ಡಿಕೆಶಿಗೆ ಮುಖಭಂಗ : ಬಿಜೆಪಿ ಸಂಸದರಿಂದ ದುಬಾರಿ ಐಫೋನ್ ವಾಪಸ್!

ಬೆಂಗಳೂರು, ಜುಲೈ 18 : ಶ್ರೀಮಂತ ಸಂಸದ ರಾಜೀವ್ ಚಂದ್ರಶೇಖರ್ ಅವರನ್ನು ಹೊರತುಪಡಿಸಿ ಎಲ್ಲ ಬಿಜೆಪಿ ಸಂಸದರು, ರಾಜ್ಯಸಭಾ ಸದಸ್ಯರು ಐಫೋನ್ ಕಳಿಸಿದ್ದಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ ಎಂದಿದ್ದ 'ಪವರ್ಫುಲ್' ರಾಜಕಾರಣಿ ಡಿಕೆ ಶಿವಕುಮಾರ್ ಅವರಿಗೆ ಭಾರೀ ಮುಖಭಂಗವಾಗುವಂಥ ಸುದ್ದಿ ಇಲ್ಲಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ಅನಂತ್ ಕುಮಾರ್ ಸೇರಿದಂತೆ ಎಲ್ಲ ಬಿಜೆಪಿ ಸಂಸದರು ಮತ್ತು ರಾಜ್ಯಸಭಾ ಸದಸ್ಯರು, ತಮಗೆ ಕಳುಹಿಸಲಾಗಿರುವ ದುಬಾರಿ ಐಫೋನ್ ಎಕ್ಸ್ ಮೊಬೈಲನ್ನು ಲೆದರ್ ಬ್ಯಾಗ್ ಸಮೇತ ಡಿಕೆ ಶಿವಕುಮಾರ್ ಅವರಿಗೆ ವಾಪಸ್ ಕಳುಹಿಸಲು ನಿರ್ಧರಿಸಿದ್ದಾರೆ.

Karnataka BJP MPs to return costly iPhone back to the sender

"ಪ್ರೀತಿಯ ಕುಮಾರಸ್ವಾಮಿಯವರೆ, ನನ್ನ ಬೆಂಗಳೂರು ಕಚೇರಿಗೆ ಕಾವೇರಿ ವಿವಾದಕ್ಕೆ ಸಂಬಂಧಿಸಿದ ಪೇಪರ್ ಗಳು ಮತ್ತು ದುಬಾರಿ ಮೊಬೈಲ್ ಬಂದಿದೆ. ಅದನ್ನು ನನ್ನ ಕಾರ್ಯದರ್ಶಿ ಸೋಮವಾರವೇ ನನ್ನ ಅಣತಿಯ ಪ್ರಕಾರ ವಾಪಸ್ ಕಳಿಸಿದ್ದಾರೆ. ಸಾರ್ವಜನಿಕ ಹಣವನ್ನು ಹೀಗೆ ಪೋಲು ಮಾಡುವುದು ಪಾಪ. ಎಲ್ಲ ಬಿಜೆಪಿ ಸಂಸದರೂ ಮೊಬೈಲನ್ನು ಹಿಂದಿರಿಗಿಸುತ್ತಿದ್ದಾರೆ" ಎಂದು ಅನಂತ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದಲ್ಲಿ ಸಂಬಳ ಸಿಗದೆ, ಜೀವನ ನಿರ್ವಹಿಸಲಾಗದೆ ಪೌರ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರು ಕೂಡ ಪ್ರತಿನಿತ್ಯ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅಲ್ಲದೆ, ಭಾರೀ ಮಳೆಯಿಂದಾಗಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರೈತರು ಮತ್ತು ಇತರ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಕರ್ನಾಟಕದಲ್ಲಿ ಸಂಕಷ್ಟಕ್ಕೀಡಾಗಿರುವ ಎಲ್ಲ ಜನರಿಗೆ ಈ ದುಂದುವೆಚ್ಚದ ಹಣವನ್ನು ನೀಡಿರಿ ಎಂದು ಅನಂತ್ ಕುಮಾರ್ ಆಗ್ರಹಿಸಿದ್ದಾರೆ.

ಡಿಕೆ ಶಿವಕುಮಾರ್ ಅವರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಈ ಐಫೋನ್ ಎಕ್ಸ್ ಗೆ ತತ್ಸಮಾನವಾದ 43 ಲಕ್ಷ ರು. ಹಣವನ್ನು ಕರ್ನಾಟಕದ ರೈತರಿಗೆ ನೀಡಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+