ಚಿತ್ರಗಳಲ್ಲಿ: ಕಮಲ್ ಹಾಸನ್ ಜೊತೆ ರವಿಶಂಕರ್ ಗುರೂಜಿ

ಬೆಂಗಳೂರು, ಸೆ. 11: ನಾಸ್ತಿಕ ಎಂದೇ ಗುರುತಿಸಿಕೊಳ್ಳುವ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅವರು ಇತ್ತೀಚೆಗೆ ನಗರದ ಆರ್ಟ್ ಆಫ್ ಲಿವಿಂಗ್ ನ ಆಧಾತ್ಮ ಗುರು ರವಿಶಂಕರ್ ಗುರೂಜಿ ಅವರನ್ನು ಭೇಟಿ ಮಾಡಿ ಎಲ್ಲರಲ್ಲೂ ಕುತೂಹಲ ಕೆರಳಿಸಿದ್ದಾರೆ. ಶ್ರೀಶ್ರೀ ರವಿಶಂಕರ್ ಹಾಗೂ ಕಮಲ್ ಹಾಸನ್ ಅವರ ಭೇಟಿ ಚಿತ್ರಗಳನ್ನು ಕಮಲ್ ಅವರ ಫ್ಯಾನ್ಸ್ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಕಮಲ್ ಹಾಸನ್ ಅವರು ನಟಿಸಿದ ಕನ್ನಡದ ದೃಶ್ಯಂ ರಿಮೇಕ್ ಚಿತ್ರ 'ಪಾಪನಾಶಂ' ಹೆಸರಿಗೂ ರವಿಶಂಕರ್ ಗುರೂಜಿ ಅವರ ಹುಟ್ಟೂರಿಗೂ ಸಂಬಂಧವಿದೆ. ಶ್ರೀಶ್ರೀಗಳ ಹುಟ್ಟೂರಿನ ಹೆಸರು ಅದೇ ಆಗಿದೆ. [ನಾಸ್ತಿಕ ಕಮಲ್ ಹಾಸನ್, ತ್ರಿನಾಮ ಮಠದಲ್ಲಿ ಪ್ರತ್ಯಕ್ಷ]

ಇದಕ್ಕೂ ಮುನ್ನ ವನಮಾಮಲೈ ಜೀರ್ ಅವರು ನಂನಗುನೇರಿ ವೈಷ್ಣವರ ಮಠಕ್ಕೆ ಕಮಲ್ ಹಾಸನ್ ಅವರು ಭೇಟಿ ಮಾಡಿ ಬಂದ ನಂತರ ಕಮಲ್ ಅವರ ನಂಬಿಕೆ ಬದಲಾಗಿದೆಯೇ ಎಂದು ಹಲವರು ಮಂದಿ ಪ್ರಶ್ನಿಸಿದ್ದರು.

ಆದರೆ, ಜೀರ್ ಅವರು ಮಠದಲ್ಲಿ ಶೂಟಿಂಗ್ ಮಾಡಲು ಅವಕಾಶ ಮಾಡಿಕೊಂಡಿದ್ದ ಕಾರಣ ಧನ್ಯವಾದ ಅರ್ಪಿಸಲು ಕಮಲ್ ಅವರು ಭೇಟಿ ನೀಡಿದ್ದರು ಎನ್ನಲಾಗಿದೆ. [ಉತ್ತಮ ವಿಲನ್ ಚಿತ್ರವಿಮರ್ಶೆ]

ಕಮಲ್ ಅವರ ಮುಂದಿನ ಚಿತ್ರ ತೂಗಾವನಂ (ಫ್ರೆಂಚ್ ಸಿನಿಮಾ Nuit Blanche) ನಲ್ಲಿ ತ್ರೀಷಾ ಕೃಷ್ಣನ್ ಜೊತೆ ನಟಿಸುತ್ತಿದ್ದಾರೆ. ಅಜಿತ್ ಅವರ ತಲಾ 56 ಚಿತ್ರದ ಜೊತೆ ಅಥವಾ ಧನುಷ್ ಅವರ ವಿಐಪಿ 2 ಜೊತೆ ದೀಪಾವಳಿಗೆ ಈ ಚಿತ್ರ ಬಿಡುಗಡೆ ಆಗುವ ಸಾಧ್ಯತೆಯಿದೆ. ವಿಶ್ವರೂಪಂ 2 ಕೂಡಾ ಇನ್ನೂ ಬಾಕಿ ಇದೆ. 2015ರಲ್ಲಿ ಉತ್ತಮ ವಿಲನ್ ಫ್ಲಾಪ್ ಆದರೆ, ಪಾಪನಾಶಂ ಚಿತ್ರ ವಿಮರ್ಶಕರ ಮೆಚ್ಚುಗೆ ಪಡೆದಿತ್ತು.

ಆಧಾತ್ಮ ಗುರು ರವಿಶಂಕರ್ ಗುರೂಜಿ ಭೇಟಿ

ಆಧಾತ್ಮ ಗುರು ರವಿಶಂಕರ್ ಗುರೂಜಿ ಭೇಟಿ

ನಾಸ್ತಿಕ ಎಂದೇ ಗುರುತಿಸಿಕೊಳ್ಳುವ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅವರು ಇತ್ತೀಚೆಗೆ ನಗರದ ಆರ್ಟ್ ಆಫ್ ಲಿವಿಂಗ್ ನ ಆಧಾತ್ಮ ಗುರು ರವಿಶಂಕರ್ ಗುರೂಜಿ ಅವರನ್ನು ಭೇಟಿ ಮಾಡಿ ಎಲ್ಲರಲ್ಲೂ ಕುತೂಹಲ ಕೆರಳಿಸಿದ್ದಾರೆ.

'ಪಾಪನಾಶಂ' ಹೆಸರಿಗೂ ರವಿಶಂಕರ್ ಗುರೂಜಿಗೂ ಲಿಂಕ್

'ಪಾಪನಾಶಂ' ಹೆಸರಿಗೂ ರವಿಶಂಕರ್ ಗುರೂಜಿಗೂ ಲಿಂಕ್

ಕಮಲ್ ಹಾಸನ್ ಅವರು ನಟಿಸಿದ ಕನ್ನಡದ ದೃಶ್ಯಂ ರಿಮೇಕ್ ಚಿತ್ರ 'ಪಾಪನಾಶಂ' ಹೆಸರಿಗೂ ರವಿಶಂಕರ್ ಗುರೂಜಿ ಅವರ ಹುಟ್ಟೂರಿಗೂ ಸಂಬಂಧವಿದೆ. ಶ್ರೀಶ್ರೀಗಳ ಹುಟ್ಟೂರಿನ ಹೆಸರು ಅದೇ ಆಗಿದೆ.

ಕಮಲ್ ಅವರ ಮುಂದಿನ ಚಿತ್ರ ತೂಗಾವನಂ

ಕಮಲ್ ಅವರ ಮುಂದಿನ ಚಿತ್ರ ತೂಗಾವನಂ

ಕಮಲ್ ಅವರ ಮುಂದಿನ ಚಿತ್ರ ತೂಗಾವನಂ (ಫ್ರೆಂಚ್ ಸಿನಿಮಾ Nuit Blanche) ನಲ್ಲಿ ತ್ರೀಷಾ ಕೃಷ್ಣನ್ ಜೊತೆ ನಟಿಸುತ್ತಿದ್ದಾರೆ. ಪ್ರಕಾಶ್ ರಾಜ್, ಕಿಶೋರ್, ಆಶಾ ಶರತ್, ಸಂಪತ್ ರಾಜ್, ಉಮಾ ರಿಯಾಜ್ ಖಾನ್ ಮುಂತಾದವರು ತಾರಾಗಣದಲ್ಲಿದ್ದಾರೆ.

2015ರಲ್ಲಿ ಮಿಶ್ರ ಫಲ ಉಂಡ ಕಮಲ್

2015ರಲ್ಲಿ ಮಿಶ್ರ ಫಲ ಉಂಡ ಕಮಲ್

ಕಮಲ್ ಅವರ ವಿಶ್ವರೂಪಂ 2 ಕೂಡಾ ಇನ್ನೂ ಬಾಕಿ ಇದೆ. 2015ರಲ್ಲಿ ಉತ್ತಮ ವಿಲನ್ ಫ್ಲಾಪ್ ಆದರೆ, ಪಾಪನಾಶಂ ಚಿತ್ರ ವಿಮರ್ಶಕರ ಮೆಚ್ಚುಗೆ ಪಡೆದಿತ್ತು.

ರವಿಶಂಕರ್ ಗುರೂಜಿ ಜೊತೆ ಭೇಟಿ ಚಿತ್ರ

ರವಿಶಂಕರ್ ಗುರೂಜಿ ಜೊತೆ ಭೇಟಿ ಚಿತ್ರಗಳನ್ನು ಕಮಲ್ ಅಭಿಮಾನಿಗಳು ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+