ಜೆಡಿಎಸ್-ಕಾಂಗ್ರೆಸ್‌ನದ್ದು ಭ್ರಷ್ಟಾಚಾರಕ್ಕಾಗಿ ಮೈತ್ರಿ: ಪ್ರಕಾಶ್ ಜಾವಡೇಕರ್
ಬೆಂಗಳೂರು, ಮೇ 19: ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಕೇಂದ್ರ ಮಂತ್ರಿ ಪ್ರಕಾಶ್ ಜಾವಡೇಕರ್ ಅವರು ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಮೇಲೆ ಹರಿಹಾಯ್ದರು.
ಈ ಮೈತ್ರಿ ಆಗಿರುವುದು ಭ್ರಷ್ಟಾಚಾರಕ್ಕಾಗಿ ಎಂದ ಪ್ರಕಾಶ ಜಾವಡೇಕರ್, ಕಾಂಗ್ರೆಸ್ ಮಂತ್ರಿಗಳ ಹಗರಣದ ತನಿಖೆ ಮಾಡಬಾರದೆಂಬ 'ಡೀಲ್' ಕುದಿರಿಸಿಕೊಂಡು ಕಾಂಗ್ರೆಸ್ ಪಕ್ಷ ಜೆಡಿಎಸ್‌ಗೆ ಬೆಂಬಲ ನೀಡಿದೆ, ಇದು ವೈಚಾರಿಕ ಮೈತ್ರಿ ಅಲ್ಲ ಎಂದು ಅವರು ಆರೋಪಿಸಿದರು.
ರೆಸಾರ್ಟ್ ರಾಜಕಾರಣದ ಬಗ್ಗೆಯೂ ಹರಿಹಾಯ್ದ ಜಾವಡೇಕರ್, 'ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಹೊಟೆಲ್ ರೂಮುಗಳಲ್ಲಿ ಬಂಧಿಸಿ ಇಡಲಾಗಿತ್ತು, ಅವರ ಮೊಬೈಲ್‌ಗಳನ್ನು ಕಿತ್ತುಕೊಂಡು ಮಾನಸಿಕ ಹಿಂಸೆ ನೀಡಲಾಗಿತ್ತು' ಎಂದು ದೂರಿದರು.

ಜನಾದೇಶ ಬಿಜೆಪಿ ಪರ ಇದೆ, ಆದರೆ ಜೆಡಿಎಸ್-ಕಾಂಗ್ರೆಸ್‌ನ ಕುತಂತ್ರದಿಂದಾಗಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾಗಿ ಎರಡೂ ಪಕ್ಷಗಳು ನಡೆದುಕೊಂಡಿವೆ ಎಂದು ಅವರು ಆರೋಪಿಸಿದರು.
ಮೋದಿ ಭ್ರಷ್ಟ ಎಂದ ರಾಹುಲ್‌ಗೆ ತಿರುಗೇಟು ನೀಡಿದ ಪ್ರಕಾಶ್ ಜಾವಡೇಕರ್, ಕಾಂಗ್ರೆಸ್ ಪಕ್ಷ ಚುನಾವಣೆ ಗೆಲ್ಲಲು ಅತಿ ಭ್ರಷ್ಟ ತಂತ್ರಗಳನ್ನು ಅನುಸರಿಸಿತು, ನಕಲಿ ಚುನಾವಣಾ ಗುರುತಿನ ಚೀಟಿಗಳನ್ನು ಸೃಷ್ಠಿಸಿತು, ಸುಳ್ಳು ಮಾಹಿತಿಗಳನ್ನು ಜನರಿಗೆ ನೀಡಿತು ಎಂದು ಅವರು ಹರಿಹಾಯ್ದರು.












Click it and Unblock the Notifications