ಚಾಮುಂಡೇಶ್ವರಿಯಲ್ಲಿ ಮಾತ್ರ ಸಿಎಂ ಪರ ಸುದೀಪ್ ಪ್ರಚಾರ!

Recommended Video

      ಸಿದ್ದು - ಸುದೀಪ್ ಮಧ್ಯೆ ಇದೆ ಒಂದು ನಂಟು !| FIlmibeat Kannada

      ಬೆಂಗಳೂರು, ಮೇ 04: ಸಿಎಂ ಸಿದ್ದರಾಮಯ್ಯ ಪರ ನಟ ಕಿಚ್ಚ ಸುದೀಪ್ ಅವರು ಪ್ರಚಾರ ಮಾಡುತ್ತಾರೆ ಎಂಬ ಸುದ್ದಿ ಗಿರಕಿ ಹೊಡೆಯುತ್ತಲೇ ಇದೆ. ಬಾದಾಮಿಯಲ್ಲಿ ಪ್ರಚಾರ ಮಾಡುತ್ತಾರೋ ಅಥವಾ ಚಾಮುಂಡೇಶ್ವರಿಯಲ್ಲಿ ಪ್ರಚಾರ ಮಾಡುತ್ತಾರೋ ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ.ಬಾದಾಮಿಗೆ ಹೋಗಲ್ಲ.. ಚಾಮುಂಡೇಶ್ವರಿಗೆ ಮಾತ್ರ ಹೋಗ್ತೀನಿ!

      ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ನಟ ಸುದೀಪ್​ ಅವರು ನಾನೊಬ್ಬ ಕಲಾವಿದ, ಕಲಾವಿದನಾಗೇ ಇರುತ್ತೇನೆ. ನಾನು ಸಿಎಂ ಸಿದ್ದರಾಮಯ್ಯ ಅವರ ಪರ ಪ್ರಚಾರ ಮಾಡುವುದು ನಿಜ. ಬಾದಾಮಿ ಕ್ಷೇತ್ರದ ಬದಲಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಕೈಗೊಳ್ಳುತ್ತೇನೆ ಎಂದಿದ್ದಾರೆ.

      ಶ್ರೀರಾಮುಲು ಬಹಳ ಬೇಕಾದವರು, ಬಾದಾಮಿಗೆ ಹೋಗಲ್ಲ ಎಂದಿದ್ದಾರೆ. ನಾನು ಯಾವುದೇ ಪಕ್ಷದ ಪರ ಪ್ರಚಾರ ನಡೆಸುತ್ತಿಲ್ಲ. ವ್ಯಕ್ತಿಗಾಗಿ ನಾನು ಪ್ರಚಾರ ಕೈಗೊಂಡಿದ್ದೇನೆ. ಸಿಎಂ ಎಂದು ಪ್ರಚಾರಕ್ಕೆ ಹೋಗ್ತಿಲ್ಲ, ಸಿದ್ರಾಮಯ್ಯ ಎಂದು ಹೋಗ್ತಿದ್ದೀನಿ ಎಂದರು.

      Karnataka Assembly Elections 2018 : Actor Sudeep to campaign for CM Siddaramaiah

      ಸಿದ್ದರಾಮಯಯ್ಯ ಅವರು ಸಿಎಂ ಆಗೋ ಮುಂಚೆ ಹೇಗಿದ್ರೋ ಈಗಲೂ ನನ್ನ ಜೊತೆ ಹಾಗೇ ಇದ್ದಾರೆ. ಅಂದಿನಿಂದ ಇಂದಿನವರೆಗೂ ನಮ್ಮನ್ನು ಗೌರವದಿಂದ ನಡೆಸಿಕೊಂಡಿದ್ದಾರೆ, ಇಲ್ಲ ಅನ್ನೋಕಾಗಲ್ಲ, ಸ್ವಲ್ಪ ಬಂದು ಹೋಗ್ತೀನಿ ಎಂದು ಹೇಳಿದ್ದೀನಿ, ಗೌರವಪೂರ್ವಕವಾಗಿ, ಸ್ನೇಹದ ಪರವಾಗಿ ಪ್ರಚಾರ ಮಾಡ್ತಿದ್ದೀನಿ ಎಂದು ಸುದೀಪ್ ಹೇಳಿದರು.

      ಸಿದ್ದರಾಮಯ್ಯ ನನಗೆ ಯಾವಾಗ್ಲೂ ಕಾಲಾವಕಾಶ ಕೊಟ್ಟಿದ್ದಾರೆ, ನನಗೆ ಆ ಪಕ್ಷ, ಈ ಪಕ್ಷ ಅಂತಿಲ್ಲ ಎಲ್ಲಾರೂ ನಮ್ಮವರೇ

      ನಾನು ಪಕ್ಷದ ಪರ ಎಂದೂ ಪ್ರಚಾರ ಮಾಡಲ್ಲ, ರಾಜೂಗೌಡ ನಮ್ಮ ಸ್ನೇಹಿತರು ಅವರ ಪರ ಪ್ರಚಾರ ಮಾಡ್ತೀನಿ ಎಂದು ಹೇಳಿದರು.

      ಇನ್ನು ಸಿದ್ದರಾಮಯ್ಯ ಅವರ ಪರ ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಾಲಿವುಡ್ ನಟ ರಾಜ್ ಬಬ್ಬರ್‌ ಪ್ರಚಾರ ನಡೆಸಿದರು. ರಾಜೇಂದ್ರ ಸಿಂಗ್ ಬಾಬು ಹಾಗೂ ಪುತ್ರಿ ರಿಷೀಕಾ ಸಿಂಗ್ ಸಾಥ್ ನೀಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+