
* 300 ಕೋಟಿ ವೆಚ್ಚದಲ್ಲಿ ಪ್ರಮುಖ ರಸ್ತೆಗಲ ಅಗಲೀಕರಣ
* 100 ಕೋಟಿ ವೆಚ್ಚದಲ್ಲಿ ಪ್ರಮುಖ ಜಂಕ್ಷನ್ ಗಳ ಅಭಿವೃದ್ಧಿ
* ಪಾಲಿಕೆ ವ್ಯಾಪ್ತಿಯಲ್ಲಿರುವ ನಗರಸಭೆ, ಪುರಸಭೆಗಳ ಅಭಿವೃದ್ಧಿಗೆ 250 ಕೋಟಿ ರೂ
* ಫೆರಿಫೆರಲ್ ರಸ್ತೆ ನಿರ್ಮಾಣಕ್ಕೆ ಜಪಾನ್‍ನ ಜೈಕಾ ಸಾಲ - 5800 ಕೋಟಿ
* ನರ್ಮ್ ಯೋಜನೆಯಡಿ ಗೊರಗುಂಟೆ ಪಾಳ್ಯದ ಕೆಳಸೇತುವೆ ನಿರ್ಮಾನಕ್ಕೆ 125 ಕೋಟಿ
* ಬಸವೇಶ್ವರ ವೃತ್ತದಿಂದ ಹೆಬ್ಬಾಳ ಜಂಕ್ಷನ್‍ವರೆಗೆ ಮೇಲ್ಮಟ್ಟದ ರಸ್ತೆಗೆ 1100 ಕೋಟಿ
* ನಗರದ 74 ಕಿ.ಮೀ. ಒಳಚರಂಡಿ ಕೊಳವೆ ಮಾರ್ಗಗಳ ಪುನರುಜ್ಜೀವನ ಕಾಮಗಾರಿ
* ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣ ಸಾಮರ್ಥ್ಯ ಹೆಚ್ಚಳ [180 ರಿಂದ 300 ದಶಲಕ್ಷ ಲೀ]
* ಪೀಣ್ಯ-ಸಂಪಿಗೆ ರಸ್ತೆ ಮೆಟ್ರೋ ಶೀಘ್ರವೆ ಸಾರ್ವಜನಿಕ ಸೇವೆಗೆ
* ದಾಸನಪುರ ಟ್ರಕ್ ಟರ್ಮಿನಲ್ ಈ ವರ್ಷ ಲೋಕಾರ್ಪಣೆ
* ಬೆಂಗಳೂರಿನ ಚೊಕ್ಕನಹಳ್ಳಿಯಲ್ಲಿ ವಾಹನ ಅರ್ಹತಾ ತಪಾಸಣಾ ಕೇಂದ್ರ ಸ್ಥಾಪನೆ
* ಕೇಂದ್ರ ಸರ್ಕಾರದ ಸಹಯೋಗದಲ್ಲಿ ಬೆಂಗಳೂರು ಅಥವಾ ಮೈಸೂರಿನಲ್ಲಿ ಗ್ರೀನ್‍ಫೀಲ್ಡ್ ಕ್ಲಸ್ಟರ್ ಸ್ಥಾಪನೆ
* ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲರ ಭವನದ 3ನೇ ಹಂತದ ಕಟ್ಟಡ ನಿರ್ಮಾನಕ್ಕೆ 2 ಕೋಟಿ












Click it and Unblock the Notifications