ಬೆಂಗಳೂರಿನಲ್ಲಿ ಮೈಸೂರು ಮಸಾಲೆ ದೋಸೆ, ಮಸಾಲೆ ಟೀ, ಮಂಗಳೂರು ಬನ್ ಸವಿದ ಜಾಂಟಿ ರೋಡ್ಸ್

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟ್ ದಂತಕಥೆ ಜಾಂಟಿ ರೋಡ್ಸ್ ಅವರು ಬೆಂಗಳೂರಿನ ಟ್ಯಾಕ್ಸಿ ಚಾಲಕನ ಸ್ಥಳೀಯ ಮಾಹಿತಿಗಾಗಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಭಾರತ ಮತ್ತು ಇಲ್ಲಿನ ಸಂಸ್ಕೃತಿ ಮೇಲೆ ಅಪಾರ ಪ್ರೀತಿ ಹೊಂದಿರುವ ಜಾಂಟಿ ರೋಡ್ಸ್ ಬೆಂಗಳೂರನ್ನು ಮನಸಾರೆ ಮೆಚ್ಚಿದ್ದಾರೆ.

ಬೆಂಗಳೂರಿನ ಟ್ರಾಫಿಕ್‌ನಲ್ಲಿ ಪ್ರಯಾಣ ಮಾಡುವ ಮೊದಲು ಹೋಟೆಲ್‌ನಲ್ಲಿ ತಿಂಡಿ ಸವಿಯುವಂತೆ ಕಾರಿನ ಚಾಲಕೆ ಜಾಂಟಿ ರೋಡ್ಸ್‌ಗೆ ಸಲಹೆ ನೀಡಿದ್ದಾರೆ. ಸಲಹೆಯನ್ನು ಗಮನದಲ್ಲಿಟ್ಟುಕೊಂಡು, ರೋಡ್ಸ್ ರಸ್ತೆಬದಿಯ ಉಪಾಹಾರ ಗೃಹದಲ್ಲಿ ಸಾಂಪ್ರದಾಯಿಕ ಭಾರತೀಯ ಉಪಹಾರವನ್ನು ಸವಿದಿದ್ದಾರೆ, ಅಲ್ಲದೆ ಅದರು ರುಚಿಗೆ ಮಾರುಹೋಗಿದ್ದಾರೆ.

Jonty Rhodes Enjoys Masala Dose, Tea, and Mangaluru Bun in Bengaluru

ತಮ್ಮ ಮಿಂಚಿನ ಫೀಲ್ಡಿಂಗ್ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಹೆಸರು ಮಾಡಿರುವ ಜಾಂಟಿ ರೋಡ್ಸ್‌, ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬೆಂಗಳೂರಿನಲ್ಲಿ ತಾವು ಸವಿದ ತಿಂಡಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಫೋಟೊವನ್ನು ಹಂಚಿಕೊಂಡಿದ್ದಾರೆ.

ಲವ್ ಇಂಡಿಯಾ ಎಂದ ಜಾಂಟಿ!

ಜಾಂಟಿ ರೋಡ್ಸ್ ಮಸಾಲೆ ದೋಸೆ ತಿನ್ನುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದು, "ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವಾಗ ಟ್ಯಾಕ್ಸಿ ಚಾಲಕನು ತನ್ನ ನೆಚ್ಚಿನ ರೆಸ್ಟೋರೆಂಟ್‌ನಲ್ಲಿ ರಸ್ತೆಬದಿಯಲ್ಲಿ ತಿನ್ನಲು ನಿಲ್ಲಿಸಲು ಸೂಚಿಸಿದಾಗ, ಕೃತಜ್ಞತೆಯಿಂದ ನಾನು ಅವರ ಸಲಹೆಯನ್ನು ತೆಗೆದುಕೊಂಡೆ. ಅತ್ಯುತ್ತಮವಾದ ಮಂಗಳೂರುಬನ್ ಮತ್ತು ಮೈಸೂರು ಮಸಾಲೆ ದೋಸೆ, ಮಸಾಲಾಚಾಯ್‌ನೊಂದಿಗೆ ಮುಗಿದಿದೆ. ಲವ್ ಇಂಡಿಯಾ," ಎಂದು ಬರೆದಿದ್ದಾರೆ. ಅಲ್ಲದೆ ಹೋಟೆಲ್ ಸಿಬ್ಬಂದಿ ಜೊತೆ ಫೋಟೊ ಹಂಚಿಕೊಂಡಿರುವ ಅವರು, ಅತ್ಯುತ್ತಮ ಸಿಬ್ಬಂದಿ ಎಂದು ಹೊಗಳಿದ್ದಾರೆ.

ಈ ಪೋಸ್ಟ್ ಇದುವರೆಗೂ 472 ಸಾವಿರ ವೀಕ್ಷಣೆಗಳನ್ನು ಕಂಡಿದೆ. 10 ಸಾವಿರ ನೆಟ್ಟಿಗರು ಈ ಟ್ವೀಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವರು ಜಾಂಟಿ ರೋಡ್ಸ್ ಅವರ ಫೋಟೊ ನೋಡಿದ ನಂತರ ನಮಗೂ ಮಂಗಳೂರು ಬನ್ಸ್ ತಿನ್ನಬೇಕು ಅನಿಸುತ್ತಿದೆ ಎಂದು ಹೇಳಿದ್ದಾರೆ.

ಇನ್ನು ಹಲವು ಅಭಿಮಾನಿಗಳು ಬೆಂಗಳೂರನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಜಗತ್ತಿನ ಶ್ರೇಷ್ಠ ಫೀಲ್ಡರ್ ಈಗ ಅತ್ಯುತ್ತಮ ಮೆನುವನ್ನು ಕ್ಯಾಚ್ ಹಿಡಿದುಕೊಂಡಿದ್ದಾರೆ ಎಂದು ಅವರ ತಿಂಡಿಯ ಆಯ್ಕೆಗಳನ್ನು ಶ್ಲಾಘಿಸಿದ್ದಾರೆ.

ಮತ್ತೊಬ್ಬರು ಬೆಂಗಳೂರಿಗೆ ಸ್ವಾಗತ, ಭಾರತಕ್ಕೆ ಬಂದಾಗ ಭಾರತ ತಂಡದ ಆಟಗಾರರಿಗೆ ಫೀಲ್ಡಿಂಗ್ ಬಗ್ಗೆ ಸಲಹೆಗಳನ್ನು ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಜಾಂಟಿ ರೋಡ್ಸ್ ಭಾರತದ ಜೊತೆ ವಿಶೇಷವಾದ ಸಂಬಂಧವನ್ನು ಹೊಂದಿದ್ದಾರೆ. ಅವರು ತಮ್ಮ ಮಗಳಿಗೆ ಇಂಡಿಯಾ ಎಂದು ಹೆಸರಿಸಿದ್ದು, ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ವಸ್ತ್ರದ ಮೇಲಿನ ಅವರ ಒಲವನ್ನು ಪ್ರತಿಬಿಂಬಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+