• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿಯನ್ನು ಜೀವಂತ ಸುಡುವ ಕಾಲ ಬಂದಿದೆ ಎಂದು ಹೇಳಿಯೇ ಇಲ್ಲ : ಜಯಚಂದ್ರ

|

ಬೆಂಗಳೂರು, ನವೆಂಬರ್ 10: ತುಮಕೂರಿನಲ್ಲಿ ಮಾಜಿ ಸಚಿವ ಟಿಬಿ ಜಯಂಚಂದ್ರ ಮಾಡತನಾಡುವಾಗ ಮೋದಿಯನ್ನು ಜೀವಂತ ಸುಡುವ ಕಾಲ ಬಂದಿದೆ ಎಂದು ಉದ್ಘರಿಸಿರುವುದು ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು.ಇದೀಗ ಸ್ವತಃ ಜಯಚಂದ್ರ ಅವೇ ಸ್ಪಷ್ಟನೆ ನೀಡಿದ್ದು, ಮೋಸಿ ಸುಡಬೇಕು ಎಂದು ನಾನು ಹೇಳಿಯೇ ಇಲ್ಲ ಎಂದು ಜಾರಿಗೊಂಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೇಲೆ ನನಗೆ ಗೌರವವಿದೆ, ಪಣಜಿ, ಬೆಳಗಾವಿ, ಬಾರಮತಿಯಲ್ಲಿ ನೋಟಿ ಅಮಾನ್ಯೀಕರಣ ಮಾಡಿದ ಸಂದರ್ಭದಲ್ಲಿ ಹಾಗೂ ಕಪ್ಪು ಹಣ ತರಲು ಭರವಸೆಯನ್ನು ಜನರಿಗೆ ನೀಡಿದ್ದನ್ನು ನನ್ನ ಭಾಷಣದಲ್ಲಿ ನಾನು ಉಲ್ಲೇಖಿಸಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.

ಮೋದಿಯನ್ನು ಜೀವಂತ ಸುಡುವ ಕಾಲ ಬಂದಿದೆ ಎಂದ ಕರ್ನಾಟಕ ಕಾಂಗ್ರೆಸ್ ಮುಖಂಡ

ನೋಟು ಅಮಾನ್ಯೀಕರಣವಾಗಿ ಎರಡು ವರ್ಷ ಕಳೆದಿದೆ, ನೋಟುಗಳ ಅಮಾನ್ಯೀಕರಣ ಆದರೂ ಕೂಡ ದೇಶದಲ್ಲಿ ಶೇ.99.3ರಷ್ಟು ನಗದು ಆರ್‌ಬಿಐ ಖಾತೆಯಲ್ಲಿ ಜಮಾ ಆಗಿದೆ. ಪ್ರಧಾನಮಂತ್ರಿ ಆಶ್ವಾಸನೆಯಂತೆ ಸಾಮಾನ್ಯ ಜನರ ಖಾತೆಗೆ 10-15 ಲಕ್ಷ ರೂಗಳು ಜಮಾವಾಗಿಲ್ಲ. ಬದಲಾಗಿ ಮಧ್ಯಮ, ತಳಮಟ್ಟದ ಜನರಿಗೂ ಸಹಾಯವಾಗಿಲ್ಲ, ಸಾಕಷ್ಟು ತೊಂದರೆಯಾಗಿದೆ ಎಂದು ಹೇಳಿದ್ದೇನೆ.

ಯಾರಿಗೂ ನೋವು ಉಂಟುಮಾಡುವ ಉದ್ದೇಶ ನನಗಿರಲಿಲ್ಲ. ಮೋದಿಯವರು ನನಗೆ 50 ದಿನ ಸಮಯಕೊಡಿ ನಾನು ಹೇಳಿದ್ದು ಸುಳ್ಳಾದರೆ ನನ್ನನ್ನು ಜೀವಂತ ಸುಟ್ಟುಹಾಕಿ ಎಂದು ಭಾಷಣದಲ್ಲಿ ಹೇಳಿದ್ದರು. ಅದನ್ನು ಇನ್ನೊಮ್ಮೆ ವ್ಯಾಖ್ಯಾನಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

English summary
Former minister T.B. Jayachandra has clarified that he had only recalled statement given by the prime minister Narendra Modi in 2017 about demonetization.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X