ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಗೆ ಬೆಂಬಲ ಘೋಷಿಸಿದ ಜೆಡಿಎಸ್ ಕಾರ್ಪೊರೇಟರ್!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 28 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ. ಪಕ್ಷದ ಕಾರ್ಪೊರೇಟರ್ ಬಿಜೆಪಿಗೆ ಬೆಂಬಲ ನೀಡುತ್ತೇನೆ ಎಂದು ಘೋಷಿಸಿದ್ದಾರೆ.

ಶುಕ್ರವಾರ ಬಿಬಿಎಂಪಿಯ ನೂತನ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಬಿಟಿಎಂ ಲೇಔಟ್ ವಾರ್ಡ್‌ ಜೆಡಿಎಸ್ ಕಾರ್ಪೊರೇಟರ್ ದೇವದಾಸ್ ಕಾವೇರಪ್ಪ ಅವರು ಬಿಜೆಪಿಗೆ ಮತ ಹಾಕುತ್ತೇನೆ ಎಂದು ಹೇಳಿದ್ದು ಅಚ್ಚರಿಗೆ ಕಾರಣವಾಗಿದೆ.

ಬಿಬಿಎಂಪಿ ಚುನಾವಣೆ LIVE: ಯಾರಾಗ್ತಾರೆ ಮುಂದಿನ ಮೇಯರ್?ಬಿಬಿಎಂಪಿ ಚುನಾವಣೆ LIVE: ಯಾರಾಗ್ತಾರೆ ಮುಂದಿನ ಮೇಯರ್?

JDS corporator Devadas Kaverappa extends support for BJP

ಈಗಾಗಲೇ 4 ಜೆಡಿಎಸ್ ಕಾರ್ಪೊರೇಟರ್‌ಗಳ ಫೋನ್ ಸ್ವಿಚ್‌ ಆಫ್‌ ಆಗಿದೆ. ಇದರಿಂದಾಗಿ ರಾಮಲಿಂಗಾ ರೆಡ್ಡಿ ಮತ್ತು ಜೆಡಿಎಸ್ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ. ಈಗ ದೇವದಾಸ್ ಕಾವೇರಪ್ಪ ಅವರು ಬಿಜೆಪಿ ಕಡೆ ವಾಲಿದ್ದು, ಮುಂದೇನಾಗಲಿದೆ? ಎಂದು ಕಾದು ನೋಡಬೇಕು.

ಬಿಬಿಎಂಪಿಯಲ್ಲೂ ಆಪರೇಷನ್ ಕಮಲ, ಮೇಯರ್ ಕುರ್ಚಿಗಾಗಿ ಕಸರತ್ತುಬಿಬಿಎಂಪಿಯಲ್ಲೂ ಆಪರೇಷನ್ ಕಮಲ, ಮೇಯರ್ ಕುರ್ಚಿಗಾಗಿ ಕಸರತ್ತು

ದೇವದಾಸ್ ಕಾವೇರಪ್ಪ ಖಾಸಗಿ ಸುದ್ದಿ ವಾಹಿನಿ ಜೊತೆ ಈ ಬಗ್ಗೆ ಮಾತನಾಡಿದ್ದಾರೆ. 'ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಗಿದೆ. ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಬಗ್ಗೆ ಪಕ್ಷದ ನಾಯಕರು ಯಾವುದೇ ಸಭೆ ಮಾಡಿಲ್ಲ. ವಿಪ್ ಜಾರಿ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ' ಎಂದು ಹೇಳಿದ್ದಾರೆ.

ಬೆಂಗಳೂರು ಮೇಯರ್ ಆಯ್ಕೆ ಹೇಗೆ ನಡೆಯುತ್ತೆ?ಬೆಂಗಳೂರು ಮೇಯರ್ ಆಯ್ಕೆ ಹೇಗೆ ನಡೆಯುತ್ತೆ?

ದೇವದಾಸ್ ಕಾವೇರಪ್ಪ ಅವರು ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿದ್ದು, 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಟಿಎಂ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ರಾಮಲಿಂಗಾ ರೆಡ್ಡಿ ಅವರ ವಿರುದ್ಧ ಸ್ಪರ್ಧೆ ಮಾಡಿದ್ದರು.

ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಶೋಭಾ ಅಂಜನಪ್ಪ, ಉಪ ಮೇಯರ್ ಪಟ್ಟಕ್ಕೆ ಪ್ರತಿಭಾ ಧನರಾಜ್ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನಿಂದ ಮೇಯರ್ ಹುದ್ದೆಗೆ ಗಂಗಾಬಿಕೆ, ಉಪ ಮೇಯರ್ ಪಟ್ಟಕ್ಕೆ ರಮೀಳಾ ನಾಮಪತ್ರ ಸಲ್ಲಿಸಿದ್ದಾರೆ. ಯಾರು ಮೇಯರ್ ಆಗಲಿದ್ದಾರೆ? ಕಾದು ನೋಡಬೇಕು.

English summary
Set back for JD(S) in Bruhat Bengaluru Mahanagara Palike (BBMP) mayor and deputy mayor election. BTM Layout corporator Devadas Kaverappa decided to support BJP in election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X