ಲೋಕಾಯುಕ್ತ ನಿರ್ದೇಶನ: ಅರಕೆರೆ ಜಂಟಿ ಸಮೀಕ್ಷೆ ನಡೆಸಿದ ಅಧಿಕಾರಿಗಳು

ಬೆಂಗಳೂರು, ಅಕ್ಟೋಬರ್ 25: ನಗರದ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿರುವ ಅರಕೆರೆ ಒತ್ತುವರಿಗೆ ಸಂಬಂಧಿಸಿದಂತೆ ಗುರುವಾರ ಸ್ಥಳೀಯ ಸಂಸ್ಥೆಗಳ ಸಮ್ಮುಖದಲ್ಲಿ ಜಂಟಿ ಸರ್ವೆ ನಡೆಯಿತು.

ಒತ್ತುವರಿ ಆರೋಪಕ್ಕೆ ಗುರಿಯಾಗಿರುವ ಕೆರೆಯ ಸಂರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ಯುನೈಟೆಡ್ ಬೆಂಗಳೂರು ಸಂಘಟನೆಯು ಲೋಕಾಯುಕ್ತಕ್ಕೆ ಈ ಕುರಿತು ದೂರು ಸಲ್ಲಿಸಿತ್ತು. ದೂರನ್ನು ಪರಾಮರ್ಶೆ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಜಲಂಂಡಳಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಂಂಡಳಿಯು ಜಂಟಿಯಾಗಿ ಸರ್ವೇ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ.

ಮೂಲಗಳ ಪ್ರಕಾರ ಅರಕೆರೆಯು ಬಿಡಿಎ ವ್ಯಾಪ್ತಿಗೆ ಬರಲಿದೆ. ಆದರೆ ಖಾಸಗಿ ವ್ಯಕ್ತಿಯೊಬ್ಬರು ಕೆರೆಯ ಒಂದು ಭಾಗ ತಮಗೆ ಸೇರಿದ್ದು ಎಂದು ವಾದ ಮಾಡುತ್ತಿದ್ದಾರೆ, ದಾಖಲೆಗಳಲ್ಲೂ ಅದು ಖಾಸಗಿ ಭೂಮಿ ಎಂದು ನಮೂದಾಗಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಗುರುವಾರ ಅರಕೆರೆ ಸುತ್ತಲ ಪ್ರದೇಶದಲ್ಲಿ ಸರ್ವೇ ನಡೆಸಲಾಗಿದೆ. ಅಂತಿಮ ವರದಿ ಅಕ್ಟೋಬರ್ 31ರಂದು ಮಧ್ಯಂತರ ವರದಿ ಸಲ್ಲಿಕೆಯಾಗಲಿದೆ.

2014 ಕೆರೆ ಅಭಿವೃದ್ಧಿ ಮಾಡಬೇಕು ಎಂದು 5 ಕೋಟಿ ಬಿಡಿಎಯಿಂದ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಇದುವರೆಗೂ 3.6 ಕೋಟಿ ರೂ ವೆಚ್ಚ ಮಾಡಿದ್ದಾರೆ ಆದರೆ ಯಾವ ಅಭಿವೃದ್ಧಿಯೂ ಆಗಿಲ್ಲ,ಕೊಳಚೆ ನೀರು ನದಿಗೆ ಹರಿದು ಬರುವುದು ಇನ್ನೂ ನಿಂತಿಲ್ಲ, ಪರಿಸರ ಮಾಲಿನ್ಯವಾಗಿರಬಹುದು ಅಥವಾ ಅಲ್ಲಿನ ಸುತ್ತಮುತ್ತಲಿನ ಪರಿಸರದಲ್ಲಿ ಕಸವನ್ನು ಹಾಕುವುದಾಗಿರಲಿ ಯಾವುದೂ ಅಭಿವೃದ್ಧಿಯಾಗಿಲ್ಲ, ಅದೇ ಸ್ಥಿತಿಯಲ್ಲಿದೆ. ಕೆರೆಯನ್ನು ನೋಡಿದರೆ ಮೂರೂವರೆ ಕೋಟಿ ಹಣವನ್ನು ಖರ್ಚು ಮಾಡಿದ ಹಾಗೆ ಕಾಣುವುದೇ ಇಲ್ಲ.

Joint survey conducted in Arakere

ಸುಮಾರು 6 ಅಕರೆಯಷ್ಟು ಕೆರೆ ಜಾಗ ಒತ್ತುವರಿಯಾಗಿದೆ ಎನ್ನುವ ಮಾಹಿತಿ ಇದೆ, ಈ ಕುರಿತು ಅಕ್ಟೋಬರ್ 1ರಂದು ಮಧ್ಯಂತರ ಮಾಹಿತಿ ದೊರೆಯಲಿದೆ. ಕೆರೆಯುವ ಸುಮಾರು 35ಕ್ಕೂ ಹೆಚ್ಚು ಎಕರೆ ಪ್ರದೇಶವನ್ನು ಹೊಂದಿದೆ ಆದರೆ ಕೆರೆಯನ್ನು ನೋಡಿದರೆ ಕೆರೆ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ, ದಾಖಲೆ ಪ್ರಕಾರ ಕೇವಲ 6 ಎಕರೆ ಪ್ರದೇಶ ಒತ್ತುವರಿಯಾಗಿದೆ ಆದರೆ ಸರ್ವೇ ವರದಿ ಬಂದ ನಂತರ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+