ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜರಾಜೇಶ್ವರಿ ನಗರ ಚುನಾವಣೆ ಮುಂಡೂಡಿ: ಜೆಡಿಎಸ್‌

By Manjunatha
|
Google Oneindia Kannada News

ಬೆಂಗಳೂರು, ಮೇ 09: ರಾಜರಾಜೇಶ್ವರಿ ನಗರದಲ್ಲಿ ಸಾವಿರಗಟ್ಟಲೆ ಮತದಾರ ಚೀಟಿ ಪತ್ತೆಯಾಗಿದ್ದು ಅದರ ಸುತ್ತಾ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಕೆಸೆರೆರಚಾಟದಲ್ಲಿ ನಿರತವಾಗಿದೆ.

ಈ ನಡುವೆ ಜೆಡಿಎಸ್‌ ಪಕ್ಷವು ರಾಜರಾಜೇಶ್ವರಿ ನಗರದಲ್ಲಿ ಚುನಾವಣಾ ಅಕ್ರಮ ನಡೆದಿರುವ ಕಾರಣ ಆ ಕ್ಷೇತ್ರದ ಚುನಾವಣೆಯನ್ನು ಮುಂದೂಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.

ನಕಲಿ ಮತಚೀಟಿ ಸೃಷ್ಟಿ ಕಾಂಗ್ರೆಸ್ ಫಿಲಾಸಫಿ: ಪ್ರಕಾಶ್ ಜಾವಡೇಕರ್ನಕಲಿ ಮತಚೀಟಿ ಸೃಷ್ಟಿ ಕಾಂಗ್ರೆಸ್ ಫಿಲಾಸಫಿ: ಪ್ರಕಾಶ್ ಜಾವಡೇಕರ್

ಜೆಡಿಎಸ್ ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ಹಾಗೂ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಪ್ರಕಾಶ್‌ ಅವರು ಆಯೋಗಕ್ಕೆ ಈ ಬಗ್ಗೆ ಪತ್ರ ಬರೆದಿದ್ದು, ರಾಜರಾಜೇಶ್ವರಿ ನಗರದಲ್ಲಿ ಚುನಾವಣಾ ಅಕ್ರಮ ನಡೆದಿದ್ದು ಈ ಅಕ್ರಮದಲ್ಲಿ ನೇರವಾಗಿ ಅಲ್ಲಿನ ಶಾಸಕರು ಭಾಗಿಯಾಗಿರುವುದು ಮೇಲು ನೋಟಕ್ಕೆ ಕಾಣುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

JDS demands election commission to postpone RR Nagar election

ರಾಜರಾಜೇಶ್ವರಿ ನಗರದಲ್ಲಿ ಚುನಾವಣಾ ಅಕ್ರಮ ಎಷ್ಟು ನೆಡದಿದೆ ಎಷ್ಟು ಜನ ಮತದಾರರ ಪಟ್ಟಿ ನಕಲು ಮಾಡಲಾಗಿದೆ ಎಂಬೆಲ್ಲಾ ವಿವರಗಳು ಲಭ್ಯವಿರದ ಕಾರಣ, ಪ್ರಕರಣದ ಬಗ್ಗೆ ವಿಸ್ತೃತ ತನಿಖೆ ಆಗುವವರೆಗೂ ಚುನಾವಣೆಯನ್ನು ಮುಂದೂಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ನಕಲಿ ವೋಟರ್ ಐಡಿ: ಸಾಕ್ಷಿ ಸಹಿತ ಬಿಜೆಪಿಗೆ ತಿರುಗೇಟು ನೀಡಿದ ಕಾಂಗ್ರೆಸ್ ನಕಲಿ ವೋಟರ್ ಐಡಿ: ಸಾಕ್ಷಿ ಸಹಿತ ಬಿಜೆಪಿಗೆ ತಿರುಗೇಟು ನೀಡಿದ ಕಾಂಗ್ರೆಸ್

ಚುನಾವಣೆಗೆ ಕೇವಲ 48 ಗಂಟೆಗಳು ಬಾಕಿ ಇರುವ ಈ ಸಮಯದಲ್ಲಿ ನಕಲಿ ಮತದಾರರ ಪಟ್ಟಿ ತಯಾರಿಸಿ ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಪ್ರಯತ್ನ ಇದಾಗಿದ್ದು ಇಂತಹಾ ಹಂತದಲ್ಲಿ ನ್ಯಾಯಯುತ ಚುನಾವಣೆ ನಡೆಯುವುದು ಸಾಧ್ಯವಿಲ್ಲದ ಕಾರಣ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯನ್ನು ಮುಂದೂಡಲೇ ಬೇಕು ಎಂದು ಜೆಡಿಎಸ್‌ ಮನವಿ ಮಾಡಿದೆ.

English summary
JDS party writes letter to election commission in demanding postpone Rajarajeshwari Nagar constituency elections. Yesterday some people caught in RR Nagar making fake election voter cards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X