• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೆಎನ್ವಿ ಹಳೆ ವಿದ್ಯಾರ್ಥಿಗಳ ಸಭೆ, ಅರ್ಥಪೂರ್ಣ ಆಚರಣೆಗೆ ಬನ್ನಿ

By Mahesh
|

ಬೆಂಗಳೂರು, ಮೇ 17: ರಾಜ್ಯದ ಎಲ್ಲೆಡೆ ಇರುವ ಜವಾಹರ ನವೋದಯ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಈ ಬಾರಿ ಬೆಂಗಳೂರಿನಲ್ಲಿ ಮೇ 22ರಂದು ಆಚರಿಸಲಾಗುತ್ತಿದೆ. ಈ ಸಮ್ಮಿಲನವನ್ನು ಜೆಎನ್ವಿ ಅಲುಮ್ನಿ ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿದೆ.

ಬಡ ಮತ್ತು ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಭಾರತ ಸರಕಾರವು ಜವಾಹರ ನವೋದಯ ವಿದ್ಯಾಲಯವನ್ನು ದೇಶದ ಪ್ರತಿ ಜಿಲ್ಲೆಯಲ್ಲೂ ಪ್ರಾರಂಭಿಸಿತು.

ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ಅರ್ಹ ವಿದ್ಯಾರ್ಥಿಗಳಿಗೆ, 6ನೇ ತರಗತಿಯಿಂದ 12ನೇ ತರಗತಿಯವರೆಗೆ ಉಚಿತ ಶಿಕ್ಷಣ ಮತ್ತು ವಸತಿ ನೀಡಲಾಗುತ್ತದೆ. ಈ ಶಾಲೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಈಗ ಸಮಾಜದ ಉನ್ನತ ಸ್ಥಾನಕ್ಕೇರಿರುವರಲ್ಲದೆ, ಅವರ ಸಾಮಾಜಿಕ ಕಳಕಳಿ, ಪ್ರಾಮಾಣಿಕತೆ ಮತ್ತು ಸಮರ್ಪಣೆಗೆ ಹೆಸರು ಮಾಡಿದ್ದಾರೆ. ತಾವಿದ್ದ ಮೂಲ ಮತ್ತು ನಡೆದು ಬಂದ ದಾರಿಯನ್ನು ಮರೆಯದೆ, ನೈತಿಕತೆಯಿಂದ ಮುಂದೆ ಸಾಗುತ್ತಾರೆ.[ಅವಿರತ ಟ್ರಸ್ಟ್ ನಿಂದ ರಕ್ತದಾನಕ್ಕಾಗಿ ಆಂಡ್ರಾಯ್ಡ್ ಅಪ್ಲಿಕೇಷನ್]

ಬೆಂಗಳೂರಿನಲ್ಲಿ ವಾಸಿಸಿರುವ ನವೋದಯ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನವನ್ನು ಮೇ 22 ರಂದು ಭಾನುವಾರ ಎಚ್ ಎ ಎಲ್ ಕನ್ವೆನ್ಷನ್ ಸೆಂಟರ್ ನಲ್ಲಿ ಆಯೋಜಿಸಲಾಗಿದೆ. ಸಮಾಜಕ್ಕೆ ತಾವು ಏನನ್ನಾದರೂ ವಾಪಸ್ಸು ಕೊಡಬೇಕುನ್ನುವ ಸಂಕಲ್ಪದಿಂದ, ಅಂಗದಾನ ಮತ್ತು ರಕ್ತದಾನ ಶಿಬಿರವನ್ನು ಈ ಸಂದರ್ಭದಲ್ಲಿ ಮಾಡಲಾಗುತ್ತಿದೆ.

ಈ ರೀತಿಯಾಗಿ ಸಮಾಜದಲ್ಲಿ ಇದರ ಬಗ್ಗೆ ಜಾಗ್ರತಿ ಮೂಡಿಸಿ ಸಮಾಜ ಬದಲಾವಣೆಗೆ ನಾಂದಿಯಾಗಬೇಕೆನ್ನುವದು ಇವರಾಸೆ. ಭಾರತದಲ್ಲಿ ಪ್ರತಿ ದಿನ 6,000 ಜನರು ಅಂಗಗಳ ಕಸಿಗೆ ಕಾಯುತ್ತಲೇ ಸಾವನ್ನಪ್ಪುತ್ತಾರೆ.

ಪ್ರತಿ 13 ನಿಮಿಷಕ್ಕೆ ಒಬ್ಬ ಅಂಗಾಂಗಗಳ ಕಸಿಯ ಕಾಯುವ ಲಿಸ್ಟ್ ಗೆ ಸೇರುತ್ತಾನೆ. ಅಂಗಾಂಗಗಳ ಬೇಡಿಕೆ ತುಂಬಾ ಇದೆ. ಅಂಗಾಂಗಗಳನ್ನು ಸ್ವರ್ಗಕ್ಕೆ ಕೊಂಡೊಯ್ಯೋ ಬದಲು, ಸ್ವರ್ಗವನ್ನು ಇಲ್ಲಿಯೇ ಸೃಷ್ಟಿಸಿ. ಅದೇ ತರಹ ಪ್ರತಿ ವರ್ಷ ನಮ್ಮ ದೇಶದಲ್ಲಿ 4 ಕೋಟಿ ರಕ್ತ ಪ್ಯಾಕೆಟ್ ಬೇಕಾಗಿದ್ದರೆ, 40 ಲಕ್ಷ ಪ್ಯಾಕೆಟ್ ಮಾತ್ರ ಲಭ್ಯವಿದೆ. ರಕ್ತದಾನ ಜೀವದಾನ. ರಕ್ತಕ್ಕೆ ಯಾವುದೇ ಬದಲಿ ಪದಾರ್ಥವಿಲ್ಲ. ರಕ್ತ ಯಾವುದೇ ಕಾರ್ಖಾನೆಯಲ್ಲಿ ಉತ್ಪಾದನೆ ಯಾಗುವದಿಲ್ಲ. ಇದು ದಾನಿಗಳಿಂದ ಮಾತ್ರ ಬರಲು ಸಾಧ್ಯ.

ಪ್ರತಿ 2 ನಿಮಿಷಕ್ಕೆ ಯಾರಿಗೋ ರಕ್ತ ಬೇಕು. ದಿನ 38,000ಕ್ಕಿಂತಲೂ ಮೇಲ್ಪಟ್ಟು ದಾನಿಗಳ ಅವಶ್ಯಕತೆ ಇದೆ.ನಾವು ಸಾವಿರಾರು ಬೆಂಗಳೂರಲ್ಲಿ ಎಲ್ಲ ಕಡೆ ಹರಡಿದ್ದೇವೆ. ಒಂದು ಸಾರಿ ಎಲ್ಲ ನವೊದಯನ್ಸ್ ಕನೆಕ್ಟ್ ಆದ್ರೆ, ಬೆಂಗಳೂರಿನ ಅಭಿವೃದ್ಧಿಗೆ ನಮ್ಮದೇ ಟಾಸ್ಕ್ ಫೋರ್ಸ್ ಮಾಡುವ ಯೋಚನೆ ಇದೆ.

ನಮ್ಮ ಮುಂದಿನ ಆದ್ಯತೆಗಳು - ಕೆರೆ ಉಳಿಸುವಿಕೆ, ಪರಿಸರ ಸಂರಕ್ಷಣೆ, ಟ್ರಾಫಿಕ್ ನಿಯಂತ್ರಣ, ಕಸ ವಿಲೇವಾರಿ ಮತ್ತು ಮಳೆ ನೀರ ಸಂರಕ್ಷಣೆ ಇದನ್ನೆಲ್ಲಾ ದೊಡ್ಡ ಪ್ರಮಾಣದಲ್ಲಿ ಮಾಡಿದ್ರೆ, ಸಮಾಜದ ಬದಲಾವಣೆ ಮಾಡಲು ಅನುಕೂಲ ಆಗುವದು. ನಮ್ಮ ಕನಸ್ಸನ್ನು ನನಸಾಗಿಸಲು ನೀವೆಲ್ಲ ದಯಮಾಡಿ ಕೈಜೋಡಿಸಿ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಸತೀಶ್ ಕೆ.ಟಿ : 98800 86300,ಡಾ. ರಾಜಶೇಖರ್ 98863 49019.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Javahar Navodaya Vidyalaya(JNV) Alumni meet 2016, HAL convenstion centre, Bengaluru on May 22: All the alumni who are in Bangalore or nearby Bangalore are invited for this meeting. If any alumni from other states/regions want to attend this gathering, they are also most welcome.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more