ಫ್ರೀಡಂ ಪಾರ್ಕ್‌ನಲ್ಲಿ ಸೆ. 14ರವರೆಗೆ ಪುಸ್ತಕ ಮೇಳ
ಬೆಂಗಳೂರು. ಸೆ. 6: ನಗರದ ಪುಸ್ತಕ ಪ್ರಿಯರಿಗೆ ಸಿಹಿಸುದ್ದಿ. ಕರ್ನಾಟಕ ಪುಸ್ತಕ ಪ್ರಾಧಿಕಾರ ಮತ್ತು ಹ್ಯಾಪಿ ಕ್ಲಬ್ ಇವೆಂಟ್ ಸಂಸ್ಥೆ ಆಶ್ರಯದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಸೆ. 14ರವರೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ನಡೆಯತ್ತಿದೆ.
ಸಿನಿಮಾ ಸಾಹಿತ್ಯ ಪ್ರದರ್ಶನ, ಧಾತ್ರಿ ಪ್ರಕಾಶನ, ಸಿವಿಜಿ ಪಬ್ಲಿಕೇಶನ್ಸ್‌ಮ ಸ್ನೇಹ ಬುಕ್ ಹೌಸ್, ಇಸ್ಕಾನ್, ಬಿಎಸ್.ಗೌಡ ಬುಕ್ ಹೌಸ್ ಸೇರಿದಂತೆ ಸುಮಾರು 130 ಪುಸ್ತಕ ಮಳಿಗೆ ತೆರೆಯಲಾಗಿದೆ.

ಇದಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಮತ್ತೊಂದು ವಿಶೇಷ.
ಶುಕ್ರವಾರ ಪುಸ್ತಕ ಪ್ರದರ್ಶನವನ್ನು ಕವಿ ಸಿದ್ದಲಿಂಗಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಸಚಿವೆ ಡಾ.ಲೀಲಾದೇವಿ ಆರ್. ಪ್ರಸಾದ್ ಹಾಜರಿದ್ದರು.
ಶ್ರೀಷ ಬೆಳವಾಡಿ ವಿರಚಿತ 'ಶೂನ್ಯ', ಗಣೇಶ್ ಯಲ್ಲಾಪುರ ಬರೆದಿರುವ 'ಖುಷಿ', ಜೋಜಿ ಹೊಳ್ಳಿಯ 'ಫಿಫ್ಟಿ ಫಿಫ್ಟಿ' ಪುಸ್ತಗಳನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.
ಪ್ರವೇಶ ಉಚಿತ
ಪುಸ್ತಕ ಮಾರಾಟ ಮತ್ತು ಪ್ರದರ್ಶನಕ್ಕೆ ಪ್ರವೇಶ ಉಚಿತ. ಕನ್ನಡದ ಎಲ್ಲ ಪ್ರಮುಖ ಲೇಖಕರ ಪುಸ್ತಗಳು ಲಭ್ಯವಿದೆ. ಅಲ್ಲದೇ ಪುಸ್ತಕದ ಖರೀದಿ ಮೇಲೆ ಡಿಸ್ಕೌಂಟ್ ನೀಡಲಾಗುವುದು.












Click it and Unblock the Notifications