ಜಯಲಲಿತಾ ಅಕ್ರಮ ಆಸ್ತಿ ಪ್ರಕರಣ ಸೆ.20ಕ್ಕೆ ತೀರ್ಪು

ಬೆಂಗಳೂರು, ಆ.30 : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯ ಪೂರ್ಣಗೊಳಿಸಿದೆ. ಸೆ.20ರಂದು ತೀರ್ಪು ಪ್ರಕಟಿಸಲಿದ್ದು, ಅಂದು ಜಯಲಲಿತಾ ಖುದ್ದು ಹಾಜರಿರಬೇಕೆಂದು ಕೋರ್ಟ್ ಸೂಚಿಸಿದೆ.

ಜಯಲಲಿತಾ ಅವರು ಅಕ್ರಮವಾಗಿ 66.65 ಕೋಟಿ ರೂ. ಆಸ್ತಿ ಸಂಪದಾನೆ ಮಾಡಿದ್ದಾರೆ ಎಂಬ ಪ್ರಕರಣವಿದಾಗಿದ್ದು, ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಇದರ ವಿಚಾರಣೆ ನಡೆಯುತ್ತಿತ್ತು. ನ್ಯಾಯಮೂರ್ತಿ ಮೈಕಲ್ ಜಾನ್ ಕುನ್ಹ ಅವರ ಪೀಠ ವಿಚಾರಣೆ ಮುಗಿಸಿದ್ದು, ಅಂತಿಮ ತೀರ್ಪುನ್ನು ಸೆ.20ಕ್ಕೆ ನೀಡಲಿದೆ.

Jayalalithaa

ತೀರ್ಪು ಪ್ರಕಟಗೊಳ್ಳುವಾಗ ಪ್ರಕರಣದಲ್ಲಿನ ಆರೋಪಿಗಳಾದ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಹಾಗೂ ಇತರೆ ಮೂವರು ಆರೋಪಿಗಳಾದ ಸುಧಾಕರನ್, ಶಶಿಕಲಾ ಹಾಗೂ ಇಲವರಸಿ ಖುದ್ದು ಹಾಜರಿರಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ.

ಈ ಪ್ರಕರಣ ದಾಖಲಾದ ನಂತರ ಮತ್ತೊಮ್ಮೆ ಜಯಲಲಿತಾ ಅವರು ಮುಖ್ಯಮಂತ್ರಿ ಆಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಅಡ್ಡಿ ಉಂಟಾಗುವುತ್ತದೆ ಎಂದು ಡಿಎಂಕೆ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ಪರಿಗಣಿಸಿದ ಕೋರ್ಟ್ 2003ರಲ್ಲಿ ಪ್ರಕರಣವನ್ನು ಚೆನ್ನೈನಿಂದ ಬೆಂಗಳೂರಿಗೆ ವರ್ಗಾವಣೆ ಮಾಡಿತ್ತು. [ಜಯಲಲಿತಾ ವಿರುದ್ಧದ ವಿಚಾರಣೆಗೆ ತಡೆ ಇಲ್ಲ]

ಈ ದೂರಿನ ಅನ್ವಯ ಜಯಲಲಿತಾ ನಿವಾಸದ ಮೇಲೆ 1997ರಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ, 800 ಕೆಜಿ ಬೆಳ್ಳಿ, 28 ಕೆಜಿ ಚಿನ್ನ, 750 ಜತೆ ಶೂ, 10,500 ಸೀರೆ, 91 ವಾಚ್‌ ಸೇರಿದಂತೆ ಇತರೆ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. ಈ ವಸ್ತುಗಳು ಸದ್ಯ ನ್ಯಾಯಾಲಯದ ವಶದಲ್ಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+