June 26th World Drug Day: ಬೆಂಗಳೂರಿನಲ್ಲಿ ಒಂದೇ ವರ್ಷಕ್ಕೆ ಜಪ್ತಿ ಆಯ್ತು ಭಾರಿ ಮೌಲ್ಯದ ಡ್ರಗ್
ಬೆಂಗಳೂರು, ಜೂನ್ 26: ಅತೀ ವೇಗವಾಗಿ ತನ್ನೆಡೆಗೆ ವ್ಯಸನಕ್ಕೆ ಸೆಳೆದುಕೊಳ್ಳುವ ಸಾಮರ್ಥ್ಯದ, ಯುವ ಸಮೂಹವನ್ನು ಹಾಳು ಮಾಡುತ್ತಿರುವ ಡ್ರಗ್ಸ್ ವಿರುದ್ಧ ಎಷ್ಟೇ ಕ್ರಮ ಕೈಗೊಂಡರು ಸಹಿತ ದೇಶದ ಬೃಹತ್ ನಗರಗಳಲ್ಲಿ ಲೀಲಾಜಾಲವಾಗಿ ದಂಧೆ ನಡೆಯುತ್ತಲೇ ಇದೆ. ಇದಕ್ಕೆ ಬೆಂಗಳೂರು ಹೊರತಾಗಿಲ್ಲ. ನಗರದಲ್ಲಿ ಒಂದೇ ವರ್ಷದಲ್ಲಿ ಭಾರೀ ಮೌಲ್ಯದ ಡ್ರಗ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಒಂದೇ ವರ್ಷದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಟ್ಟು ಸುಮಾರು 57 ರೂಪಾಯಿ ಬೆಲೆ ಬಾಳುವ ಡ್ರಗ್ಸ್ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಡ್ರಗ್ಸ್ ಹಾವಳಿ ತಡೆಗಟ್ಟಲು ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ, ದಾಳಿಗಳನ್ನು ಮುಂದುವರಿಸಲಿದ್ದೇವೆ ಎಂದು ಬೆಂಗಳೂರು ಪೊಲೀಸರು ಭಾನುವಾರ ಪ್ರಕಟಿಸಿದ್ದಾರೆ.

ಇಂದು ಜೂನ್ 26 ದಿವನ್ನು ಮಾದಕ ವ್ಯಸನದ ವಿರುದ್ಧ 'ಅಂತಾರಾಷ್ಟ್ರೀಯ ದಿನ ಅಥವಾ ಅಂತಾರಾಷ್ಟ್ರೀಯ ಡ್ರಗ್ ವಿರೋಧಿ ದಿನವಾಗಿ ಆಚರಿಸಲಾಗುತ್ತದೆ ಎಂದು ಬೆಂಗಳೂರು ಪೊಲೀಸರು ಟ್ವೀಟ್ ಮಾಡಿದ್ದಾರೆ. ನಗರದಲ್ಲಿ ಒಂದೇ ವರ್ಷಕ್ಕೆ ಅಂದಾಜು 57 ಕೋಟಿ ರೂಪಾಯಿ ಮೌಲ್ಯದ ಮಾದಕ್ರ ದ್ರವ್ಯ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನೇಕ ಕಡೆ ದಾಳಿ: ದಂಧೆಕೋರರ ಬಂಧನ
ಡ್ರಗ್ಸ್ ಹಾವಳಿ ವಿರುದ್ಧ ತಡಮಾಡದೇ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತದೆ. ನಮ್ಮ ಬೆಂಗಳೂರು ನಗರವನ್ನು ಡ್ರಗ್ಸ್ ಮುಕ್ತ ನಗರವನ್ನಾಗಿ ಮಾಡಲು ನಾವೆಲ್ಲರು ಒಗ್ಗೂಡೋಣ. ಬೆಂಗಳೂರು ಪೊಲೀಸರು ಹಲವು ಸುಳಿವುಗಳ ಆಧಾರದ ಮೇಲೆ ದಾಳಿ ನಡೆಸುತ್ತಿದ್ದಾರೆ. ನಿಖರ ಮಾಹಿತಿ ಮೇರೆಗೆ ಹೀಗೆ ವರ್ಷದಿಂದಲೂ ಅನೇಕ ಕಡೆಗಳಲ್ಲಿ ದಾಳಿ ನಡೆಸಿ ಹಲವು ದಂಧೆಕೋರರನ್ನು ಬಂಧಿಸಿದ್ದಾರೆ. ಮಾದಕವಸ್ತು ಮಾರಾಟ ಮತ್ತು ಸೇವನೆಯಲ್ಲಿ ತೊಡಗಿದ್ದ ಅನೇಕ ವಿದೇಶಿಯರನ್ನು ಗಡೀಪಾರು ಸಹ ಮಾಡಲಾಗಿದೆ.

ಹಿಂದಿನ ತಿಂಗಳು ಮೇ ಅಂತ್ಯಕ್ಕೆ ಅಧಿಕಾರ ವಹಿಸಿಕೊಂಡ ಕೂಡಲೇ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕ (DGP) ಅಲೋಕ್ ಮೋಹನ್ ಅವರು ಮುಂದಿನ ವರ್ಷಗಳಲ್ಲಿ ಬೆಂಗಳೂರನ್ನು ಮಾದಕ ದ್ರವ್ಯ ಮುಕ್ತ ನಗರವನ್ನಾಗಿ ಮಾಡಲು ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
ಡ್ರಗ್ಸ್ ಮುಕ್ತ ನಗರಕ್ಕೆ ಪಣ
ಈ ಡ್ರಗ್ಸ್ ಹಾವಳಿ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಅಂತಾರಾಷ್ಟ್ರೀಯ ಡ್ರಗ್ ದಿನ ಪ್ರಯುಕ್ತ ಎಲ್ಲ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಬೆಂಗಳೂರಿನಲ್ಲಿ ಡ್ರಗ್ಸ್ ಹಾವಳಿ ಮತ್ತು ಅದನ್ನು ನಿಭಾಯಿಸುವ ಬಗ್ಗೆ ಚರ್ಚಿಸಿದ್ದೇವೆ. ಬೆಂಗಳೂರು ಶೀಘ್ರದಲ್ಲೇ ಮಾದಕ ದ್ರವ್ಯ ಮುಕ್ತ ನಗರವಾಗಲಿ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡ್ರಗ್ ಮುಕ್ತಿ ನಗರಕ್ಕಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹಲವು ಕ್ರಮ ಕೈಗೊಳ್ಳುವ ಕುರಿತು ಚಿಂತನೆಯಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ಡ್ರಗ್ ಪೆಡ್ಲರ್‌ಗಳನ್ನು ಪತ್ತೆ ಮಾಡುತ್ತೇವೆ. ಮಾದಕ ವ್ಯಸನದ ವಿರುದ್ಧ ಪೊಲೀಸ್ ಇಲಾಖೆ ಸಮರ ಸಾರಲಿದೆ ಎಂದು ಅವರು ಹೇಳಿದರು.












Click it and Unblock the Notifications