• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ತೀರ್ಪು: ಸಚಿವೆ ಜಯಮಾಲಾ ಸ್ವಾಗತ

|

ಬೆಂಗಳೂರು, ಸೆ.28: ಶಬರಿಮಲೆಗೆ ತೆರಳಲು ಮಹಿಳೆಯರಿಗೆ ಅನುಮತಿ ನೀಡಿರುವ ಸುಪ್ರೀಂಕೋರ್ಟ್ ತೀರ್ಪು ಸಂತಸ ತಂದಿದೆ, ಇದೊಂದು ಐತಿಹಾಸಿಕ ತೀರ್ಪು, ಸಂವಿಧಾನವನ್ನು ಬರೆದಿರುವ ಅಂಬೇಡ್ಕರ್ ಅವರಿಗೆ ಧನ್ಯವಾದ ಹೇಳಲೇ ಬೇಕು ಎಂದು ಸಚಿವೆ ಜಯಮಾಲಾ ಹೇಳಿದರು.

ಶಬರಿಮಲೆ ತೀರ್ಪು LIVE: ಮಹಿಳೆಯರಿಗೆ ಪ್ರವೇಶ, ಐತಿಹಾಸಿಕ ತೀರ್ಪು

10 ರಿಂದ 50 ವರ್ಷ ವಯಸ್ಸಿನೊಳಗಿನ ಮಹಿಳೆಯರು ಋತುಮತಿಯಾಗುವ ಕಾರಣಕ್ಕೆ ಅವರಿಗೆ ದೇವಾಲಯಕ್ಕೆ ಪ್ರವೇಶವಿರಲಿಲ್ಲ. ಇದೊಂದು ಐತಿಹಾಸಿಕ ಕ್ಷಣ ಅವತ್ತೂ ನನಗೆ ದೇವರ ಮೇಲೆ ನಂಬಿಕೆ ಇತ್ತು, ನ್ಯಾಯಾಂಗದ ಮೇಲೆ ನಂಬಿಕೆ ಇತ್ತು ಇಂದು ಸತ್ಯವಾಗಿದೆ, ಈ ತೀರ್ಪು ಹೆಣ್ಣುಕುಲಕ್ಕೆ ದೊರೆತಂತಹ ನ್ಯಾಯವಾಗಿದೆ.

ಇಂಥದ್ದೇ ತೀರ್ಪು ಬರುತ್ತದೆ ಎಂದು ನಮಗೆ ಮೊದಲೇ ಗೊತ್ತಿತ್ತು, ನ್ಯಾಯಾಧೀಶರು ಮತ್ತು ದೇವರ ಮೇಲೆ ನಂಬಿಕೆ ಇತ್ತು ಅದು ಸತ್ಯವಾಗಿದೆ.ಇದೀಗ ದೇವರ ಮೇಲೆ ನಂಬಿಕೆ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಿದರು.

ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಏಕಿಲ್ಲ?

800 ವರ್ಷಗಳ ಕಾಲ ಕಾಯ್ದುಕೊಂಡು ಬಂದ ಈ ನಿಯಮಕ್ಕೆ ಇಂದು ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದೆ.

English summary
Women and child welfare minister Jayamala has welcomed the supreme court verdict on allowing women enter into Sabarimalai temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X