ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

KIMA ಸಂಗೀತ ಪ್ರಶಸ್ತಿ: ನೆಚ್ಚಿನ ಕಲಾವಿದರಿಗೆ ಮತ ಹಾಕಿ

By Mahesh
|
Google Oneindia Kannada News

ಬೆಂಗಳೂರು, ಜುಲೈ 07: ಸಂಗೀತ ಸಂಯೋಜಕರು, ಹಿನ್ನೆಲೆ ಗಾಯಕರು, ಸಾಹಿತಿಗಳು, ಬ್ಯಾಂಡ್ ಹಾಗೂ ಡಿಜೆ ಹೀಗೆ ವೈವಿಧ್ಯಮಯ ವಿಭಾಗಗಳಲ್ಲಿ ನಿಮ್ಮ ನೆಚ್ಚಿನ ಕಲಾವಿದರನ್ನು ಆಯ್ಕೆ ಮಾಡುವ ಅವಕಾಶವನ್ನು ಕನ್ನಡ ಇಂಟರ್ ನ್ಯಾಷನಲ್ ಮ್ಯೂಸಿಕ್ ಅವಾರ್ಡ್(KiMA) ನೀಡುತ್ತಿದೆ. ಮೂರನೇ ಆವೃತ್ತಿಯ ಪ್ರಶಸ್ತಿಗಾಗಿ ಹಲವಾರು ಸಂಗೀತಗಾರರು ನಾಮಾಂಕಿತಗೊಂಡಿದ್ದಾರೆ. ವೋಟ್ ಮಾಡಿ ಗೆಲ್ಲಿಸುವುದು ಅಭಿಮಾನಿಗಳ ಕೈಲಿದೆ.

ಸಾರ್ವಜನಿಕ ಆನ್ಲೈನ್ ಅಂತರ್ಜಾಲ ಹಾಗೂ ಎಸ್‍ಎಂಎಸ್ ಮೂಲಕ ಮತದಾನದಿಂದ ನೇರವಾಗಿ ಆಯ್ಕೆ ಮಾಡಲಾಗುತ್ತದೆ. ಅತ್ಯುತ್ತಮ ವಾದ್ಯ ಸಂಯೋಜನೆ, ಅತ್ಯುತ್ತಮ ಧ್ವನಿಮಿಶ್ರಣ ತಂತ್ರಜ್ಞ - ಜ್ಯೂರಿ ಸಮಿತಿ ಪರಿಷ್ಕರಿಸಿ ನಾಮಾಂಕಿತರು ಹಾಗೂ ಅಂತಿಮ ವಿಜೇತರನ್ನು ಘೋಷಿಸುವರು.

ವಿಶೇಷ ಸಂಗೀತ ಪ್ರಶಸ್ತಿಗಳು - ಪ್ರಶಸ್ತಿ ವ್ಯವಸ್ಥಾಪಕರು ಮತ್ತು ಜ್ಯೂರಿ ಸಮಿತಿ ಜಂಟಿಯಾಗಿ ನಿರ್ಣಯಿಸಿ ಅಂತಿಮ ಪಟ್ಟಿಯನ್ನು ಘೋಷಿಸುತ್ತಾರೆ. ಈ ಬಾರಿಯ ಜ್ಯೂರಿಯಲ್ಲಿ ಸಂಗೀತಗಾರ ವಿ ಮನೋಹರ್, ಸಾಹಿತಿ ಡಾ ವಿ ನಾಗೇಂದ್ರ ಪ್ರಸಾದ್, ಮ್ಯಾಂಡೋಲಿನ್ ವಾದಕ ಎನ್ ಎಸ್ ಪ್ರಸಾದ್, ಸೌಂಡ್ ಇಂಜಿನಿಯರ್ ಬಿಆರ್ ನವೀನ್ ಕುಮಾರ್, ಡಿಜೆ ಗೋಯಪು, ಸಾಟ್ಚಿ ನೆಟ್ವರ್ಕ್ ನ ಗೌತಮ್ ಶೆಣೈ ಮುಂತಾದವರಿದ್ದಾರೆ. [KIMA ಪ್ರಶಸ್ತಿ : ಸಂಗೀತ ಪ್ರೇಮಿಗಳಿಗೆ ಇ ಆಹ್ವಾನ]

ಚಲನಚಿತ್ರ ಸಂಗೀತ ಪ್ರಶಸ್ತಿ, ನ್ಯೂ ಏಜ್ ಅವಾರ್ಡ್ಸ್, ದೂರದರ್ಶನ ಸಂಗೀತ, ರಂಗ ಭೂಮಿ ಸಂಗೀತ, ಸುಗುಮ ಸಂಗೀತ, ಭಕ್ತಿ ಸಂಗೀತ, ಜಾನಪದ ಸಂಗೀತ, ಕಿರುಚಿತ್ರ ಸಂಗೀತ ಹೀಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಎಲ್ಲಾ ವಿಭಾಗಗಳ ವೋಟಿಂಗ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಭಕ್ತಿ ಸಂಗೀತ ಸಂಯೋಜನೆ

ಭಕ್ತಿ ಸಂಗೀತ ಸಂಯೋಜನೆ

* ಪ್ರವೀಣ್ ಡಿ ರಾವ್, ನಮಿಸಿ ಬೇಡುವೆ, ಗುರು ಗುಣಗಾನ ಆಲ್ಬಂ
* ಸುನೀತಾ ಚಂದ್ರಕುಮಾರ್, ನವರಾತ್ರಿ ನವರೂಪಿಣಿ ಹಾಡು, ಜ್ಞಾನಮುದ್ರೆ ಆಲ್ಬಂ
* ಎಂ ಆರ್ ಕೃಷ್ಣ, ಸದಾ ಎನ್ನ ಹೃದಯದಲ್ಲಿ, ಹರಿದಾಸಾಮೃತಧಾರೆ
* ಸ್ವಾಮಿ, ಸುರಲೋಕ, ಶ್ರೀಸ್ವರ್ಣಗೌರಿ

ಭಕ್ತಿ : ಅತ್ಯುತ್ತಮ ಗಾಯಕ/ಕಿ

ಭಕ್ತಿ : ಅತ್ಯುತ್ತಮ ಗಾಯಕ/ಕಿ

* ವಾರಿಜಾಶ್ರೀ ವೇಣುಗೋಪಾಲ್, ನಾನ್ಯಾಕೆ ಚಿಂತಿಸಲಿ, ಗುರು ಗುಣಗಾನ
* ನಂದಿತಾ, ಕಂಡೆ ಕಂಡೆ, ದಾಸರ ವಾಣಿ
* ರಾಜೇಶ್ ಕೃಷ್ಣನ್, ಸುರಲೋಕ, ಶ್ರೀಸ್ವರ್ಣಗೌರಿ
* ಸುವರ್ಣ ರಾಥೋಡ್, ಬಂದದ್ದೆಲ್ಲ ಬರಲಿ, ಗುರು ಗುಣಗಾನ
* ಅಜಯ ವಾರಿಯರ್, ಭೋಯತಿವರಧೇಂದ್ರ, ಗುರು ಗುಣಗಾನ

ಚಲನಚಿತ್ರ ಸಂಗೀತ : ಅತ್ಯುತ್ತಮ ಸಂಯೋಜಕ

ಚಲನಚಿತ್ರ ಸಂಗೀತ : ಅತ್ಯುತ್ತಮ ಸಂಯೋಜಕ

* ಭರತ್ ಬಿಜೆ, ನಾನಾರೆಂಬುದು ನಾನಲ್ಲ, ಬಹುಪರಾಕ್
* ಅರ್ಜುನ್ ಜನ್ಯಾ, ಜೀವಾ ಜೀವಾ, ಮಾಣಿಕ್ಯ
* ರವಿ ಬಸ್ರೂರ್, ಚನ್ನ ಚನ್ನ, ಉಗ್ರಂ
* ಆರ್ ಎಸ್ ಗಣೇಶ್ ನಾರಾಯಣ್, ಶುರುವಾಯಿತು, ಕ
* ಶ್ರೀಧರ್ ವಿ ಸಂಭ್ರಮ್, ದಿಲ್ಗೆ ದಿಲ್ಗೆ, ಜೈ ಲಲಿತಾ

ಸಿನಿಮಾ: ಜನಪ್ರಿಯ ಹಾಡು

ಸಿನಿಮಾ: ಜನಪ್ರಿಯ ಹಾಡು

* ಭರತ್ ಬಿಜೆ, ಗೆದ್ದೆ ಗೆಲ್ತಾನಂತ, ಬಹುಪರಾಕ್
* ಆರ್ ಎಸ್ ಗಣೇಶ್ ನಾರಾಯಣ್, ಕೊಕನಕ್ಕಾ ಮಕಾಕ, ಕ
* ಅರ್ಜುನ್ ಜನ್ಯಾ, ಅಧ್ಯಕ್ಷ, ಅಧ್ಯಕ್ಷ
* ಶ್ರೀಧರ್ ವಿ ಸಂಭ್ರಮ್, ಧೂಮ್ ಧಮಾಕಾ, ಬೆಳ್ಳಿ

ಸಿನಿಮಾ: ಗೀತ ಸಾಹಿತ್ಯ

ಸಿನಿಮಾ: ಗೀತ ಸಾಹಿತ್ಯ

* ಸುನಿ, ಉಸಿರಾಗುವೆ, ಬಹುಪರಾಕ್
* ಶಿವನಂಜೇಗೌಡ, ಮರುಭೂಮಿ ಎದೆಯಲಿ, ಅಯೋಧ್ಯಪುರಂ
* ಎಸ್ ಸರ್ವೇಶ್, ಚಿತ್ತಾರ ಮೂಡೋ, ಉಗ್ರಂ
* ರೇಖಾ ಮೋಹನ್(ರೆಮೋ), ಅನೀರೀಕ್ಷಿತ ಲೈಫಲ್ಲಿ, ಫೇರ್ ಅಂಡ್ ಲವ್ಲೀ

ಸಿನಿಮಾ: ಗಾಯಕಿ

ಸಿನಿಮಾ: ಗಾಯಕಿ

* ಮೇಘನಾ ಜೋಶಿ, ಮೆತ್ತಗೆ ಮೆತ್ತಗೆ, ಪಂಗನಾಮ
* ಸಂಗೀತಾ ರವೀಂದ್ರನಾಥ್, ಪಕ್ಕ ಲೋಕಲ್ ನಾನು, ನಮಸ್ತೆ ಮೇಡಂ
* ಅರ್ಚನಾರವಿ, ಕೈ ಚಾಚು, ಡಾರ್ಲಿಂಗ್
* ಅನನ್ಯ ಭಟ್, ಶಿವನಂಜಪ್ಪಂಗು, ಚತುರ್ಭುಜ

ಸಿನಿಮಾ: ಗಾಯಕ

ಸಿನಿಮಾ: ಗಾಯಕ

* ರಾಜೇಶ್ ಕೃಷ್ಣನ್, ಉಸಿರಾಗುವೆ, ಬಹುಪರಾಕ್
* ನವೀನ್ ಸಜ್ಜು, ಗೆದ್ದೆ ಗೆಲ್ತಾನಂತ ನಾನು ಮುಂಚೆ, ಬಹುಪರಾಕ್
* ಶಶಾಂಕ್ ಶೇಷಗಿರಿ, ಕನ್ನಡ ಸವಿಗನ್ನಡ, ಜೈ ಲಲಿತಾ
* ಅಜಯ್ ವಾರಿಯರ್, ಮಧುಮಾಸ, ಸಡಗರ
* ಅರ್ಜುನ್ ಜನ್ಯ, ಅರ್ಲಿ ಮಾರ್ನಿಂಗ್, ದಿಲ್ ರಂಗೀಲ

English summary
Kannada International Music Awards (KiMA 2015) : Vote your favourites for Singer, Musicians. Voting started from 4th July 2015 and for voting please visit kima website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X