ನೀವೂ ಮತ ಚಲಾಯಿಸಿ ಎಂದು ಅನಿಲ್ ಕುಂಬ್ಳೆ ಮನವಿ
ಬೆಂಗಳೂರು, ಮೇ 12: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಮಾಜಿ ಕೋಚ್ ಅನಿಲ್ ಕುಂಬ್ಳೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
ಬೆಳಿಗ್ಗೆ 9 ಗಂಟೆಗೆ ತಮ್ಮ ಕುಟುಂಬದ ಸದಸ್ಯರ ಜತೆಗೆ ಬಸವನಗುಡಿಯಲ್ಲಿರುವ ಮತಗಟ್ಟೆಗೆ ಬಂದ ಅನಿಲ್ ಕುಂಬ್ಳೆ, ಸರದಿಯಲ್ಲಿ ನಿಂತು ಮತ ಚಲಾಯಿಸಿದರು.
In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು
ನಿಮ್ಮ ಮತ ಚಲಾಯಿಸಿ! #ಕರ್ನಾಟಕಚುನಾವಣೆ2018 pic.twitter.com/vpnkCjxEWl
— Anil Kumble (@anilkumble1074) 12 May 2018
ಮತಚಲಾವಣೆಗೆ ಸಾಲಿನಲ್ಲಿ ನಿಂತಿದ್ದ ಕುಂಬ್ಳೆ, ಕುಟುಂಬದ ಸದಸ್ಯರ ಜತೆ ಸೆಲ್ಫಿ ತೆಗೆದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮತ ಹಾಕಲು ನಮ್ಮ ಸರದಿಗಾಗಿ ಕಾಯ್ದಿದ್ದೇವೆ. ನಾಗರಿಕರಾಗಿ ನಿಮ್ಮ ಹಕ್ಕುಗಳನ್ನು ಚಲಾಯಿಸಿ ಎಂದು ಎಲ್ಲರಿಗೂ ಮನವಿ ಮಾಡುತ್ತಿರುವುದಾಗಿ ಕುಂಬ್ಳೆ ಹೇಳಿದ್ದಾರೆ.

ಮತ ಚಲಾಯಿಸಿದ ಬಳಿಕ ಮತ್ತೆ ಟ್ವಿಟ್ಟರ್‌ನಲ್ಲಿ ಶಾಯಿ ಗುರುತು ತೋರಿಸಿ ಸೆಲ್ಫಿ ಪೋಸ್ಟ್ ಮಾಡಿರುವ ಕುಂಬ್ಳೆ, ನಾವು ಮತ ಚಲಾಯಿಸಿದೆವು, ನೀವೂ ಮತ ಚಲಾಯಿಸಿ ಎಂದು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ.












Click it and Unblock the Notifications