• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಯದೇವ ಮೇಲ್ಸೇತುವೆ ತೆರವು ಕಾರ್ಯ ಎಲ್ಲಿಗೆ ಬಂತು

|

ಬೆಂಗಳೂರು, ಜನವರಿ 22: ಜಯದೇವ ಮೇಲ್ಸೇತುವೆ ತೆರವು ಕಾರ್ಯ ಲೂಪ್ ತೆರವು ಹಂತಕ್ಕೆ ಬಂದು ನಿಂತಿದೆ.

ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ಹಿನ್ನೆಲೆಯಲ್ಲಿ ಜಯದೇವ ಜಂಕ್ಷನ್ ಮೇಲ್ಸೇತುವೆಯ ಲೂಪ್ ಮುಖ್ಯ ಭಾಗವನ್ನು ನೆಲಸಮ ಮಾಡುವ ಕಾರ್ಯಾಚರಣೆಯನ್ನು ಆರಂಭಿಸಿದೆ.

ಜಯದೇವ ಮೇಲ್ಸೇತುವೆ ತೆರವು ಕಾರ್ಯ ಸದ್ಯಕ್ಕಿಲ್ಲ, ಕಾರಣಗಳು ಇಲ್ಲಿವೆ

ಮಾರೇನಹಳ್ಳಿ ರಸ್ತೆಯ 18ನೇ ಮುಖ್ಯರಸ್ತೆಯಿಂದ ಸಿಲ್ಕ್‌ಬೋರ್ಡ್ ಜಂಕ್ಷನ್‌ವರೆಗಿನ ಆಂತರಿಕ ರಸ್ತೆಗಳು-36ನೇ ತಿರುವು, 28ನೇ ಮುಖ್ಯರಸ್ತೆ, ಈಸ್ಟ್‌ ಎಂಡ್ ರಸ್ತೆ, ಜಯನಗರ, ತಾವರೆಕೆರೆ ಮುಖ್ಯರಸ್ತೆ ಹಾಗೂ ಬಿಟಿಎಂ 2ನೇ ಹಂತದ 29ನೇ ರಸ್ತೆ, 16ನೇ ಮತ್ತು 7ನೇ ಮುಖ್ಯರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಎಲ್ಲಾ ಸಂದರ್ಭದಲ್ಲಿ ನಿಷೇಧಿಸಲಾಗಿದೆ.

ಜಯದೇವ ಮೇಲ್ಸೇತುವೆ ಮೇಲಿನ ವಾಹನ ಸಂಚಾರ ಸ್ಥಗಿತ

ಜಯದೇವ ಮೇಲ್ಸೇತುವೆ ಮೇಲಿನ ವಾಹನ ಸಂಚಾರ ಸ್ಥಗಿತ

ಈ ಹಿನ್ನೆಲೆಯಲ್ಲಿ ಜಯದೇವ ಮೇಲ್ಸೇತುವೆ ಮೇಲಿನ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಜಯದೇವ ಜಂಕ್ಷನ್ ಮೇಲ್ಸೇತುವೆ ಸುತ್ತಮುತ್ತ ವಾಹನ ದಟ್ಟಣೆ ಹೆಚ್ಚಾಗಿದ್ದು, ಸಾರ್ವಜನಿಕರು ಕಷ್ಟಪಡುವಂತಾಗಿದೆ.

ಜಯದೇವ ಆಸ್ಪತ್ರೆ ಬಳಿ ಕೆಲಸ ಪ್ರಗತಿಯಲ್ಲಿದೆ

ಜಯದೇವ ಆಸ್ಪತ್ರೆ ಬಳಿ ಕೆಲಸ ಪ್ರಗತಿಯಲ್ಲಿದೆ

ಎಲೆಕ್ಟ್ರಾನಿಕ್ ಸಿಟಿ ಕಾರಿಡಾರ್‌ನ ಮೆಟ್ರೋ ರೈಲು(ಹಂತ-2, ರೀಚ್ -5) ಮಾರ್ಗದ ನಿರ್ಮಾಣ ಕಾರ್ಯವು ಜಯದೇವ ಆಸ್ಪತ್ರೆ ಮೇಲ್ಸೇತುವೆ ಜಂಕ್ಷನ್‌ ಬಳಿ ಪ್ರಗತಿಯಲ್ಲಿದೆ. ಜಯದೇವ ಜಂಕ್ಷನ್ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣ ಒಳಗೊಂಡಂತೆ ಎಲಿವೇಟೆಡ್ ರಸ್ತೆ, ಎಲೆಕ್ಟ್ರಾನಿಕ್‌ಸಿಟಿ ರೈಲು ಕಾರಿಡಾರ್‌ ನಿರ್ಮಾಣ ಮಾಡಲು ಆರ್‌ವಿ ರಸ್ತೆಯಿಂದ ಸೆಂಟ್ರಲ್ ಸಿಲ್ಕ್‌ಬೋರ್ಡ್‌ಗೆ ರಸ್ತೆ ಸಂಪರ್ಕ ಕಲ್ಪಿಸುತ್ತಿರುವ ಮೇಲ್ಸೇತುವೆಯನ್ನು ಜ.20 ರಿಂದ ತೆರವುಗೊಳಿಸಲಾಗುತ್ತಿದೆ.

ಮಾರ್ಗ ಬದಲಾವಣೆ

ಮಾರ್ಗ ಬದಲಾವಣೆ

ಮೇಲ್ಸೇತುವೆ ನೆಲಸಮ ಕಾಮಗಾರಿ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ಸಂಚಾರ ನಿಯಮಗಳನ್ನು ಬದಲಾವಣೆ ಮಾಡಿದೆ. ಜಯದೇವ ಮೇಲ್ಸೇತುವೆಯಲ್ಲಿ ಎಲ್ಲಾ ರೀತಿಯ ಟ್ರಾಫಿಕ್‌ಗಳಿಗೂ ನಿರ್ಬಂಧ ವಿಧಿಸಲಾಗಿದೆ. ಹೊರ ವರ್ತುಲ ರಸ್ತೆಯಲ್ಲಿನ 18ನೇ ಮುಖ್ಯರಸ್ತೆಯ ಮಾರೇನಹಳ್ಳಿ-29ನೇ ಮುಖ್ಯರಸ್ತೆಯ ಬಿಟಿಎಂ 2ನೇ ಹಂತ ನಡುವಿನ ರಸ್ತೆಯನ್ನು ಪ್ರತಿದಿನ ರಾತ್ರಿ 10.30ರಿಂದ ಬೆಳಗ್ಗೆ 5.30ರವರೆಗೆ ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ಎರಡು ಮಾರ್ಗವನ್ನು ಮುಚ್ಚಲಾಗಿದೆ.

ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ವಾಹನ ನಿಷೇಧ

ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ವಾಹನ ನಿಷೇಧ

ಕಾರುಗಳು, ಟ್ರಾಕ್ಟರ್‌ಗಳು, ಆಟೋರಿಕ್ಷಾಗಳು, ಟ್ರಕ್ , ಟ್ರ್ಯಾಕ್ಟರ್ ಮತ್ತು ಟ್ರಾಲಿಗಳು ಸೇರಿದಂತೆ ಇತರೆ ವಾಹನಗಳ ಸಂಚಾರ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ನಿಷೇಧಿಸಲಾಗಿದೆ. ಕಾರು ಮತ್ತು ಆಟೋರಿಕ್ಷಾಗಳು ಹೊರ ವರ್ತುಲ ರಸ್ತೆ ಉದ್ದಕ್ಕೂ ಚಲಿಸಲಿದೆ. ಬಿಟಿಎಂ 2ನೇ ಹಂತದ 16ನೇ ಮುಖ್ಯರಸ್ತೆ ಮತ್ತು 29ನೇ ಮುಖ್ಯರಸ್ತೆ ಮೂಲಕ ಹಾದುಹೋಗಬಹುದಾಗಿದೆ.

English summary
Jayadeva Flyover Clearence Work Is Going On In Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X