ಉದ್ಯೋಗ ಬದಲಾವಣೆ ಬೇಕೇ, ಒಂದೇ ಕಂಪನಿಗೆ ನಿಷ್ಠೆ ಸರಿಯೇ ? ಸಿಲಿಕಾನ್ ಸಿಟಿ ಯುವಕನ ಮಾತು ವೈರಲ್, ಮಜವಾಗಿದೆ ಕಮೆಂಟ್ಸ್
ಉದ್ಯೋಗದ ಮೇಲಿನ ನಿಷ್ಠೆ ಮತ್ತು ವೃತ್ತಿಜೀವನದ ಬೆಳವಣಿಗೆ ಕುರಿತು ಬೆಂಗಳೂರಿನ ವ್ಯಕ್ತಿಯೊಬ್ಬರು ವ್ಯಕ್ತಪಡಿಸಿದ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಉದ್ಯೋಗಿಗಳು ಒಂದೇ ಕಂಪನಿಯಲ್ಲಿ ದೀರ್ಘಕಾಲ ಮುಂದುವರಿಯಬೇಕೇ ಅಥವಾ ವೃತ್ತಿಪರ ಬೆಳವಣಿಗೆ ಸಿಕ್ಕಾಗ ಹೊಸ ಅವಕಾಶಗಳಿಗಾಗಿ ಉದ್ಯೋಗ ಬದಲಾಯಿಸಬೇಕೇ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ. ಸಾಮಾನ್ಯವಾಗಿ ಕೆಲವರು ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡಿ ನಿವೃತ್ತಿ ಆಗುತ್ತಾರೆ. ಆದರೆ ಈಗ ಇರುವ ಯುವಕ ಮತ್ತು ಯುವತಿಯರು ಇದಕ್ಕೆ ಭಿನ್ನ ಅವಕಾಶಗಳು ಸಿಕ್ಕರೆ ಕಂಪನಿಗಳನ್ನು ಬದಲಾಯಿಸುತ್ತಾರೆ. ಒಳ್ಳೆಯ ಸಂಬಳ ಸಿಗುವ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮಾಣಿಕ್ ಸಲಾರಿಯಾ ಎಂಬ ವ್ಯಕ್ತಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋದಲ್ಲಿ ಅವರು ಸಂಬಳ ಹೆಚ್ಚಳ, ಪ್ರಮೋಶನ್ ಅವಕಾಶಗಳು ಹಾಗೂ ಕಾರ್ಪೊರೇಟ್ ಉದ್ಯೋಗಗಳಲ್ಲಿ ಎದುರಾಗುವ ವೃತ್ತಿಜೀವನದ ಅನಿಶ್ಚಲತೆ ಕುರಿತು ಮಾತನಾಡಿದ್ದಾರೆ. ಈ ವಿಡಿಯೋಗೆ ನಿಷ್ಠೆಯೇ ಅಥವಾ ಬದಲಾವಣೆಯೇ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಮಜವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
ವೀಡಿಯೊದಲ್ಲಿ ಕಳೆದ ಮೂರು ವರ್ಷಗಳಿಂದ ಒಂದೇ ಕಂಪನಿಗೆ ನಿಷ್ಠರಾಗಿರುವ ಉದ್ಯೋಗಿಗಳು ತಾವು ಹೇಳಲಿರುವ ವಿಷಯವನ್ನು ಇಷ್ಟಪಡದಿರಬಹುದು, ಆದರೆ ಸತ್ಯವೆಂದರೆ ಕಂಪನಿಗಳು ಯಾವಾಗಲೂ ನಿಷ್ಠೆಗೆ ಪ್ರತಿಫಲ ನೀಡುವುದಿಲ್ಲ ಎಂದು ಸಲಾರಿಯಾ ಅವರು ಅಭಿಪ್ರಾಯಪಟ್ಟಿದ್ದಾರೆ. ಉದ್ಯೋಗಿಗಳು ಸಾಮಾನ್ಯವಾಗಿ ಒಂದೇ ಕಂಪನಿಯಲ್ಲಿದ್ದರೆ ಶೇ. 10% ಸಂಬಳವನ್ನು ಹೆಚ್ಚಾಗಿ ಪಡೆಯಬಹುದು. ಆದರೆ ಒಂದು ಹುದ್ದೆ ತೆರೆವಾದಾಗ ಅಥವಾ ಪ್ರಮೋಶನ್ ಸಮಯ ಬಂದಾಗ, ಕಂಪನಿಗಳು ಹೆಚ್ಚಾಗಿ ಹೊರಗಿನಿಂದ ಯಾರನ್ನಾದರೂ ನೇಮಿಸಿಕೊಳ್ಳಲು ಬಯಸುತ್ತವೆ. ಅಲ್ಲದೆ ಬಹುತೇಕ ಸಂದರ್ಭಗಳಲ್ಲಿ ತಮ್ಮ ಕಂಪನಿಯ ಉದ್ಯೋಗಳಿಗಿಂತ ಹೆಚ್ಚಾಗಿ ಹೊರಗಿನವರು ಹಾಗೂ ಹೆಚ್ಚಿನ CTC ಕೊಟ್ಟು ನೇಮಕ ಮಾಡಿಕೊಳ್ಳುತ್ತಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಒಂದು ಸಂಸ್ಥೆಯಗೆ ಕುರುಡು ನಿಷ್ಠೆಯನ್ನು ಪ್ರಶ್ನಿಸುವ ಸಂದರ್ಭದಲ್ಲಿಯೇ ಉದ್ಯೋಗವನ್ನು ಆಗಾಗ್ಗೆ ಬದಲಾಯಿಸುವುದು ಸಹ ಸರಿಯಾದ ವಿಧಾನವಲ್ಲ ಎಂದು ಸಲಾರಿಯಾ ಅಭಿಪ್ರಾಯಪಟ್ಟಿದ್ದಾರೆ. ಪ್ರತಿ ಆರು ತಿಂಗಳಿಗೊಮ್ಮೆ ಉದ್ಯೋಗಗಳನ್ನು ಬದಲಾಯಿಸುವ ಪ್ರವೃತ್ತಿಯನ್ನು ನಾನು ಸಹ ಒಪ್ಪುವುದಿಲ್ಲ ಏಕೆಂದರೆ ಅದು ವ್ಯಕ್ತಿಯ ರೆಸ್ಯೂಮ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.
ಉದ್ಯೋಗಿಗಳು ಕೆರಿಯರ್ ಡೆವಲಪ್‌ಮೆಂಟ್, ಬಡ್ತಿಗಳು ಮತ್ತು ಉತ್ತಮ ಅವಕಾಶಗಳನ್ನು ಪಡೆಯುತ್ತಿದ್ದರೆ ಎರಡು ಮೂರು ವರ್ಷಗಳ ಕಾಲ ಕಂಪನಿಯೊಂದಿಗೆ ಇರುವುದು ಸರಿಯಾಗಿಯೇ ಇರುತ್ತದೆ ಎಂದು ಹೇಳಿದ್ದಾರೆ. ಆದಾಗ್ಯೂ, ಯಾವುದೇ ಬೆಳವಣಿಗೆ ಇಲ್ಲದಿದ್ದಾಗ, ಅವರ CTC ಹೆಚ್ಚಾಗುತ್ತಿಲ್ಲ ಅಥವಾ ಅವರು ಹೊಸದನ್ನು ಕಲಿಯುತ್ತಿಲ್ಲ ಎಂದು ಹೇಳಿದ್ದಾರೆ. ಉದ್ಯೋಗಿಗಳು ಒಂದು ವರ್ಷದ ನಂತರ ಅಥವಾ ಎರಡು, ಮೂರು ವರ್ಷಗಳ ನಂತರ ಮಾತ್ರ ಉದ್ಯೋಗ ಬದಲಾಯಿಸಬೇಕು ಎನ್ನುವ ಕಠಿಣ ನಿಯಮವಿಲ್ಲ ಎಂದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಪ್ರತಿಕ್ರಿಯೆ
ಈ ವೈರಲ್ ವಿಡಿಯೋಗೆ ಹಲವು ಉದ್ಯೋಗಿಗಳು ಪ್ರತಿಕ್ರಿಯೆ ನೀಡಿದ್ದಾರೆ. ವಿಶಾಲ್ ಶರ್ಮಾ ಎನ್ನುವವರು ನಿಮ್ಮ ಪ್ರತಿಯೊಂದು ಮಾತು ಕೂಡ ಕಾರ್ಪೊರೇಟ್‌ನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದೆ ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗರು ನಮಸ್ಕಾರ, ನನ್ನದೊಂದು ಒಂದು ಸಣ್ಣ ಪ್ರಶ್ನೆ ನಾನು ಜನವರಿ 2026 ರಿಂದ (ಮೊದಲ ಕಂಪನಿ) ಕೆಲಸ ಮಾಡಲು ಪ್ರಾರಂಭಿಸಿದೆ ಮತ್ತು ಜುಲೈ 2026 ರಲ್ಲಿ ಮುಂದಿನ ಕಂಪನಿಗೆ ಸೇರುತ್ತೇನೆ. ಈಗ ನಾನು ಇಲ್ಲಿ ಒಂದು ಅಥವಾ ಎರಡು ವರ್ಷ ಇರಬೇಕೇ ಅಥವಾ ಉತ್ತಮ ಸಿಟಿಸಿ ನೀಡಿದರೆ ಮುಂದಿನ 6 ತಿಂಗಳಲ್ಲಿ ಬದಲಾಯಿಸುವುದು ಸರಿಯೇ ಅಂತ ಯುವಕರೊಬ್ಬರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications