ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಕ್ಷಾ ಫೌಂಡೇಶನ್ ವತಿಯಿಂದ ಕೋವಿಡ್ ಸಂಬಂಧ ಉಚಿತ ತುರ್ತು ಸೇವೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 28: ಸಾಮಾಜಿಕ ಕಳಕಳಿಯ ಸೇವೆಯಲ್ಲಿ ಮಂಚೂಣಿಯಲ್ಲಿ ಬರುವ ನಗರದ ರಕ್ಷಾ ಫೌಂಡೇಶನ್, ಕೋವಿಡ್ ಮಾರಕ ಹಾವಳಿಯ ಈ ಸಂದರ್ಭದಲ್ಲಿ ತುರ್ತು ಸೇವೆಯನ್ನು ನೀಡಲು ಮುಂದಾಗಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಈ ಸಂಬಂಧ ತುರ್ತು ಉಚಿತ ಸೇವೆಯನ್ನು ಉದ್ಘಾಟಿಸಿದ್ದಾರೆ. ಫೌಂಡೇಶನ್ ನೀಡುವ ಎಲ್ಲಾ ಸೇವೆಗಳು ಉಚಿತವಾಗಿರುವುದು ಗಮನಿಸಬೇಕಾದ ವಿಚಾರ.

ಈ ಸಂಬಂಧ ಹೆಲ್ಪ್ ಲೈನ್ ತೆರೆಯಲಾಗಿದ್ದು ವೃದ್ದರು, ರೋಗಿಗಳು ಸೇರಿದಂತೆ ತುರ್ತಾಗಿ ಆಕ್ಸಿಜನ್, ಔಷಧಿ, ವ್ಯಾಕ್ಸಿನ್ ಮತ್ತು ವಾಹನದ ವ್ಯವಸ್ಥೆ ಆಗಬೇಕಿದ್ದರೆ ಆ ನಂಬರಿಗೆ ಫೋನ್ ಮಾಡಿ ಸೇವೆಯನ್ನು ಪಡೆಯಬಹುದಾಗಿದೆ.

Bengaluru Jayanagar Locality Covid 19, Related Free Service From Raksha Foundation

ಸೇವೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಸಂಸದ ತೇಜಸ್ವಿ ಸೂರ್ಯ, "ರಾಮಮೂರ್ತಿ ಮತ್ತು ನಾಗರತ್ನ ರಾಮಮೂರ್ತಿಯವರ ನೇತೃತ್ವದಲ್ಲಿ ರಕ್ಷಾ ಫೌಂಡೇಶನ್ ವತಿಯಿಂದ ಈ ಭಾಗದ (ಜಯನಗರ) ಜನರಿಗೆ ಅಂಬುಲೆನ್ಸ್ ಮತ್ತು ಆಕ್ಸಿಜನ್ ವ್ಯವಸ್ಥೆಯನ್ನು ಮಾಡಲಾಗಿದೆ. ಇದರ ಜೊತೆಗೆ, ಲಸಿಕೆಯನ್ನೂ ನೀಡಲಾಗುತ್ತದೆ"ಎಂದು ಹೇಳಿದ್ದಾರೆ.

"ಜಯನಗರದ ವಿವಿಧ ಕಡೆ ರಕ್ಷಾ ಫೌಂಡೇಶನ್ ಈ ಕೆಲಸವನ್ನು ಮಾಡುತ್ತಿದೆ. ಸಾರ್ವಜನಿಕರು ರಕ್ಷಾ ಫೌಂಡೇಶನ್ ಹೆಲ್ಪ್ ಲೈನಿಗೆ ಕರೆ ಮಾಡಿ ತಕ್ಷಣಕ್ಕೆ ಬೇಕಾಗಿರುವ ಸಹಾಯಕ್ಕೆ ಇದಕ್ಕೆ ಕರೆ ಮಾಡಬಹುದು"ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

"ಈ ಒಂದು ಜನಪರ ಕೆಲಸಕ್ಕೆ ಮುಂದಾಗಿರುವ ರಾಮಮೂರ್ತಿ ಮತ್ತು ನಾಗರತ್ನ ಅವರಿಗೆ ಧನ್ಯವಾದವನ್ನು ಹೇಳಲು ಬಯಸುತ್ತೇನೆ"ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಈ ವೇಳೆ ಮಾಜಿ ಪಾಲಿಕೆ ಸದಸ್ಯರಾದ ಸಿ.ಕೆ.ರಾಮಮೂರ್ತಿ, ನಾಗರತ್ನ ರಾಮಮೂರ್ತಿ ಮತ್ತು ರಕ್ಷಾ ಫೌಂಡೇಶನ್ ತಂಡದವರು ಉಪಸ್ಥಿತರಿದ್ದರು. (ಹೆಲ್ಪ್ ಲೈನ್ ನಂಬರ್ : 95353-53666)

Recommended Video

24 ಗಂಟೆಗಳಲ್ಲಿ ಈ 8 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಯಾವುದೇ ಕೋವಿಡ್‌ ಸಾವು ಪತ್ತೆಯಾಗಿಲ್ಲ | Oneindia Kannada

English summary
Bengaluru Jayanagar Locality Covid 19, Related Free Service From Raksha Foundation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X