ಕರವೇ ನಾ.ಗೌಡರ ಜನುಮ ದಿನ: ಬೃಹತ್ ರಕ್ತದಾನ ಶಿಬಿರ

ಬೆಂಗಳೂರು, ಜೂನ್ 9: ಕನ್ನಡ ಪರ ಹೋರಾಟಗಾರ ಟಿಎ ನಾರಾಯಣ ಗೌಡರಿಗೆ ನಾಳೆ ಮಂಗಳವಾರ 48ನೇ ಜನುಮ ದಿನ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರೂ ಆಗಿರುವ ನಾರಾಯಣ ಗೌಡರ ಜನ್ಮ ದಿನ ನಿಮಿತ್ತ ನಾಳೆ ಬೆಳಗ್ಗೆ 11 ಗಂಟೆಗೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಅನಂತಯ್ಯ ಮತ್ತು ಗೌರಮ್ಮ ಅವರ ಪುತ್ರರಾಗಿ 1966 ರಲ್ಲಿ ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಎಂ ತಿರುಪತಿ ಗ್ರಾಮದಲ್ಲಿ ನಾರಾಯಣ ಗೌಡರು ಜನಿಸಿದರು. (ಕನ್ನಡಿಗರಿಗೆ ಉದ್ಯೋಗ, ಅದೇ ನಿಜವಾದ ರಾಜ್ಯೋತ್ಸವ)

ಪೇಜಾವರ ಮಠದ ಪೀಠಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ, ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ಸಿದ್ಧ ಸಂಸ್ಥಾನ ಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿ, ಮಾದಾರ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರುಗಳ ದಿವ್ಯಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.

ತನ್ನಿಮಿತ್ತ, ಮೂಡಲಪಾಳ್ಯದ ವಿಜಯಲಕ್ಷ್ಮಿ ನರ್ಸಿಂಗ್ ಹೋಂ ವೈದ್ಯೆ ಡಾ ವಿಜಯಲಕ್ಷ್ಮಿ, ಅರಸೀಕೆರೆ ಸರ್ಕಾರಿ ಜೂನಿಯರ್ ಕಾಲೇಜಿನ ನಿವೃತ್ತ ಮುಖ್ಯೋಪಾಧ್ಯಾಯಿನಿ ನಿಂಗಮ್ಮ, ಅರ್ಚಕ ನರಸಿಂಹಮೂರ್ತಿ ಅವರನ್ನು ಸನ್ಮಾನಿಸಲಾಗುವುದು.

karave-president-ta-narayana-gowda

ನಾರಾಯಣ ಗೌಡರು ಬರೆದಿರುವ ಆತ್ಮ ಕಥನ, ಪ್ರೇಮ ಸಂಭ್ರಮ ಸಿ.ಡಿ., ಪುಸ್ತಕ, ನಾಡ ಸೇನಾನಿ ವಿ.ಸಿ.ಡಿ., ಕನ್ನಡ ಜ್ಞಾನ ಪುಸ್ತಕ ಹಾಗೂ ರಂಜಾನ್ ದರ್ಗಾ ಅವರು ಬರೆದ ವಚನ ಬೆಳಕುಗಳನ್ನು ಇದೇ ಸಂದರ್ಭದಲ್ಲಿ ವಿವಿಧ ಗಣ್ಯರು ಬಿಡುಗಡೆ ಮಾಡಲಿದ್ದಾರೆ.

ಸಚಿವರುಗಳಾದ ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಯುಟಿ ಖಾದರ್. ದಿನೇಶ್‌ ಗುಂಡೂರಾವ್, ಟಿಬಿ ಜಯಚಂದ್ರ, ಉಮಾಶ್ರೀ ಹಾಗೂ ಮಾಜಿ ಸಚಿವರಾದ ಆರ್ ಅಶೋಕ್, ಅರವಿಂದ ಲಿಂಬಾವಳಿ, ಶಾಸಕರಾದ ಅಶ್ವಥ್‌ ನಾರಾಯಣ, ಎಸ್ ಮುನಿರಾಜು, ಎಸ್ಆರ್ ವಿಶ್ವನಾಥ್, ಭೈರತಿ ಬಸವರಾಜು, ಮುನಿರತ್ನ, ನಿರ್ಮಾಪಕ ರಾಕ್‌ ಲೈನ್ ವೆಂಕಟೇಶ್, ಎಚ್ ಡಿ ಗಂಗರಾಜು, ನಟ ಪ್ರೇಮ್, ನಟಿ ಪೂಜಾ ಗಾಂಧಿ ಸೇರಿದಂತೆ ಹಲವಾರು ಗಣ್ಯರು ಮುಖ್ಯ ಅತಿಥಿಗಳಾಗಿ ಜನ್ಮಿ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+