ದಿ. ಮಧುಕರಶೆಟ್ಟಿ ನೆನಪು ಉಳಿಸಲು ಧ್ವನಿಯೆತ್ತಿದ ಹಿರಿಯ ಪತ್ರಕರ್ತ

ಬೆಂಗಳೂರು, ಡಿಸೆಂಬರ್ 25: ರಾಜ್ಯ ಕಂಡ ಅತ್ಯಂತ ದಕ್ಷ ಅಧಿಕಾರಿ ದಿ. ಮಧುಕರಶೆಟ್ಟಿ ಅವರ ನೆನಪು ಶಾಶ್ವತವಾಗಿ ಉಳಿಸುವ ಪ್ರಯತ್ನಕ್ಕೆ ಹಿರಿಯ ಪತ್ರಕರ್ತ ರಾಘವೇಂದ್ರ ಭಟ್ ಧ್ವನಿ ಎತ್ತಿದ್ದಾರೆ. ವರ್ತೂರಿನ ಕೋಡಿ ಸಮೀಪದ ಸರ್ಕಲ್ ಗೆ ದಿ. ಮಧುಕರಶೆಟ್ಟಿ ಅವರ ಹೆಸರನ್ನು ನಾಮಕರಣ ಮಾಡುವ ಬಿಬಿಎಂಪಿ ಪ್ರಸ್ತಾವನೆಗೆ ಬಿಬಿಎಂಪಿ ಕೌನ್ಸಿಲ್ ಸಭೆ ತೀರ್ಮಾನಿಸಿತ್ತು. ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿತ್ತು . ಯಡಿಯೂರಪ್ಪ ನೇತೃತ್ವದ ಸರಕಾರ ಈ ಪ್ರಸ್ತಾಪವನ್ನು ಕಾರಣವಿಲ್ಲದೇ ನಿರಾಕರಿಸಿದೆ.

ಈ ಬಗ್ಗೆ ವಾಸ್ತವ ಅಂಶಗಳನ್ನು ಉಲ್ಲೇಖಿಸಿ ಪತ್ರಕರ್ತ ರಾಘವೇಂದ್ರ ಭಟ್ ಸಾಮಾಜಿಕ ಜಾಲ ತಾಣದಲ್ಲಿ ಪುಟ್ಟ ಆಂದೋಲನ ಆರಂಭಿಸಿದ್ದಾರೆ. ಅವರ ಆಂದೋಲನ ಪತ್ರದ ಸಾರಾಂಶ ಹೀಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರಕ್ಕೆ ಲೋಕಾಯುಕ್ತ ಎಸ್ಪಿಯಾಗಿದ್ದ ಸಂದರ್ಭದಲ್ಲಿ ಮಧುಕರ ಶೆಟ್ಟಿ ಸಿಂಹ ಸ್ವಪ್ನರಾಗಿದ್ದರು. ಬಿಎಸ್ವೈ ಸರಕಾರದ ಅವಧಿಯಲ್ಲಿ ನಡೆದ ಕೆಐಎಡಿಬಿ ಭೂ ಹಗರಣವನ್ನು ಪತ್ತೆ ಹಚ್ಚಿ ಅಂದಿನ ಕೈಗಾರಿಕಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ಜೈಲಿಗೆ ಅಟ್ಟಿದ್ದರು. ಲೋಕಾಯುಕ್ತ ಸಂತೋಷ್ ಹೆಗ್ಡೆ ನಡೆಸುತ್ತಿದ್ದ ಅಕ್ರಮ ಗಣಿಗಾರಿಕೆ ತನಿಖೆಯ ಮುಂಚೂಣಿಯಲ್ಲಿ ನಿಂತು ರಾಜ್ಯದ ಖನಿಜ ಸಂಪತ್ತು ನುಂಗಿದವರ ಗಂಟಲು ಒತ್ತಿದ್ದರು.

 justice for late Madhukarshetty IPS

ಯಡಿಯೂರಪ್ಪನವರನ್ನು ಈಗಲೂ ಬೆಂಬಿಡದ ಭೂತದಂತೆ ಕಾಡುತ್ತಿರುವ ಅಕ್ರಮ ಡಿನೋಟಿಫಿಕೇಶನ್ ಪ್ರಕರಣ ಪತ್ತೆ ಹಚ್ಚಿ ಕೋಳ ಬೀಳುವಂತೆ ಮಾಡಿದ್ದೇ ಮಧುಕರ ಶೆಟ್ಟಿ. ಬಿಜೆಪಿ ಶಾಸಕ ಸಂಪಂಗಿಯನ್ನು ಲಂಚ ಸ್ವೀಕರಿಸುತ್ತಿರುವಾಗಲೇ ಶಾಸಕರ ಭವನದಲ್ಲೊ ಬಂಧಿಸಿ ಜೈಲಿಗೆ ದಬ್ಬಿದ್ದೇ ಮಧುಕರ ಶೆಟ್ಟಿ. ಅವರು ಕರ್ನಾಟಕದ ಆತ್ಮಸಾಕ್ಷಿಯಂತೆ ಇದ್ದವರು. ಪೊಲೀಸ್ ಅಧಿಕಾರಿಯಾದರೂ ಸಮಾಜದ ಬಗ್ಗೆ ಅವರಿಗೆ ಇದ್ದ ಕಾಳಜಿ ಅನುಕರಣೀಯ.

 justice for late Madhukarshetty IPS

ಪೊಲೀಸ್ ಇಲಾಖೆಯಲ್ಲಿ ಇನ್ನಷ್ಟು ಮೇರು ಸ್ಥಾನಗಳನ್ನು ಏರಿ ರಾಜ್ಯದ ಜನರ ಸೇವೆ ಮಾಡಬೇಕಿದ್ದ ಮಧುಕರ್ ಶೆಟ್ಟರನ್ನು ವಿಧಿ ಬಹುಬೇಗ ತನ್ನೆಡೆಗೆ‌ ಕರೆಸಿಕೊಂಡಿತು. ಅಂಥ ಧೀಮಂತ ಪೊಲೀಸ್ ಅಧಿಕಾರಿಯ ಸ್ಮರಣೆಗಾಗಿ ಬೆಂಗಳೂರಿನ ವೃತ್ತವೊಂದಕ್ಕೆ ಅವರ ಹೆಸರು ಇಡಲು ಹೊರಟರೆ, ಯಡಿಯೂರಪ್ಪನವರು ತಮ್ಮ ಪೂರ್ವದ್ವೇಷವನ್ನು ಈಗ ಕಕ್ಕಿಕೊಂಡಿದ್ದಾರೆ.

Recommended Video

      ಬೆಂಗಳೂರು: ರಿಲಯನ್ಸ್ ಡಿಜಿಟಲ್ ಶಾಪ್ ನಲ್ಲಿ ಕಳ್ಳರ ಕರಾಮತ್ತು | Reliance digital | Oneindia Kannada
       justice for late Madhukarshetty IPS

      ಕಾಂಜಿಪೀಂಜಿಗಳ ಹೆಸರನ್ನು ಊರ ತುಂಬಾ ಇಡುವುದಕ್ಕೆ ಉದಾರತೆ ತೋರುವ ನಿಮಗೆ ಸತ್ತ ವ್ಯಕ್ತಿಯ ಮೇಲೆ‌ ಇಷ್ಟೊಂದು ದ್ವೇಷವೇ ? ಮಾನ್ಯ ಮುಖ್ಯಮಂತ್ರಿಗಳೇ‌ ನಿಮ್ಮಿಂದ ಇಂಥ ನಡೆ ನಿರೀಕ್ಷಿಸಿರಲಿಲ್ಲ. ಮಧುಕರ ಶೆಟ್ಟಿ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ವೃತ್ತಕ್ಕೆ ಹೆಸರಿಟ್ಟು ಜ್ಞಾಪಿಸುವ ಅಗತ್ಯವಿರಲಿಲ್ಲ. ಆದರೆ ಸರಕಾರದ ದ್ವೇಷಪೂರಿತ ನಡೆ ಖಂಡಿಸಲೇಬೇಕು. ನಗರಾಭಿವೃದ್ಧಿ ಇಲಾಖೆ ನಿರಾಕರಿಸಿರುವ ವೃತ್ತಕ್ಕೆ ಮಧುಕರ ಶೆಟ್ಟಿ ಹೆಸರಿಡಲೇಬೇಕು. ಇದಕ್ಕಾಗಿ ಬಲವಾಗಿ ಆಗ್ರಹಿಸೋಣ ಎಂದು ಕೋರಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+