Get Updates
Get notified of breaking news, exclusive insights, and must-see stories!

ಮತದಾರರ ಪಟ್ಟಿಯಿಂದ ಅಲ್ಪಸಂಖ್ಯಾತರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಚುನಾವಣಾ ಅಧಿಕಾರಿಗೆ ದೂರು

2023 ರ ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗವು ಜನವರಿ 15 ರಂದು ಬಿಡುಗಡೆ ಮಾಡಿದೆ.

ಬೆಂಗಳೂರು, ಫೆಬ್ರವರಿ. 15: ಶಿವಾಜಿನಗರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯಿಂದ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಹೆಚ್ಚಿನ ಸಂಖ್ಯೆಯ ಹೆಸರುಗಳನ್ನು ಅಳಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಬೆಂಗಳೂರು ಮಹಾಧರ್ಮಕ್ಷೇತ್ರದ (Archdiocese) ಪರವಾಗಿ ನಿಯೋಗವೂ ಮಂಗಳವಾರ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅವರಿಗೆ ದೂರು ಸಲ್ಲಿಸಿದೆ.

ಶಿವಾಜಿನಗರ ಕ್ಷೇತ್ರದ ಒಟ್ಟು 9,195 ಹೆಸರುಗಳ ಪೈಕಿ ಸುಮಾರು 8,000 ಹೆಸರುಗಳು ಕಾಣೆಯಾಗಿದ್ದು, ಇವುಗಳಲ್ಲಿ ಎಸ್‌ಸಿ (ಪರಿಶಿಷ್ಟ ಜಾತಿ), ಹಿಂದುಳಿದ ವರ್ಗಗಳು ಮತ್ತು ಮುಸ್ಲಿಂ ಸಮುದಾಯಗಳ ಮತದಾರರು ಸೇರಿದ್ದಾರೆ ಎಂದು ನಿಯೋಗ ಆರೋಪಿಸಿದೆ.

Karnataka Assembly Elections 2023: Bangalore Archdiocese alleges voter name deleted in shivajinagar

"193 ಬೂತ್‌ಗಳಲ್ಲಿ 91 ಬೂತ್‌ಗಳನ್ನು ಆಯ್ದುಕೊಳ್ಳಲಾಗಿದ್ದು, ಮತದಾರರ ಪಟ್ಟಿಯಲ್ಲಿರುವ ಹೆಸರುಗಳನ್ನು ಅಳಿಸಲಾಗಿದೆ. ಈ ಬೂತ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ವಾಸಿಸುತ್ತಿದ್ದಾರೆ" ಎಂದು ದೂರಿನಲ್ಲಿ ತಿಳಿಸಲಾಗಿದೆ.

2023 ರ ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗವು ಜನವರಿ 15 ರಂದು ಬಿಡುಗಡೆ ಮಾಡಿದೆ.

"ನಾವು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅವರಿಗೆ ತಿಳಿಸಿದ್ದೇವೆ. ಶಿವಾಜಿನಗರ ಕ್ಷೇತ್ರದಲ್ಲಿ 9 ಸಾವಿರ ಹೆಸರು ನಾಪತ್ತೆಯಾಗಿದೆ. ಈ ಹೆಸರುಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮತದಾರರದ್ದು ಎಂದು ಬೆಂಗಳೂರು ಮಹಾಧರ್ಮಕ್ಷೇತ್ರ ವಕ್ತಾರ ಜೆಎ ಕಾಂತರಾಜ್ ತಿಳಿಸಿದ್ದಾರೆ.

Karnataka Assembly Elections 2023: Bangalore Archdiocese alleges voter name deleted in shivajinagar

ಇದರ ಜೊತೆಗೆ ಕೋರಮಂಗಲದ ಮತದಾರರ ಪಟ್ಟಿಯಲ್ಲೂ ಅವರ ಹೆಸರು ನಾಪತ್ತೆಯಾಗಿದೆ ಎಂದು ಕಾಂತರಾಜ್ ಆರೋಪಿಸಿದ್ದಾರೆ.

" ಕೋರಮಂಗಲದಲ್ಲಿ ನನ್ನ ಹೆಸರ, ನ್ನ ಹೆಂಡತಿಯ ಹೆಸರೂ ಕಾಣೆಯಾಗಿದೆ. ನಾನು 20 ವರ್ಷಗಳಿಂದ ಇಲ್ಲಿಯೇ ಇದ್ದೇನೆ. ಇದನ್ನು ಸ್ವತಃ ಮುಖ್ಯ ಚುನಾವಣಾಧಿಕಾರಿ ಪರಿಶೀಲಿಸಿದ್ದಾರೆ. ಕೋರಮಂಗಲದಲ್ಲಿ 20 ವರ್ಷಗಳಿಂದ ತೆರಿಗೆ ಕಟ್ಟುತ್ತಿದ್ದೇನೆ. ಮತದಾನದ ದಿನವೇ ಇದು ಗಮನಕ್ಕೆ ಬಂದಿದ್ದರೆ ನಾನು ಸುಮ್ಮನೆ ಇರಬೇಕಾಗಿತ್ತು. ಹೀಗೆ ಈಗ ಸಾವಿರಾರು ಜನರು ಆ ಅವಕಾಶವನ್ನು ಕಳೆದುಕೊಂಡಿರಬಹುದು" ಎಂದು ಹೇಳಿದ್ದಾರೆ.

ಇನ್ನು, ಕಳೆದ ತಿಂಗಳು ಶಿವಾಜಿನಗರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ತಮ್ಮ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 9,195 ಮತದಾರರನ್ನು, ಅದರಲ್ಲೂ8000 ಅಲ್ಪಸಂಖ್ಯಾತ ಸಮುದಾಯಗಳ ಮತದಾರರನ್ನು ಮರು ಪರಿಶೀಲಿಸುವ ನಿರ್ಧಾರವನ್ನು ಪ್ರಶ್ನಿಸಿದ್ದರು. ಜನವರಿ 15 ರಂದು ಕ್ಷೇತ್ರದ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇದರಲ್ಲಿ 9,195 ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ತಯಾರಿ ನಡೆಸಲಾಗುತ್ತಿದೆ . ಅಂತಿಮ ಮತದಾರರ ಪಟ್ಟಿಯನ್ನು ಘೋಷಿಸಿದ ನಂತರವೂ ಮತ್ತೆ 9,195 ಮತದಾರರನ್ನು ಪಟ್ಟಿಯಿಂದ ಕೈಬಿಡಲು ನೋಟಿಸ್ ನೀಡಲಾಗಿದೆ ಎಂದು ಆರೋಪಿಸಿ, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+