ನಟ ದುನಿಯಾ ವಿಜಯ್‌ಗೆ 100 ರೂ. ದಂಡ!

ಬೆಂಗಳೂರು, ಜ.7 : ನಟ ದುನಿಯಾ ವಿಜಯ್‌ಗೆ ಬೆಂಗಳೂರಿನ ಸಂಚಾರಿ ಪೊಲೀಸರು 100 ರೂ. ದಂಡ ವಿಧಿಸಿದ್ದಾರೆ. ಕಾರು ಗಾಜಿನ ಕಪ್ಪು ಫಿಲ್ಮ್‌ ತೆಗೆಸದ ಕಾರಣಕ್ಕೆ ಬನಶಂಕರಿ ಸಂಚಾರ ಠಾಣೆ ಪೊಲೀಸರು ದಂಡ ವಿಧಿಸಿ, ಕಪ್ಪು ಫಿಲ್ಮ್‌ ಅನ್ನು ತೆಗೆದುಹಾಕಿದ್ದಾರೆ.

ಮಂಗಳವಾರ ಕತ್ತರಿಗುಪ್ಪೆಯಲ್ಲಿರುವ ದುನಿಯಾ ವಿಜಯ್‌ ನಿವಾಸಕ್ಕೆ ತೆರಳಿದ ಪೊಲೀಸರು, ಮನೆ ಮುಂದೆ ನಿಂತಿದ್ದ ರೇಂಜ್‌ ರೋವರ್‌ ಕಾರನ್ನು ಪರಿಶೀಲಿಸಿದರು. ಆಗ ಗಾಜಿನ ಮೇಲೆ ಕಪ್ಪು ಫಿಲ್ಮ್‌ ಅಂಟಿಸಿರುವುದು ಕಂಡುಬಂದಿತು. ಅದನ್ನು ತೆಗೆದುಹಾಕಿದ ಪೊಲೀಸರು, 100 ರೂ. ದಂಡ ವಿಧಿಸಿದರು.

Duniya Vijay

ಸಿಸಿಬಿ ಕಚೇರಿಗೆ ಬಂದಿದ್ದರು : ದುನಿಯಾ ವಿಜಯ್ ಕಾರಿನಲ್ಲಿ ಕಪ್ಪು ಫಿಲ್ಮ್‌ ಇದೆ ಎಂದು ಸಂಚಾರಿ ಪೊಲೀಸರಿಗೆ ದೂರು ನೀಡಿದ್ದು ಸಾರ್ವಜನಿಕರು. ಸೋಮವಾರ ನಿರ್ಮಾಪಕ ಜಯಣ್ಣ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪ ಸಂಬಂಧ ವಿಜಯ್‌ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. [ನಟ ದುನಿಯಾ ವಿಜಯ್ ವಿರುದ್ಧ ಜೀವ ಬೆದರಿಕೆ ದೂರು]

ದುನಿಯಾ ವಿಜಯ್ ವಿಚಾರಣೆಗೆ ಆಗಮಿಸಿದ ಕಾರಿನಲ್ಲಿ ಕಪ್ಪು ಫಿಲ್ಮ್‌ ಇರುವುದನ್ನು ಸಾರ್ವಜನಿಕರು ಗಮನಿಸಿದ್ದರು. ನಂತರ ಈ ಕುರಿತು ಕರೆ ಮಾಡಿ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಧ್ಯಮಗಳಲ್ಲೂ ಈ ಕುರಿತು ವರದಿ ಪ್ರಸಾರವಾಗಿತ್ತು. ಈ ದೂರನ್ನು ಪರಿಗಣಿಸಿ ಕ್ರಮ ಕೈಗೊಳ್ಳಾಗಿದೆ ಎಂದು ಡಿಸಿಪಿ ಎಸ್‌.ಗಿರೀಶ್‌ ಹೇಳಿದ್ದಾರೆ.

ಸಾರ್ವಜನಿಕರು ದೂರು ನೀಡುವವರೆಗೂ ಈ ಸಂಗತಿ ನಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಅವರು ಅವರು ತಿಳಿಸಿದ್ದಾರೆ. ಕಪ್ಪು ಫಿಲ್ಮ್‌ ಅನ್ನು ತೆರವುಗೊಳಿಸಿರುವ ಚಿತ್ರವನ್ನು ಪೊಲೀಸರು ಫೇಸ್‌ಬುಕ್ ಪುಟದಲ್ಲಿ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+