ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆಯ ಕಾರಣಕ್ಕೆ ಪಂಚರತ್ನ ರಥಯಾತ್ರೆ 4 ದಿನ ಮುಂದೂಡಿಕೆ

|
Google Oneindia Kannada News

ಬೆಂಗಳೂರು, ಡಿ.11: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಭಾನುವಾರ ಪುನಾರಂಭ ಆಗಬೇಕಿದ್ದ ಪಂಚರತ್ನ ರಥಯಾತ್ರೆಯನ್ನು ನಾಲ್ಕು ದಿನಗಳ ಮಟ್ಟಿಗೆ ಮುಂದೂಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬಂಗಾಳಕೊಲ್ಲಿಯಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ ಒಳನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಈ ಕಾರಣಕ್ಕೆ ಪಂಚರತ್ನ ರಥಯಾತ್ರೆಯನ್ನು ಅನಿವಾರ್ಯವಾಗಿ ಮುಂದಕ್ಕೆ ಹಾಕಲಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

ಗುಬ್ಬಿಯಲ್ಲಿ ಪಂಚರತ್ನ ಯಾತ್ರೆ; ಶಕ್ತಿ ಪ್ರದರ್ಶಿಸಿದ ಎಚ್‌ಡಿಕೆಗುಬ್ಬಿಯಲ್ಲಿ ಪಂಚರತ್ನ ಯಾತ್ರೆ; ಶಕ್ತಿ ಪ್ರದರ್ಶಿಸಿದ ಎಚ್‌ಡಿಕೆ

ಪೂರ್ವ ನಿಗದಿತ ವೇಳಾಪಟ್ಟಿಯಂತೆ ಪಂಚರತ್ನ ರಥಯಾತ್ರೆಯು ಭಾನುವಾರ ಚಿಕ್ಕನಾಯಕನಹಳ್ಳಿಯಿಂದ ಶುರುವಾಗಬೇಕಿತ್ತು. ತದನಂತರ ತುರುವೇಕೆರೆ, ತುಮಕೂರು ಗ್ರಾಮಾಂತರ, ಕುಣಿಗಲ್ ಕ್ಷೇತ್ರಗಳಲ್ಲಿ ರಥಯಾತ್ರೆ ನಡೆಯಬೇಕಿತ್ತು.

JDS Pancharatna Rath Yatra postponed for 4 days due to rain

ತುಮಕೂರು ಜಿಲ್ಲೆಯಲ್ಲಿ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಈ ಕಾರಣಕ್ಕೆ ಪಂಚರತ್ನ ರಥಯಾತ್ರೆ ಮಾರ್ಗ, ವೇಳಾಪಟ್ಟಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ.

ಡಿಸೆಂಬರ್ 15 ರಂದು ಮಾಗಡಿಯಲ್ಲಿ ರಥಯಾತ್ರೆ ನಡೆಯಲಿದ್ದು, ಡಿಸೆಂಬರ್ 27 ರಂದು ಮತ್ತೆ ತುಮಕೂರು ಜಿಲ್ಲೆಗೆ ರಥಯಾತ್ರೆ ಪ್ರವೇಶ ಮಾಡಲಿದೆ ಎಂದು ಹೇಳಿಕೆ ನೀಡಿದ್ದಾರೆ.

ಡಿಸೆಂಬರ್ 27 ರಂದು ತುರುವೇಕೆರೆ, 28 ರಂದು ಚಿಕ್ಕನಾಯಕನಹಳ್ಳಿ, 29 ರಂದು ತುಮಕೂರು ಗ್ರಾಮಾಂತರ, 30 ರಂದು ಕುಣಿಗಲ್ ಕ್ಷೇತ್ರದಲ್ಲಿ ರಥಯಾತ್ರೆ ನಡೆಯಲಿದೆ. ಡಿಸೆಂಬರ್ 15 ರಂದು ಮಾಗಡಿ, 16 ರಂದು ರಾಮನಗರ, 17 ರಂದು ಹಾರೋಹಳ್ಳಿ, 18 ರಂದು ಕನಕಪುರ, 19 ರಂದು ಚನ್ನಪಟ್ಟಣ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ.

JDS Pancharatna Rath Yatra postponed for 4 days due to rain

ಡಿಸೆಂಬರ್ 20 ರಂದು ಮಂಡ್ಯ ಜಿಲ್ಲೆಗೆ ರಥಯಾತ್ರೆ ಪ್ರವೇಶ ಮಾಡಲಿದ್ದು, 20 ರಂದು ಮಳವಳ್ಳಿ, 21 ಕ್ಕೆ ಮದ್ದೂರು, 22 ಕ್ಕೆ ಮಂಡ್ಯ, 23 ಕ್ಕೆ ಶ್ರೀರಂಗಪಟ್ಟಣ, 24 ಕ್ಕೆ ಪಾಂಡವಪುರ, 25 ಕ್ಕೆ ಕೆ.ಆರ್.ಪೇಟೆ, 26 ಕ್ಕೆ ನಾಗಮಂಗಲ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಇತಿ ಹಂಚಿಕೊಂಡಿದ್ದಾರೆ.

English summary
JDS Pancharatna Rath Yatra postponed for 4 days due to rain in state syas former chiesf minister H.D.Kumaraswamy. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X