ಜನವರಿ 16ರಿಂದ ಜಯದೇವ ಮೇಲ್ಸೇತುವೆ ತೆರವು ಕಾರ್ಯ ಆರಂಭ
ಬೆಂಗಳೂರು,
ಜನವರಿ 14: ಜಯದೇವ ಮೇಲ್ಸೇತುವೆ ತೆರವು ಕಾರ್ಯ ಜನವರಿ 16ರಿಂದ ಆರಂಭಗೊಳ್ಳಲಿದೆ. id="toptextpromo"> id='are-slot-1' class='oiad oi-axt oiadv'>ನಮ್ಮ
ಮೆಟ್ರೋ ನಿರ್ಮಾಣಕ್ಕಾಗಿ ಜಯದೇವ ಮೇಲ್ಸೇತುವೆಯನ್ನು ತೆರವುಗೊಳಿಸುವುದು ಅನಿವಾರ್ಯವಾಗಿದೆ. ಒಟ್ಟು 2 ಹಂತಗಳಲ್ಲಿ ತೆರವು ಕಾರ್ಯ ಕೈಗೊಳ್ಳಲಾಗುತ್ತಿದೆ. ವಾಹನ ಸವಾರರಿಗೆ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚನೆ ನೀಡಲಾಗುತ್ತಿದೆ. 2017ರಲ್ಲಿಯೇ ಜಯದೇವ ಮೇಲ್ಸೇತುವೆ ತೆರವಿಗೆ ಅನುಮತಿ ದೊರೆತಿತ್ತು. id='are-slot-2' class='oiad oi-axt oiadv'>
ಯಾವ್ಯಾವ ವಾಹನಗಳಿಗೆ ಓಡಾಡಲು ಅವಕಾಶ
ಕೇವಲ ಬಿಎಂಟಿಸಿ, ದ್ವಿಚಕ್ರ ವಾಹನ ಮತ್ತು ಆಂಬ್ಯುಲೆನ್ಸ್ ಗೆ ಮಾತ್ರ ಅಂಡರ್ ಪಾಸ್ ಕೆಳಗೆ ಓಡಾಡಲು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10ರವರೆಗೂ ಅವಕಾಶ ನೀಡಲಾಗುತ್ತದೆ. ಕಾರು ಸೇರಿದಂತೆ ಇನ್ನಿತರೆ ವಾಹನಗಳು ಬದಲಿ ರಸ್ತೆಯಲ್ಲಿ ಸಂಚರಿಸಬೇಕಾಗುತ್ತದೆ. ಬನ್ನೇರುಘಟ್ಟ ರಸ್ತೆಯಿಂದ ಜಯದೇವ ಜಂಕ್ಷನ್ ಮಾರ್ಗದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ.

2019ರಲ್ಲೇ ಕಾಮಗಾರಿ ಆರಂಭಿಸಬೇಕಿತ್ತು
2019ರ ಮೇ ತಿಂಗಳಿನಲ್ಲಿಯೇ ಕಾಮಗಾರಿ ಆರಂಭವಾಗಬೇಕಿತ್ತು. ಆದರೆ ಬದಲಿ ಮಾರ್ಗದಲ್ಲಿ ಜಲಮಂಡಳಿ, ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದ ಕಾರಣ ತಡವಾಗಿದೆ.
ಮೇ ಅಂತ್ಯದಲ್ಲಿ ಬನ್ನೇರುಘಟ್ಟದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ತಲುಪುವ ಕಡೆಗಿನ ಫ್ಲೈಓವರ್‌ನ್ನು ಮೊದಲು ತೆರವುಗೊಳಿಸಲಾಗುತ್ತದೆ. ಬಳಿಕ ಮುಖ್ಯ ಮೇಲ್ಸೇತುವೆ ಭಾಗವನ್ನು ನಂತರದ ದಿನದಲ್ಲಿ ತೆರವುಗೊಳಿಸಲಾಗುತ್ತದೆ. 12 ವರ್ಷಗಳ ಹಳೆಯ ಸೇತುವೆಯನ್ನು ತೆರವುಗೊಳಿಸಲು ಎರಡರಿಂದ ಮೂರು ತಿಂಗಳ ಕಾಲಾವಕಾಶ ಬೇಕಾಗುತ್ತದೆ.

ಮೇಲ್ಸೇತುವೆ ತೆರವಿಗೂ ಮುನ್ನ ಪರ್ಯಾಯ ವ್ಯವಸ್ಥೆ
ರೀಚ್ 5 ಹಾಗೂ ರೀಚ್ 6ರ ನಮ್ಮ ಮೆಟ್ರೋ ಕಾಮಗಾರಿ ಆರಂಭಕ್ಕೂ ಮುನ್ನ ಬಿಎಂಆರ್‌ಸಿಎಲ್ ವಾಹನ ಸವಾರರಿಗೆ ಅನನುಕೂಲವಾಗದಂತೆ ನೋಡಿಕೊಳ್ಳುವುದು ಕೂಡ ಕರ್ತವ್ಯವಾಗಿದೆ. 300ಕ್ಕೂ ಹೆಚ್ಚು ಕೆಲಸಗಾರರು ಮತದಾನ ಮಾಡಲು ಊರಿಗೆ ತೆರಳಿರುವ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ.

ಮೈಕೋ ಲೇಔಟ್‌ನಲ್ಲಿ ಆಗಲೇ ಪರ್ಯಾಯ ಮಾರ್ಗ
ಮೈಕೋ ಲೇಔಟ್‌ನಲ್ಲಿ ಟ್ರಾಫಿಕ್ ಪೊಲೀಸರೂ ಈಗಾಗಲೇ ಗುರಪ್ಪನಪಾಳ್ಯಕ್ಕೆ ತೆರಳುವವರು ಸರ್ವೀಸ್ ರಸ್ತೆ ಮೂಲಕ ತೆರಳಲು ಸೂಚಿಸಿದ್ದಾರೆ.

ಎರಡು ಹಂತದಲ್ಲಿ ಮೇಲ್ಸೇತುವೆ ತೆರವು ಕಾರ್ಯ
ಒಟ್ಟು ಎರಡು ಹಂತಗಳಲ್ಲಿ ಜಯದೇವ ಮೇಲ್ಸೇತುವೆ ತೆರವು ಕಾರ್ಯ ನಡೆಸಲಾಗುತ್ತದೆ. ಮೇ ಅಂತ್ಯದಲ್ಲಿ ಬನ್ನೇರುಘಟ್ಟದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ತಲುಪುವ ಕಡೆಗಿನ ಫ್ಲೈಓವರ್‌ನ್ನು ಮೊದಲು ತೆರವುಗೊಳಿಸಲಾಗುತ್ತದೆ. ಬಳಿಕ ಮುಖ್ಯ ಮೇಲ್ಸೇತುವೆ ಭಾಗವನ್ನು ನಂತರದ ದಿನದಲ್ಲಿ ತೆರವುಗೊಳಿಸಲಾಗುತ್ತದೆ. 12 ವರ್ಷಗಳ ಹಳೆಯ ಸೇತುವೆಯನ್ನು ತೆರವುಗೊಳಿಸಲು ಎರಡರಿಂದ ಮೂರು ತಿಂಗಳ ಕಾಲಾವಕಾಶ ಬೇಕಾಗುತ್ತದೆ.












Click it and Unblock the Notifications