ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಬಲಿಗರನ್ನು ಬೆಂಗಳೂರಿಗೆ ಕರೆತರಲು 3,000 ಬಸ್‌ ಬಾಡಿಗೆ ಪಡೆದ ಜೆಡಿಎಸ್

|
Google Oneindia Kannada News

ಬೆಂಗಳೂರು ಮೇ 13: ಬೆಂಬಲಿಗರನ್ನು ರ್‍ಯಾಲಿಗಾಗಿ ಬೆಂಗಳೂರಿಗೆ ಕರೆತರಲು ಜೆಡಿಎಸ್ 3,000 ಬಸ್‌ಗಳನ್ನು ಬಾಡಿಗೆಗೆ ಪಡೆದಿದೆ ಎಂದು ತಿಳಿದು ಬಂದಿದೆ. ರಾಜ್ಯ ರಾಜಧಾನಿಯಲ್ಲಿ ಇಂದು (ಮೇ 13) ಜೆಡಿಎಸ್‌ನ ಜನತಾ ಜಲಧಾರೆ ಕಾರ್ಯಕ್ರಮದ ಸಮಾರೋಪ ರ್‍ಯಾಲಿಗಾಗಿ ಹಾಸನದಿಂದ ಕಾರ್ಯಕರ್ತರನ್ನು ಕರೆತರಲು 3,000 ಬಸ್‌ಗಳನ್ನು ಬಾಡಿಗೆಗೆ ಪಡೆದಿದೆ.

ಹಾಸನ ಜಿಲ್ಲೆಯಿಂದ ನೂರಾರು ಜನತಾ ದಳ (ಜಾತ್ಯತೀತ) ಕಾರ್ಯಕರ್ತರು ಮೇ 13 ರಂದು ಪಕ್ಷದ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ರ್‍ಯಾಲಿಯಲ್ಲಿ ಪಾಲ್ಗೊಳ್ಳಲು ಹಾಸನದಿಂದ ಪಕ್ಷದ ಕಾರ್ಯಕರ್ತರಿಗೆ 547 ಕೆಎಸ್‌ಆರ್‌ಟಿಸಿ ಬಸ್‌ಗಳು, 600 ಖಾಸಗಿ ವಾಹನಗಳು ಮತ್ತು 2,000 ವೈಯಕ್ತಿಕ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಮೆಗಾ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಹಾಸನದಿಂದ ಕಾರ್ಯಕರ್ತರು ತೆರಳುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ರಘು ಹೊಂಗೆರೆ ತಿಳಿಸಿದ್ದಾರೆ. ಪಕ್ಷದ ಭದ್ರಕೋಟೆಯಾಗಿರುವ ಹಾಸನದಿಂದ ಸುಮಾರು 40,000 ಮಂದಿ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಹಾಸನದಿಂದ ಪಕ್ಷದ ಪ್ರಮುಖ ನಾಯಕರು ರ್‍ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ ಎನ್ನಲಾಗಿದೆ.

JDS to hire 3,000 buses to bring supporters to Bangalore

ಸಾರಿಗೆ

ನೂರಾರು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಜೆಡಿ (ಎಸ್) ತನ್ನ ಕಾರ್ಯಕರ್ತರನ್ನು ರ್‍ಯಾಲಿಗೆ ಕರೆದೊಯ್ಯಲು ಬಾಡಿಗೆಗೆ ಪಡೆದಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆ ಸೇವೆಗಳಿಗೆ ಹೊಡೆತ ಬೀಳುವ ನಿರೀಕ್ಷೆಯಿದೆ. ಪಕ್ಷ ಹಳೆ ಮೈಸೂರು ಪ್ರದೇಶದಲ್ಲಿ ದಿನಕ್ಕೆ ಒಟ್ಟು 3,000 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಾಡಿಗೆಗೆ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.

JDS to hire 3,000 buses to bring supporters to Bangalore

ಮೇ 12 ರಂದು ಹಾಸನಕ್ಕೆ ಆಗಮಿಸಿದ್ದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಮಾತನಾಡಿ, 'ರಾಜಕೀಯ ರ್‍ಯಾಲಿಗಾಗಿ ರಸ್ತೆ ಸಾರಿಗೆ ಸಂಸ್ಥೆಯು ಇಷ್ಟೊಂದು ಬಸ್ಸುಗಳನ್ನು ಬೇರೆಡೆಗೆ ತಿರುಗಿಸುವ ಮೂಲಕ ಗ್ರಾಮೀಣ ಜನತೆಗೆ ಸೇವೆಯನ್ನು ನಿರಾಕರಿಸುತ್ತಿದೆ. ಇಂತಹ ರ್‍ಯಾಲಿಗಳಿಗೆ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳನ್ನು ತಿರುಗಿಸಬಹುದು. ಆದರೆ ಪಾಲಿಕೆಯು ರಾಜಕೀಯ ಪಕ್ಷವೊಂದಕ್ಕೆ ಇಷ್ಟೊಂದು ಬಸ್ ಗಳನ್ನು ಮಂಜೂರು ಮಾಡುವ ಮೂಲಕ ಸಾರ್ವಜನಿಕರನ್ನು ಸಂಕಷ್ಟಕ್ಕೆ ದೂಡಿದೆ. ಪಾಲಿಕೆ ತನ್ನ ಉಳಿವಿಗಾಗಿ ಸಾರ್ವಜನಿಕರ ಮೇಲೆ ಅವಲಂಬಿತವಾಗಿದೆಯೇ ಹೊರತು ಯಾವುದೇ ರಾಜಕೀಯ ಪಕ್ಷವನ್ನಲ್ಲ ಎಂಬುದನ್ನು ಮರೆಯಬಾರದು' ಎಂದರು.

Recommended Video

ಧೋನಿ ತೆಗೆದುಕೊಂಡ ಕೆಟ್ಟ ನಿರ್ಧಾರದಿಂದ ಚೆನ್ನೈಗೆ ಇಂಥಾ ಪರಿಸ್ಥಿತಿ ಬಂತು!! | Oneindia Kannada

English summary
JDS has hired 3,000 buses to bring workers from Hassan for the closing ceremony of the JDS Janata jaladhare Program in the state capital today (May 13).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X