ಗೌರಿ ಲಂಕೇಶ್ ಹತ್ಯೆ ಆರೋಪಿ ನವೀನ್ ನ್ಯಾಯಾಂಗ ಬಂಧನ ವಿಸ್ತರಣೆ
ಬೆಂಗಳೂರು, ಜೂನ್ 11: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿ ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಲಾಗಿದೆ.
3ನೇ ಎಸಿಎಂಎಂ ನ್ಯಾಯಾಲಯಕ್ಕೆ ಇಂದು ಆರೋಪಿ ನವೀನ್ ನನ್ನು ಹಾಜರುಪಡಿಸಲಾಗಿತ್ತು. ಇನ್ನಷ್ಟು ತನಿಖೆಯ ಅವಶ್ಯಕತೆ ಇರುವ ಕಾರಣ ಬಂಧನವನ್ನು ವಿಸ್ತರಿಸುವಂತೆ ನ್ಯಾಯಾಲಯಕ್ಕೆ ವಿಶೇಷ ತನಿಖಾ ದಳ ಮನವಿ ಮಾಡಿತ್ತು.
ತನಿಖಾ ದಳದ ಮನವಿಗೆ ಸ್ಪಂದಿಸಿದ ನ್ಯಾಯಾಲಯವು ಆರೋಪಿಯ ಬಂಧನ ಅವಧಿಯನ್ನು 14 ದಿನಗಳ ಕಾಲ ವಿಸ್ತರಣೆ ಮಾಡಿದೆ. ಫೆಬ್ರವರಿ 16ರಂದು ಕೆ.ಟಿ.ನವೀನ್ ಕುಮಾರ್ ಅನ್ನು ಮೆಜೆಸ್ಟಿಕ್‌ನಲ್ಲಿ ಬಂಧಿಸಲಾಗಿತ್ತು.

ಗೌರಿ ಲಂಕೇಶ್ ಹಂತಕರಿಗೆ ನವೀನ್ ಕುಮಾರ್ ಸಹಾಯ ಮಾಡಿದ್ದ ಎಂದು ಆರೋಪ ಮಾಡಲಾಗಿದ್ದು, ಹತ್ಯೆಯಲ್ಲಿ ಈತನ ಪಾತ್ರ ಮಹತ್ವದ್ದು ಎನ್ನಲಾಗಿದೆ. ವಿಶೇಷ ತನಿಖಾ ದಳವು ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಇನ್ನಷ್ಟು ವಿಚಾರಣೆ ನಡೆಸಬೇಕಾದ ಕಾರಣ ನವೀನ್ ಬಂಧನ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.












Click it and Unblock the Notifications