ನಂದಿ ಬೆಟ್ಟಕ್ಕೆ ಜಾಲಿ ರೈಡ್ : ರಸ್ತೆ ಅಪಘಾತದಲ್ಲಿ ಯುವಕ ಸಾವು

ಬೆಂಗಳೂರು, ಜುಲೈ 29 : ಬೆಂಗಳೂರಿನಲ್ಲಿ ಜಾಲಿ ರೈಡ್ ಹೊರಟ್ಟಿದ್ದ ಯುವಕ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಹೆಬ್ಬಾಳ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೃತಪಟ್ಟ ಯುವಕ ಡಾಕ್ಟರ್ ಆಗಿದ್ದು, ಹೊಸಕೋಟೆಯಲ್ಲಿ ಕೆಲಸ ಮಾಡುತ್ತಿದ್ದರು.

ಏರ್‌ಪೋರ್ಟ್‌ ರಸ್ತೆಯ ಫ್ಲೈ ಓವರ್ ಮೇಲೆ ನಡೆದ ಅಪಘಾತದಲ್ಲಿ ಮೊಹಮ್ಮದ್ ನಿಷಾದ್ ಸಾವನ್ನಪ್ಪಿದ್ದಾನೆ. ಕೆಟಿಎಂ ಡ್ಯೂಕ್ ಬೈಕ್‌ನಲ್ಲಿ ನಿಷಾದ್ ಮತ್ತು ಆತನ ಸ್ನೇಹಿತ ತೆರಳುತ್ತಿದ್ದರು. ವೇಗವಾಗಿ ಸಾಗುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿದೆ.

ರಸ್ತೆ ಮೇಲೆ ಬಿದ್ದ ನಿಷಾದ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಆತನ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಬ್ಬಾಳ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Jolly ride in a bike : Youth killed in road accident

ಭಾನುವಾರ ಬೆಂಗಳೂರಿನಿಂದ ನಂದಿ ಬೆಟ್ಟಕ್ಕೆ 100ಕ್ಕೂ ಹೆಚ್ಚು ಯುವಕರು ಬೈಕ್‌ನಲ್ಲಿ ಜಾಲಿ ರೈಡ್ ಹೊರಟಿದ್ದರು. ಏರ್‌ ಪೋರ್ಟ್‌ ರಸ್ತೆಯಲ್ಲಿ ಸಾಗುವಾಗ ಈ ಅಪಘಾತವಾಗಿದೆ. ಬೈಕ್ ಅಪಘಾತದಿಂದಾಗಿ ಏರ್‌ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಮೃತಪಟ್ಟ ಮೊಹಮ್ಮದ್ ನಿಷಾದ್ ಡಾಕ್ಟರ್ ಆಗಿದ್ದು, ಹೊಸಕೋಟೆಯ ಖಾಸಗಿ ನರ್ಸಿಂಗ್‌ ಹೋಮ್‌ನಲ್ಲಿ ಕೆಲಸ ಮಾಡುತ್ತಿದ್ದರು. ಬೆಂಗಳೂರು ನಗರದ ಸಿಟಿ ಬೈಕರ್ಸ್ ಕ್ಲಬ್ ಸದಸ್ಯರಾಗಿದ್ದರು, ಕ್ಲಬ್ ವತಿಯಿಂದಲೇ ಭಾನುವಾರ ನಂದಿ ಬೆಟ್ಟಕ್ಕೆ ರೈಡ್ ಹೊರಟಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+