Get Updates
Get notified of breaking news, exclusive insights, and must-see stories!

ತಮಿಳುನಾಡಿಗೆ ಎಷ್ಟು ಬಸ್‌ ಹೋಗುತ್ತಿಲ್ಲ? ಶಡ್ಯುಲ್ ಏನು?

ಬೆಂಗಳೂರು, ಡಿಸೆಂಬರ್ 5: ಹೃದಯಸ್ಥಂಭನ ಕಾರಣದಿಂದ ತಮಿಳುನಾಡಿನ ಸಿಎಂ ಜಯಲಲಿತಾ ಗಂಭೀರ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆ ತಮಿಳುನಾಡಿನಿಂದ ಮತ್ತ ಕರ್ನಾಟಕದಿಂದ ಬಸ್ ವ್ಯವಸ್ಥೆಗೆ ನಿರ್ಬಂಧ ಹೇರಲಾಗಿದೆ ಎಂದು ಕರ್ನಾಟಕ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರಕುಮಾರ್ ಕಟಾರಿಯಾ ಹೇಳಿದ್ದಾರೆ.

ತಿರುವಣ್ಣಾಮಲೈಯಲ್ಲಿ ರಾಜ್ಯದ ಎರಡು ಬಸ್ ಗಳ ಮೇಲೆ ಮದ್ಯದ ಬಾಟಲ್ ಎಸೆದು ದಾಂಧಲೆ ನಡೆಸಿರುವ ತಮಿಳುನಾಡಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮುನ್ನೆಚ್ಚರಿಕೆ ವಹಿಸಿರುವುದಾಗಿ ಕೆಎಸ್ ಆರ್ ಟಿಸಿ ಎಂಡಿ ರಾಜೇಂದ್ರಕುಮಾರ್ ತಿಳಿಸಿದರು.[ತಮಿಳುನಾಡಿಗೆ ತೆರಳುವ ಕೆಎಸ್ ಆರ್ ಟಿಸಿ ಬಸ್ ಸೇವೆ ರದ್ದು]

Jayallita cardiac arrest: how much bus is not going, what happen

* ಬೆಂಗಳೂರಿನಿಂದ ತಮಿಳುನಾಡಿಗೆ ಸಂಚರಿಸುವುದು ಒಟ್ಟು 470 ಬಸ್ ಗಳು ಹಾಗೂ 470 ಶಡ್ಯೂಲ್ ಗಳ ಸ್ಥಗಿತ.

* ಬೆಳಗ್ಗೆ ಆರು ಗಂಟೆಯಿಂದಲೇ ಸಂಚಾರಕ್ಕೆ ನಿರ್ಬಂಧ

* ಬೆಂಗಳೂರಿನಿಂದ ಹೊಸೂರು, ಬಂಡೀಪುರ, ಕೊಳ್ಳೇಗಾಲ, ಚಾಮರಾಜನಗರ, ಇತ್ಯಾದಿಕೆಡೆಗಳಲ್ಲಿ ಸಂಚಾರಕ್ಕೆ ತಡೆ

* ತಮಿಳುನಾಡಿಗೆ ಪ್ರತಿ ಗಂಟೆಗೆ ಸಂಚರಿಸುವ ಓಲ್ವೋ ಬಸ್ ಗಳ ಸ್ಥಗಿತ.

* ತಮಿಳುನಾಡಿನಿಂದ ರಾಜ್ಯಕ್ಕೆ ಬಂದಿರುವ ಬಸ್ ಗಳಿಗೆ ಯಾವ ತೊಂದರೆಯಿಲ್ಲ.

* ಮಂಡ್ಯದಿಂದ ಚಲಿಸಬೇಕಿದ್ದ 6 ಬಸ್ ಗಳ ಸ್ಥಗಿತ.

* ಚಾಮರಾಜನಗರದಿಂದ 15 ಬಸ್ ಗಳ ಸಂಚಾರಯಿಲ್ಲ

* ಬಸ್ ಸಂಚಾರ ಅಸ್ತವ್ಯಸ್ತ ಪರಿಣಾಮ ತಮಿಳುನಾಡಿಗೆ ಹೋಗಬೇಕಿದ್ದ ಜನರಿಗೆ ತೀವ್ರ ತೊಂದರೆ.

* ಮುಂದಿನ ಆದೇಶ ಬರುವ ವರೆಗೆ ಯಾವುದೇ ಕ್ರಮ ಕೈಗೊಳ್ಳದಿರಲು ನಿಯಂತ್ರಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+