ಅಮ್ಮನಿಗೆ ಬೇಲ್, ಕಾರ್ಯಕರ್ತರ ದೀಪಾವಳಿ

ಬೆಂಗಳೂರು, ಅ. 17 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ಶುಕ್ರವಾರ ಸುಪ್ರೀಂಕೋರ್ಟ್‌ ಜಾಮೀನು ನೀಡಿದೆ. ಅಮ್ಮನಿಗೆ ಜಾಮೀನು ಸಿಕ್ಕಿದ ಸುದ್ದಿ ಹೊರಬರುತ್ತಿದ್ದಂತೆ ಬೆಂಗಳೂರು, ಚೆನ್ನೈ ಮತ್ತು ದೆಹಲಿಯಲ್ಲಿ ಅಮ್ಮ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಪಟಾಕಿ ಸಿಡಿಸಿ, ಸಿಹಿ ಹಂಚಿ ಎಐಎಡಿಎಂಕೆ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರಿದ್ದ ನ್ಯಾಯಪೀಠ ಜಯಲಲಿತಾ ಹಾಗೂ ಅಕ್ರಮ ಆಸ್ತಿಗಳಿಕೆ ಪ್ರಕರಣದ ಇತರೆ ಮೂವರು ಆರೋಪಿಗಳ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಆದರೆ, ಸುಪ್ರೀಂ ಆದೇಶ ಪರಪ್ಪನ ಅಗ್ರಹಾರ ಜೈಲು ಸೇರುವುದು ತಡವಾದ್ದರಿಂದ ಶನಿವಾರ ಜಯಲಲಿತಾ ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. [ಜಯಲಲಿತಾಗೆ ಜಾಮೀನು ಮಂಜೂರು]

ಜಯಲಲಿತಾ ಜಾಮೀನು ಅರ್ಜಿ ಇಂದು ವಿಚಾರಣೆ ನಡೆಯಲಿದೆ ಎಂದು ತಿಳಿದ ನೂರಾರು ಕಾರ್ಯಕರ್ತರು ಶುಕ್ರವಾರ ಬೆಳಗ್ಗೆಯಿಂದಲೇ ಪರಪ್ಪನ ಅಗ್ರಹಾರ ಜೈಲು, ಚೆನ್ನೈನ ಜಯಲಲಿತಾ ನಿವಾಸದ ಮುಂದೆ ಸೇರಿದ್ದರು. ಅಮ್ಮನಿಗೆ ಬೇಲ್ ಸಿಕ್ಕಿದೆ ಎಂದು ತಿಳಿದ ತಕ್ಷಣ ಪಟಾಕಿ ಹಚ್ಚಿ ದೀಪಾವಳಿ ಆಚರಿಸಿದರು. ಕಾರ್ಯಕರ್ತರ ಸಂಭ್ರಮಾಚರಣೆ ಚಿತ್ರಗಳು ಇಲ್ಲಿವೆ [ಪಿಟಿಐ ಚಿತ್ರಗಳು]

ಸುಪ್ರೀಂಕೋರ್ಟ್‌ ಮುಂದೆ ವಕೀಲರ ಸಂಭ್ರಮ

ಸುಪ್ರೀಂಕೋರ್ಟ್‌ ಮುಂದೆ ವಕೀಲರ ಸಂಭ್ರಮ

ಜಯಲಲಿತಾ ಅವರಿಗೆ ಜಾಮೀನು ಸಿಕ್ಕ ವಿಷಯ ತಿಳಿದ ತಕ್ಷಣ ಸುಪ್ರೀಂಕೋರ್ಟ್‌ ಮುಂಭಾಗದಲ್ಲಿ ಜಯಲಲಿತಾ ಪರ ಘೋಷಣೆಗಳು ಕೇಳಿಬರಲಾರಂಭಿಸಿದವು. ಅಮ್ಮನ ಫೋಟೋ ಹಿಡಿದ ವಕೀಲರು, ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು.

ಅಮ್ಮನಿಗೆ ಜೈ, ಅಮ್ಮನಿಗೆ ಜೈ

ಅಮ್ಮನಿಗೆ ಜೈ, ಅಮ್ಮನಿಗೆ ಜೈ

ಜಯಲಲಿತಾಗೆ ಜೈ, ಅಮ್ಮನಿಗೆ ಜೈ ಎಂಬ ಕೂಗು ಸುಪ್ರೀಂಕೋರ್ಟ್ ಮುಂಭಾಗದಲ್ಲಿ ಕೇಳಿಬರುತ್ತಿತ್ತು. ಮಾಧ್ಯಮಗಳಿಗೆ ಜಯಾ ಫೋಟೋ ತೋರಿಸಿ ಕಾರ್ಯಕರ್ತರು ಅಮ್ಮನ ಬಿಡುಗಡೆಯನ್ನು ಸಂಭ್ರಮಿಸಿದರು.

ಸಿಹಿ ಹಂಚಿ ಸಂಭ್ರಮಾಚರಣೆ

ಸಿಹಿ ಹಂಚಿ ಸಂಭ್ರಮಾಚರಣೆ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮುಂದೆ ಜಯಾ ಅಭಿಮಾನಿಗಳು ಲಾಡು ಹಂಚಿ ಅಮ್ಮನಿಗೆ ಜಾಮೀನು ಸಿಕ್ಕ ಸಂತಸವನ್ನು ಹಂಚಿಕೊಂಡರು.

ಪಟಾಕಿ ಹಚ್ಚಿ ಸಂಭ್ರಮ

ಪಟಾಕಿ ಹಚ್ಚಿ ಸಂಭ್ರಮ

ಬೆಂಗಳೂರಿನಲ್ಲಿ ಅಮ್ಮನ ಬಿಡುಗಡೆಗೆ ಕಾಯುತ್ತಿದ್ದ ಅಪಾರ ಅಭಿಮಾನಿಗಳು ಜಾಮೀನು ಸಿಕ್ಕ ಸುದ್ದಿ ತಿಳಿದ ತಕ್ಷಣ ಪಟಾಕಿ ಹಚ್ಚಿ ಸಂಭ್ರಮಾಚರಣೆ ಮಾಡಿದರು.

ಸುಬ್ರಮಣ್ಯ ಸ್ವಾಮಿ ಪ್ರತಿಕ್ರಿಯೆ

ಸುಬ್ರಮಣ್ಯ ಸ್ವಾಮಿ ಪ್ರತಿಕ್ರಿಯೆ

ಜಯಲಲಿತಾ ವಿರುದ್ಧ ಅಕ್ರಮ ಆಸ್ತಿಗಳಿಗೆ ದೂರು ಸಲ್ಲಿಸಿದ್ದ ಸುಬ್ರಮಣ್ಯ ಸ್ವಾಮಿ ಜಯಲಲಿತಾಗೆ ಬೇಲ್ ಸಿಕ್ಕಿದ ನಂತರ ಸುಪ್ರೀಂಕೋರ್ಟ್‌ ಮುಂದೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಇಂದು ಸುಪ್ರೀಂನಲ್ಲಿ ನಡೆದ ವಿಚಾರಣೆಯಲ್ಲೂ ಸ್ವಾಮಿ ಅವರು ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+