KIMA ಪ್ರಶಸ್ತಿ ಸಂಗೀತ ಪ್ರೇಮಿಗಳಿಗೆ ಇ ಆಹ್ವಾನ
ಬೆಂಗಳೂರು ಜುಲೈ 27: ಸಂಗೀತ ಸಂಯೋಜಕರು, ಹಿನ್ನೆಲೆ ಗಾಯಕರು, ಸಾಹಿತಿಗಳು, ಬ್ಯಾಂಡ್ ಹಾಗೂ ಡಿಜೆ ಹೀಗೆ ವೈವಿಧ್ಯಮಯ ವಿಭಾಗಗಳಲ್ಲಿ ಯಾರು ಯಾರು ಪ್ರಶಸ್ತಿ ಪಡೆಯಲಿದ್ದಾರೆ ಎಂಬ ಪ್ರಶ್ನೆಗೆ ಆಗಸ್ಟ್ 2 ರಂದು ಉತ್ತರ ಸಿಗಲಿದೆ ಎಂದು ಕನ್ನಡ ಇಂಟರ್ ನ್ಯಾಷನಲ್ ಮ್ಯೂಸಿಕ್ ಅವಾರ್ಡ್ (KiMA) ಸಂಸ್ಥೆ ಪ್ರಕಟಿಸಿದೆ.
ಟಾರಿಯನ್ ಆಯೋಜನೆಯ ಸಮಾರಂಭಕ್ಕೆ ಸಾರ್ವಜನಿಕರಿಗೆ ಇ ಅಹ್ವಾನವನ್ನು KIMAವೆಬ್ ತಾಣದ ಮೂಲಕ ಪಡೆದುಕೊಳ್ಳಬಹುದಾಗಿದೆ.

ಅಂತರ್ಜಾಲ ಹಾಗೂ ಎಸ್‍ಎಂಎಸ್ ಮೂಲಕ ಮತದಾನದಿಂದ ನೇರವಾಗಿ ಆಯ್ಕೆ ಮಾಡಲಾಗುತ್ತದೆ. ಅತ್ಯುತ್ತಮ ವಾದ್ಯ ಸಂಯೋಜನೆ, ಅತ್ಯುತ್ತಮ ಧ್ವನಿಮಿಶ್ರಣ ತಂತ್ರಜ್ಞ - ಜ್ಯೂರಿ ಸಮಿತಿ ಪರಿಷ್ಕರಿಸಿ ನಾಮಾಂಕಿತರು ಹಾಗೂ ಅಂತಿಮ ವಿಜೇತರನ್ನು ಘೋಷಿಸಲಿದ್ದಾರೆ ಎಂದು ಆಯೋಜಕರಾದ ವಿಕೆ ಲೋಕೇಶ್ ಹೇಳಿದ್ದಾರೆ.[KIMA ಸಂಗೀತ ಪ್ರಶಸ್ತಿ ರೇಸಿನಲ್ಲಿ ಯಾರಿದ್ದಾರೆ?]
ಜ್ಯೂರಿ ಸದಸ್ಯರು: ಸಂಗೀತಗಾರ ವಿ ಮನೋಹರ್, ಸಾಹಿತಿ ಡಾ ವಿ ನಾಗೇಂದ್ರ ಪ್ರಸಾದ್, ಮ್ಯಾಂಡೋಲಿನ್ ವಾದಕ ಎನ್ ಎಸ್ ಪ್ರಸಾದ್, ಸೌಂಡ್ ಇಂಜಿನಿಯರ್ ಬಿಆರ್ ನವೀನ್ ಕುಮಾರ್, ಡಿಜೆ ಗೋಯಪು, ಸಾಟ್ಚಿ ನೆಟ್ವರ್ಕ್ ನ ಗೌತಮ್ ಶೆಣೈ ಮುಂತಾದವರಿದ್ದಾರೆ.
ಅನೇಕ ದೇಶಗಳಿಂದ ಮತದಾನ: ವೆಬ್ ಸೈಟ್ ಗೆ ಭೇಟಿ ನೀಡಿ ಮತ ಹಾಕಿದವರಲ್ಲಿ ಆಸ್ಟ್ರೇಲಿಯಾ, ಚೀನಾ, ಜರ್ಮನಿ, ಇಂಡೋನೇಷಿಯಾ, ಐರ್ಲೆಂಡ್, ಕುವೈಟ್, ಸಿಂಗಪುರ, ಯುಎಇಮ್ ಯುಕೆ, ಯುಎಸ್ ಮುಂತಾದ ದೇಶದ ಸಂಗೀತಪ್ರೇಮಿಗಳು ಇದ್ದಾರೆ ಎಂಬುದು ವಿಶೇಷ. ಮೂರನೇ KIMA ಪ್ರಶಸ್ತಿ ಸಮಾರಂಭದಲ್ಲಿ 4 ವಿಶೇಷ ಪ್ರಶಸ್ತಿ ಸೇರಿದಂತೆ ಸುಮಾರು 29 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ಕಾರ್ಯಕ್ರಮದ ವಿವರ:
ದಿನಾಂಕ: ಆಗಸ್ಟ್ 2, ಸಂಜೆ 5.30ರ ನಂತರ.
ಸ್ಥಳ: ಅಂಬೇಡ್ಕರ್ ಭವನ, ವಸಂತನಗರ, ಬೆಂಗಳೂರು.
ವಿಶೇಷ ಅತಿಥಿಗಳು:
* ವಿಜಯ್ ರಾಘವೇಂದ್ರ, ನಟ.
* ಸಂಚಾರಿ ವಿಜಯ್, ನಟ.
* ಗುರುಪ್ರಸಾದ್, ನಿರ್ದೇಶಕ.
* ನಾಗಾಂಬಿಕ ದೇವಿ, ಐಎಎಸ್ ಅಧಿಕಾರಿ
* ಡಾ. ಸಲೀಂ, ಐಪಿಎಸ್ ಅಧಿಕಾರಿ.
ಇ ಅಹ್ವಾನ ಪತ್ರಿಕೆ ಪಡೆಯಲು ಇಚ್ಛಿಸುವವರು ಈ ಲಿಂಕ್ ಕ್ಲಿಕ್ ಮಾಡಿ
(ಒನ್ ಇಂಡಿಯಾ ಸುದ್ದಿ)












Click it and Unblock the Notifications