ಶಾಸಕ ಜಮೀರ್ ಸಂಬಂಧಿ ಫಹಾದ್, ನಟಿ ರಮ್ಯಾ ಮದುವೆ
ಕನ್ನಡ ನಟಿ ರಮ್ಯಾ ಬಾರ್ನಾ ಅವರು ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಅವರ ಸಹೋದರಿಯ ಮಗನನ್ನು ವರಿಸಿರುವ ಸುದ್ದಿ. ವಾಹಿನಿಗಳಲ್ಲಿ ಶುಕ್ರವಾರ ಸಂಜೆಯಿಂದಲೂ ಹರಿದಾಡುತ್ತಿರುವ ಸುದ್ದಿ. ಜಮೀರ್ ಸಹೋದರಿಯ ಪುತ್ರನ ಹೆಸರು ಫಹಾನ್ ಅಲಿ ಖಾನ್.
ಬೆಂಗಳೂರು, ಜುಲೈ 14: ಕನ್ನಡ ಚಿತ್ರ ನಟಿ ರಮ್ಯಾ ಬಾರ್ನಾ, ಜೆಡಿಎಸ್ ನ ಬಂಡಾಯ ನಾಯಕ ಜಮೀರ್ ಅಹ್ಮದ್ ಅವರ ಸಹೋದರಿಯ ಪತಿಯ ಸಂಬಂಧಿಯೊಬ್ಬರನ್ನು ವರಿಸಿರುವ ಸುದ್ದಿ ಶುಕ್ರವಾರ ಸಂಜೆ ವೇಳೆಗೆ ಕೆಲವಾರು ವಾಹಿನಿಗಳಲ್ಲಿ ಹರಿದಾಡಿ ಸಂಚಲನ ಸೃಷ್ಟಿಸಿದೆ. ಪಂಚರಂಗಿ, ಪರಮಾತ್ಮ ಮುಂತಾದ ಚಿತ್ರಗಳಲ್ಲಿ ರಮ್ಯಾ ಬಾರ್ನಾ ಅಭಿನಯಿಸಿದ್ದಾರೆ.
ಜಮೀರ್ ಅಹ್ಮದ್ ಅವರ ಭಾವನ ತಮ್ಮನ ಮಗ ಫಹಾದ್ ಅಲಿ ಖಾನ್ ಅವರ ಜತೆಯಲ್ಲಿ ರಮ್ಯಾ ಬಾರ್ನಾ ಅವರು ಇದೇ ವರ್ಷ ಮೇ 29ರಂದೇ ರಿಜಿಸ್ಟರ್ ವಿವಾಹ ಮಾಡಿಕೊಂಡಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ ಎಂದು ವಾಹಿನಿಗಳು ಹೇಳಿವೆ.

ಸದ್ಯದ ಮಾಹಿತಿಗಳ ಪ್ರಕಾರ, ಶಿವಾಜಿ ನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಮ್ಯಾ ಹಾಗೂ ಫಹಾದ್ ಅವರು ಮದುವೆಯಾಗಿದ್ದಾರೆಂದು ಹೇಳಲಾಗಿದೆ.













Click it and Unblock the Notifications