JEE advanced Results 2024: ಜೆಇಇ ಅಡ್ವಾನ್ಸ್ಡ್ ಫಲಿತಾಂಶದಲ್ಲಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳ ಅದ್ಭುತ ಸಾಧನೆ
JEE advanced Results 2024: ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಫಲಿತಾಂಶ ಭಾನುವಾರ (ಜೂನ್ 10) ಪ್ರಕಟವಾಗಿದ್ದು, ಭಾರತದ ಟಾಪ್ 20ರ ರ‍್ಯಾಂಕ್ ಪಟ್ಟಿಯಲ್ಲಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹಾಗಾದರೆ ಇವರ ಹಿನ್ನೆಲೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಶಾನ್ ಥಾಮಸ್ ಕೋಶಿ ಎಂಬ ವಿದ್ಯಾರ್ಥಿ 360ಕ್ಕೆ 325 ಅಂಕಗಳನ್ನು ಗಳಿಸಿದ್ದು, ಅಮೋಘ್ ಅಗರ್ವಾಲ್ 360ಕ್ಕೆ 322 ಅಂಕಗಳನ್ನು ಗಳಿಸುವ (ಜೆಇಇ ಮೇನ್ಸ್‌ನಲ್ಲಿ ಶೇಕಡಾ 100ರಷ್ಟು ಅಂಕ) ಮೂಲಕ ಭಾರತದ ಟಾಪ್ 20ರ ರ‍್ಯಾಂಕ್ ಪಟ್ಟಿಯಲ್ಲಿದ್ದಾರೆ.

ಪ್ರೋಗ್ರಾಮಿಂಗ್ ಬಗ್ಗೆ ಒಲವು ಹೊಂದಿರುವ ಶಾನ್ ಥಾಮಸ್ ಕೋಶಿ ಅವರು ತನ್ನ ಬಿಡುವಿನ ವೇಳೆಯಲ್ಲಿ ಉಪಯುಕ್ತ ಅಪ್ಲಿಕೇಶನ್‌ಗಳನ್ನು ಕ್ರಿಯೆಟ್ ಮಾಡುತ್ತಿರುತ್ತಿರುತ್ತಾರೆ. ಇನ್ನು ಶಾನ್ ಅವರ ತಾಯಿ, ಇನ್ಫೋಸಿಸ್ ಉದ್ಯೋಗಿ ರೋಸ್ ಮೇರಿ ಜಾನ್ ಈ ಬಗ್ಗೆ ಪ್ರತಿಕ್ರಯಿಸಿದ್ದು, "ಮಗ ಶಾನ್ ಪ್ರೋಗ್ರಾಮಿಂಗ್ ಅನ್ನು ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅಲ್ಲದೆ, ಇತ್ತೀಚೆಗಷ್ಟೇ ಎಲ್ಲಾ ಫೋಟೋಗಳನ್ನು PDF ಫಾರ್ಮ್ಯಾಟ್‌ಗೆ ಸ್ವಯಂಚಾಲಿತವಾಗಿ ಏಕೀಕರಿಸುವ ಅಪ್ಲಿಕೇಶನ್ ಅನ್ನು ಕ್ರಿಯೇಟ್ ಮಾಡಿದ್ದಾರೆ," ಎಂದು ಹೇಳಿದರು.
" ಅಲ್ಲದೆ, ಹಣಕಾಸು ಅಪ್ಲಿಕೇಶನ್ ಅನ್ನು ಸಹ ಕ್ರಿಯೇಟ್ ಮಾಡಿದ್ದು, ಈ ಮೂಲಕವೇ ತಮ್ಮ ಖರ್ಚುವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದರು," ಎಂದು ಶಾನ್ ತಾಯಿ ಹೇಳಿದ್ದಾರೆ. ಇನ್ನು ಶಾನ್ GEAR ಇಂಟರ್‌ನ್ಯಾಶನಲ್ ಸ್ಕೂಲ್‌ನ ವಿದ್ಯಾರ್ಥಿಯಾಗಿದ್ದಾರೆ. ಅವರ ತಂದೆ ನಿಶಿಲ್ ಕೋಶಿ IIT ಖರಗ್‌ಪುರದ ಹಳೆಯ ವಿದ್ಯಾರ್ಥಿಯಾಗಿದ್ದು, ಅವರು 1993ರಲ್ಲಿ AIR 257 ಅನ್ನು ಗಳಿಸಿದ್ದರು. ಇದೀಗ ಸ್ಟಾರ್ಟ್‌ಅಪ್ ಹೊಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ತನ್ನ ತಂದೆಯ ಶ್ರಮದಿಂದ ಸ್ಫೂರ್ತಿ ಪಡೆದ ಬೆಂಗಳೂರಿನ ವಿದ್ಯಾರ್ಥಿ ಶಾನ್ ಅವರು ಐಐಟಿ-ಬಾಂಬೆಯನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಎಲೆಕ್ಟ್ರಾನಿಕ್ಸ್ ಅನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಈ ಮೂಲಕ ರೊಬೊಟಿಕ್ಸ್ ಕ್ಷೇತ್ರದಲ್ಲಿ ಕೆಲಸ ಮಾಡಲು ಮುಂದಾಗಿದ್ದಾರೆ.
ಟಾಪ್ 20ರಲ್ಲಿ ಸ್ಥಾನ ಪಡೆದ ಬೆಂಗಳೂರಿನ ಮತ್ತೊಬ್ಬ ವಿದ್ಯಾರ್ಥಿ ಅಮೋಘ್ ಅಗರ್ವಾಲ್ ಆಗಿದ್ದಾರೆ. ಸಾಫ್ಟ್‌ವೇರ್ ಕಂಪನಿಯೊಂದರ ಸಹ ಸಂಸ್ಥಾಪಕ ಸಲೀಲ್ ಅಗರ್ವಾಲ್ ಮತ್ತು ಗೃಹಿಣಿ ಆವಂತಿಕಾ ಅವರ ಪುತ್ರ ಅಮೋಘ್ ಪ್ರತಿಕ್ರಿಯಿಸಿದ್ದು, "ಎರಡು ವರ್ಷಗಳ ನನ್ನ ಕಠಿಣ ಪರಿಶ್ರಮಕ್ಕೆ ಕೊನೆಗೂ ಫಲ ಸಿಕ್ಕಿದೆ. ನಾನು ಅತ್ಯುತ್ತಮ IITಗಳಲ್ಲಿ ಒಂದಕ್ಕೆ ಅರ್ಜಿ ಸಲ್ಲಿಸುತ್ತೇನೆ," ಎಂದು ಹೇಳಿದ್ದಾರೆ.
ಕಾವೇರಿ ಭವನದ ನಾರಾಯಣ ಸಿಒ ಶಾಲೆಯ ವಿದ್ಯಾರ್ಥಿ ಅಮೋಘ್ "ತಮ್ಮ ಶಿಕ್ಷಕರ ಮಾರ್ಗದರ್ಶನಗಳನ್ನು ಅನುಸರಿದ್ದಕ್ಕೆ ಈ ಸಾಧನೆ ಮಾಡಲು ಸಾಧ್ಯವಾಯಿತು. ತನಗೆ ಬೆಂಬಲ ಬೇಕಾದಾಗ ಅವರನ್ನು ಸಂಪರ್ಕಿಸುತ್ತೇನೆ," ಎಂದರು. ಇನ್ನು "ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಅಧ್ಯಯನ ಮಾಡಿದ್ದೇನೆ ಮತ್ತು ನನ್ನ ಹಾಕಿಕೊಂಡ ವೇಳಾಪಟ್ಟಿಯನ್ನು ಸರಿಯಾಗಿ ಪಾಲಿಸಿದ್ದಕ್ಕೆ ಈ ಸಾಧನೆ ಮಾಡಲು ಸಾಧ್ಯವಾಯಿತು. ನಾನು ಕೆಲವೊಮ್ಮೆ ನನ್ನ ಮನಸ್ಸನ್ನು ರಿಫ್ರೆಶ್ ಮಾಡಿಕೊಳ್ಳಲು ಕ್ರೀಡೆಗಳನ್ನು ಆಡುತ್ತಿದ್ದೆ," ಎಂದು ಹೇಳಿದರು.
-
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ












Click it and Unblock the Notifications