ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕ ವಿಜಯಕುಮಾರ್ ನಿಧನ: ಜಯನಗರ ಚುನಾವಣೆ ಮುಂದೂಡಿಕೆ

By Nayana
|
Google Oneindia Kannada News

Recommended Video

ಜಯನಗರ ಶಾಸಕ ಬಿಎನ್ ವಿಜಯ್ ಕುಮಾರ್ ವಿಧಿವಶ | ಜಯನಗರ ಚುನಾವಣೆ ಮುಂದೂಡಿಕೆ

ಬೆಂಗಳೂರು, ಮೇ 4:ಜಯನಗರದ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ವಿಜಯಕುಮಾರ್ ನಿಧನರಾದ ಹಿನ್ನಲೆಯಲ್ಲಿ ಈ ಕ್ಷೇತ್ರದ ಮತದಾನವನ್ನು ಚುನಾವಣಾ ಆಯೋಗ ಮುಂದೂಡಿ ಆದೇಶ ಹೊರಡಿಸಿದೆ.

ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಜಯನಗರ ಚುನಾವಣೆಯನ್ನು ಚುನಾವಣಾ ಆಯೋಗ ಮುಂದೂಡಿದೆ. ಈ ಕುರಿತು ಈ ಬಗ್ಗೆ ಚುನಾವಣಾ ಆಯೋಗ ಅಧಿಕೃತ ಘೋಷಣೆ ಹೊರಡಿಸಿದೆ. ಜಯದೇವ ಹೃದ್ರೋಗ ಆಸ್ಪತ್ರೆ ವೈದ್ಯಾಧಿಕಾರಿಗಳಿಂದ ಮರಣ ಪ್ರಮಾಣ ಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಜಯನಗರ ವಿಧಾನ ಸಭಾ ಚುನಾವಣೆ ಮುಂದೂಡಲಾಗಿದೆ.

ವಿಜಯ್ ಕುಮಾರ್ ವಿಧಿವಶ: ಜಯನಗರ ಚುನಾವಣೆ ಮುಂದೂಡಿಕೆ?ವಿಜಯ್ ಕುಮಾರ್ ವಿಧಿವಶ: ಜಯನಗರ ಚುನಾವಣೆ ಮುಂದೂಡಿಕೆ?

ಜಯನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿ ಅವರು ಕಣಕ್ಕಿಳಿದಿದ್ದರು. ಜೆಡಿಎಸ್‌ನಿಂದ ಕಾಳೇಗೌಡ ಅವರು ಕಣಕ್ಕಿಳಿದಿದ್ದರು. ಕ್ಷೇತ್ರದ ಮತ್ತೊಬ್ಬ ಪ್ರಮುಖ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಅವರು ಪಕ್ಷೇತರವಾಗಿ ಕಣಕ್ಕಿಳಿದಿದ್ದರು.

Jayanagar constituency polling postponed

ಜಯನಗರದಲ್ಲಿ ಈ ಬಾರಿ ವಿಜಯ್ ಕುಮಾರ್ ಹಾಗೂ ಸೌಮ್ಯರೆಡ್ಡಿ ನಡುವೆ ನೇರ ಸ್ಪರ್ಧೆ ಎಂದೇ ಬಿಂಬಿಸಲಾಗುತ್ತಿತ್ತು. ಇದೀಗ ವಿಜಕುಮಾರ್ ಅವರು ನಿಧನ ಹೊಂದಿದ್ದು, ಚುನಾವಣೆ ನಡೆದಾಗ ಬಿಜೆಪಿ ಯಾರಿಗೆ ಟಿಕೆಟ್ ನೀಡಲಿದೆ ಹಾಗೂ ಸಜ್ಜನ ರಾಜಕಾರಣಿ ಎಂದು ಹೆಸರಾಗಿದ್ದ ವಿಜಯಕುಮಾರ್ ಅವರ ಸಾವು ಕಾಂಗ್ರೆಸ್‌ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕಿದೆ. ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳಲ್ಲಿ ಯಾವುದೇ ಬದಲಾವಣೆಯಿಲ್ಲ.

ವಿಜಯ್‌ ಕುಮಾರ್‌ಗೆ ರಾಜಕೀಯ ನಾಯಕರು, ಅಭಿಮಾನಿಗಳ ಸಂತಾಪವಿಜಯ್‌ ಕುಮಾರ್‌ಗೆ ರಾಜಕೀಯ ನಾಯಕರು, ಅಭಿಮಾನಿಗಳ ಸಂತಾಪ

English summary
Due to death of Bjp candidate Vijaykumar last night, election commission has postponed polling process in the constituency. The new polling day will be announced later.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X