Kannada Vs Hindi: ಬೆಂಗಳೂರಿಗೆ ಬಂದು ಕನ್ನಡಿಗರಿಗೆ “ಹಿಂದಿ ಕಲಿ, ಇಲ್ಲ ಬಿಟ್ಟು ಹೋಗಿ” ಎಂದ ನಾರ್ಥಿ; ಧಮ್ಕಿ ವಿಡಿಯೋ ವೈರಲ್!

Kannada Vs Hindi: ಬೆಂಗಳೂರಿನಲ್ಲಿ ಕೆಲವು ನಾರ್ಥಿಗಳ ಹಾವಳಿ ಹೆಚ್ಚಾಗಿದೆ. ಬೆಂಗಳೂರು ಮಹಾನಗರಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವ ವಿಷಯವು ಭಾರೀ ಚರ್ಚೆ ಆಗುತ್ತಿದೆ. ಈ ರೀತಿ ಇರುವಾಗಲೇ ಬೆಂಗಳೂರಿನ ಹುಸ್ಕೂರು ಬಳಿಯ ಕಂಪನಿಯೊಂದರಲ್ಲಿ ಭಾಷೆ ಹೆಸರಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸಲಾಗಿರುವ ವಿಷಯ ಇದೀಗ ಬೆಳಕಿಗೆ ಬಂದಿದೆ.

ಈ ವಿಚಾರವು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕನ್ನಡಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಂಪನಿಯಲ್ಲಿ ಕೆಲಸ ಮಾಡ್ತಿರೋ ಕನ್ನಡದವರೆಲ್ಲಾ ಕೆಲಸ ಬಿಟ್ಟು ಹೋಗಿ, ಕನ್ನಡದವರೆಲ್ಲಾ ಹೋದರೂ ತೊಂದರೆ ಇಲ್ಲ ಅಂತ ನಾರ್ಥಿಯೊಬ್ಬ ಹೇಳಿರುವ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಿಗರಿಂದ ವಿರೋಧ ವ್ಯಕ್ತವಾಗಿದೆ.

Kannada Vs Hindi Bengaluru Viral Video Shows North Indian Man Telling Kannadigas to Learn Hindi or Leave

ಬೆಂಗಳೂರಿಗೆ ಬರುವ ನಾರ್ಥಿಗಳು ಇಲ್ಲಿಯ ವರೆಗೆ ಕನ್ನಡದಲ್ಲಿ ಮಾತನಾಡಲ್ಲ, ಹಿಂದಿ ರಾಷ್ಟ್ರಭಾಷೆ ಎನ್ನುವ ಮೊಂಡು ವಾದವನ್ನು ಮಾಡುತ್ತಿದ್ದರು. ಆದರೆ, ಇದೀಗ ಕನ್ನಡಿಗರಿಗೇ ಹಿಂದಿಯಲ್ಲಿ ಮಾತನಾಡಿ, ಹಿಂದಿ ಭಾಷೆ ಕಲಿತುಕೊಳ್ಳಿ ಅಂತ ಹೇಳುತ್ತಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನ ಹುಸ್ಕೂರು ಬಳಿಯ ಕಂಪನಿಯೊಂದರಲ್ಲಿ ಭಾಷೆ ಹೆಸರಲ್ಲಿ ಕನ್ನಡಿಗರ ಮೇಲೆ ನಾರ್ಥಿಯೊಬ್ಬ ದಬ್ಬಾಳಿಕೆ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಕಂಪನಿಯಲ್ಲಿ ಕೆಲಸ ಮಾಡ್ತಿರುವ ಕನ್ನಡದವರೆಲ್ಲ ಬೇಕಾದರೆ ಕೆಲಸ ಬಿಟ್ಟು ಹೋಗಿ, ಕನ್ನಡದವರೆಲ್ಲರೂ ಹೋದರೂ ಏನು ತೊಂದರೆ ಇಲ್ಲ ಅಂತ ಹೇಳಿದ್ದಾನೆ. ಇದಕ್ಕೆ ಕನ್ನಡಿಗರು ಕರ್ನಾಟಕದಲ್ಲೇ ನೀನು ಇರೋದು ಅಂತ ಹೇಳಿದ್ದಾರೆ. ಅದಕ್ಕ ಕರ್ನಾಟಕದಲ್ಲೇ ಇದ್ದರೇನು..? ನಮಗೆ ಹಿಂದಿ ಭಾಷೆ ನಡೆಯುತ್ತೆ ಅಂತ ಧಮ್ಕಿ ಹಾಕಿರುವುದು ವೈರಲ್ ವಿಡಿಯೋದಲ್ಲಿದೆ.

Kannada Vs Hindi: ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರ ಆಕ್ರೋಶ

ಈ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರ ಆಕ್ರೋಶ ವ್ಯಕ್ತವಾಗಿದೆ. ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು, ಈ ಭೀಮಾರುವಿನ ದುರಹಂಕಾರ, ಹಿಂದಿ ಕಲಿತು ಬರ್ಬೇಕಂತೆ ಕರ್ನಾಟಕ ಆದ್ರೆ ಏನು ಅಂತೇ. ತನ್ನುರಿನಿಂದ ಕೆಲಸ ಇಲ್ಲದೇ ಕರ್ನಾಟಕಕ್ಕೆ ಬಂದು ಇಲ್ಲೇ ಬದುಕಿ ಕನ್ನಡಿಗರ ಮೇಲೆಯೇ ದಬ್ಬಾಳಿಕೆ. ಕನ್ನಡಿಗರು ಕೆಲಸದಲ್ಲೇ ಇರಬಾರದಂತೆ. ಇದು ಯಾವುದೊ ಖಾಸಗಿ ಕಂಪನಿ ಅಂತೇ ಇವ ಕೂಡಲೇ ಅಲ್ಲಿಂದ ಕೆಲಸದಿಂದ ವಜಾ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಖ್ಯಾತ ಪೈ ಪುತ್ತೂರು ಅವರು, ಉದ್ಯೋಗಕ್ಕಾಗಿ ಬನ್ನಿ, ದುಡಿದು ಬದುಕಿ. ಆದರೆ ನಿಮ್ಮ ದರ್ಪ-ಅಹಂಕಾರವನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ. ಕರ್ನಾಟಕದ ನೆಲದಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ವರ್ತನೆಯನ್ನು ಸಹಿಸುವ ಪ್ರಶ್ನೆಯೇ ಇಲ್ಲ ಅಂತ ಹೇಳಿದ್ದಾರೆ. ಅಲ್ಲದೆ ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್‌ ಮಾಡಿದ್ದಾರೆ. ಕನ್ನಡಿಗರ ಮೇಲೆ ದೌರ್ಜನ್ಯ ಎಸೆಗಿದ ಈ ವಿಡಿಯೋದಲ್ಲಿ ಕಾಣುವ ವಲಸಿಗನಿಗೆ ಕಾನೂನಿನ ರುಚಿ ಹಾಗೂ ಕರ್ನಾಟಕದ ಪೋಲೀಸ್ ಪವರ್ ತೋರಿಸಿ ಅಂತ ಪೋಸ್ಟ್‌ ಮಾಡಿದ್ದಾರೆ.

ವೀರ ಕನ್ನಡಿಗ ಎನ್ನುವವರು, ನಮ್ಮ ಸ್ವಂತ ನೆಲದಲ್ಲಿ ಕನ್ನಡಿಗರ ದುಃಸ್ಥಿತಿಯಲ್ಲಿ ಇದು ಮತ್ತೊಂದು ನೋವಿನ ಅಧ್ಯಾಯ..! ನಮ್ಮ ರಾಜ್ಯ ಎತ್ತ ಸಾಗುತ್ತಿದೆ. ಕನ್ನಡಿಗರು ನಮ್ಮ ಸ್ವಂತ ನೆಲದಲ್ಲಿ ಯಾವುದೇ ಮೌಲ್ಯವಿಲ್ಲದ ಸ್ಥಿತಿಗೆ ಇಳಿದಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+