ಶೀಘ್ರ ಗುಣಮುಖವಾಗಲೆಂದು ಎಚ್ಡಿಕೆಗೆ ಶುಭ ಹಾರೈಸಿದ ಜಮೀರ್
ಬೆಂಗಳೂರು, ಸೆಪ್ಟೆಂಬರ್ 23 : ಹೃದಯ ಸಂಬಂಧಿ ಶಸ್ತ್ರಸಿಕಿತ್ಸೆಗೆ ಒಳಗಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ. ಕುಮಾರಸ್ವಾಮಿ ಅವರಿಗೆ ಶೀಘ್ರ ಗುಣಮುಖರಾಗುವಂತೆ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಖಾನ್ ಟ್ವಿಟ್ಟರ್ ನಲ್ಲಿ ಶುಭ ಹಾರೈಸಿದ್ದಾರೆ.
"ಬೇಗ ಚೇತರಿಸಿಕೊಳ್ಳಿ ಶ್ರೀ ಎಚ್ ಡಿ ಕುಮಾರಸ್ವಾಮಿ" ಎಂದು ಜಮೀರ್ ಅಹಮದ್ ಟ್ವೀಟ್ ಮಾಡಿದ್ದಾರೆ. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಮಿತ್ರರೂ ಅಲ್ಲ ಎಂಬುವುದಕ್ಕೆ ಇದು ಒಂದು ತಾಜಾ ಉದಾಹರಣೆಯಾಗಿದೆ.

ರಾಜ್ಯಸಭೆ ಚುನಾವಣೆ ಬಳಿಕ ಜಮೀರ್ ಹಾಗೂ ಕುಮಾರಸ್ವಾಮಿ ನಡುವೆ ಹಾಗಾಗ ಸವಾಲ್ ಪ್ರತಿ ಸವಾಲಿನ ಮಾತುಗಳು, ಒಬ್ಬರಿಗೊಬ್ಬರು ಎಷ್ಟೇ ಬೈದಾಡಿಕೊಂಡರು ಇದೀಗ ಎಚ್ಟಿಕೆ ಆರೋಗ್ಯದ ಬಗ್ಗೆ ಶುಭ ಹಾರೈಸಿರುವ ಜಮೀರ್, ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ ಎಂದು ಸಂದೇಶ ನೀಡಿದ್ದಾರೆ.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ಡಾ. ಸತ್ಯಕಿ ನೇತೃತ್ವದ ವೈದ್ಯರ ತಂಡ ಕುಮಾರಸ್ವಾಮಿ ಅವರಿಗೆ ಸುಮಾರ 45 ನಿಮಿಷಗಳ ಕಾಲ ಯಶಶ್ವಿಯಾಗಿ ಆಪರೇಷನ್ ಮಾಡಿದೆ.
ಲ್ಯಾಪ್ರೋಸ್ಕೋಪಿಕ್ ಕೀಹೋಲ್ ಪ್ರಕ್ರಿಯೆ ಮೂಲಕ ಟಿಶ್ಯೂವಾಲ್ವ್ ಬದಲಾವಣೆ ಮಾಡಲಾಯಿತು. ಹತ್ತು ವರ್ಷಗಳ ಹಿಂದೆ ಟಿಶ್ಯೂವಾಲ್ವ್ ಅಳವಡಿಸಲಾಗಿತ್ತು.
ಇತ್ತೀಚೆಗೆ ದೂಳಿನ ಅಲರ್ಜಿ ಮತ್ತು ಕಫದ ಸಮಸ್ಯೆಯಿಂದ ಹೃದಯ ಕವಾಟದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಹಳೆಯ ವಾಲ್ವ್ ಕಾಲಾವಧಿ ಮುಗಿರುವುದರಿಂದ ಅದನ್ನು ಬದಲಿಸಲು ವೈದ್ಯರು ಸಲಹೆ ನೀಡಿದ್ದರು.












Click it and Unblock the Notifications