Bengaluru Airport Terminal 2: ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣ ಟರ್ಮಿನಲ್ 2 ಕಂಡು ಜಪಾನ್ ಸುಂದ್ರಿ ಫಿಧಾ.!
Bengaluru Airport Terminal 2: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣ ಎಂದೇ ಪ್ರಸಿದ್ಧಿ ಪಡೆದಿದೆ. ಇದರ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ಇದೀಗ ಜಪಾನ್ ಸುಂದ್ರಿಯೊಬ್ಬಳು ಇದರ ವಿಡಿಯೋ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಬೆಂಗಳೂರು ಏರ್‌ಪೋರ್ಟ್‌ನ ಟರ್ಮಿನಲ್ 2ಗೆ ಮೊದಲ ಬಾರಿ ಬಂದಿಳಿದ ಜಪಾನ್ ಮಹಿಳೆಯೊಬ್ಬರು ಅಲ್ಲಿನ ಸೊಬಗನ್ನು ಕಂಡು ಫಿಧಾ ಆಗಿದ್ದಾರೆ. ಅಲ್ಲದೆ, ನಾನು ಭಾರತದಲ್ಲಿನ ಏರ್‌ಪೋರ್ಟ್‌ನಲ್ಲಿ ಇದ್ದೇನೆ ಎಂದು ನಂಬಲಾಗುತ್ತಿಲ್ಲ ಅಂತಲೂ ಹೇಳಿದ್ದಾರೆ. ಅಷ್ಟರ ಮಟ್ಟಿಗೆ ವಿದೇಶಿ ಪ್ರವಾಸಿಗರನ್ನು ಈ ಟರ್ಮಿನಲ್ 2 ತನ್ನತ್ತ ಸೆಳೆಯುತ್ತಲೇ ಇದೆ.

ಗ್ರೀನ್ ಏರ್‌ಪೋರ್ಟ್ ಪರಿಕಲ್ಪನೆಯಲ್ಲಿ ನಿರ್ಮಾಣವಾದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದೆ.
ಹಚ್ಚ ಹಸಿರಿನಿಂದ ಕೂಡಿದ ಈ ಪರಿಸರ ಸ್ನೇಹಿ ಏರ್‌ಪೋರ್ಟ್ ಸೌಂದರ್ಯಕ್ಕೆ ಮನಸೋಲದವರಿಲ್ಲ.
ಇದೀಗ ಮೊದಲ ಬಾರಿಗೆ ಈ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ಜಪಾನ್ ಮಹಿಳೆಯೊಬ್ಬರೂ ಸಹ ಇಲ್ಲಿನ ಸೌಂದರ್ಕ್ಕೆ ಫಿಧಾ ಆಗಿದ್ದಾರೆ. ಅಷ್ಟೇ ಅಲ್ಲದೆ, ಇದು ಭಾರತದ ವಿಮಾನ ನಿಲ್ದಾಣವಾ? ಎನ್ನುತ್ತಾ ಒಂದೇ ಸಮನೆ ನೋಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಜಪಾನ್‌ನ ಟ್ರಾವೆಲ್ ವ್ಲಾಗರ್ ಕಿಕಿ ಚೆನ್ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2ನಲ್ಲಿ ಬಂದಿಳಿದಾಗ ಇಲ್ಲಿನ ಅದ್ಭುತ ಸೌಂದರ್ಯವನ್ನು ಕಂಡು ಆಶ್ಚರ್ಯಗೊಂಡಿದ್ದಾರೆ. ಈ ಕುರಿತ ವಿಡಿಯೋವನ್ನು ಆಶೇಂದ್ರ ಪಾಟೇಲ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಸಖತ್ ಟ್ರೆಂಡ್ ಆಗುತ್ತಿದೆ.
ಇನ್ನು ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಜಪಾನ್ ಟ್ರಾವೆಲ್ ವ್ಲೋಗರ್ ಬೆಂಗಳೂರು ಏರ್‌ಪೋರ್ಟ್‌ನ ಟರ್ಮಿನಲ್ 2 ರ ಸೊಬಗನ್ನು ಕಂಡು ಮನಸೋತಂತಹ ದೃಶ್ಯವನ್ನು ಕಾಣಬಹುದಾಗಿದೆ.
ಆಕೆ ಏರ್‌ಪೋರ್ಟ್‌ನಲ್ಲಿರುವ ಈವೆಂಟ್ ಸ್ಪೇಸ್, ನಿಕೋಬಾರ್ ಲೌಂಜ್, ಎಂಟರ್‌ಟೈನ್‌ಮೆಂಟ್ ಏರಿಯಾಗಳನ್ನೆಲ್ಲ ಸುತ್ತುತ್ತಾ ನಾನು ಭಾರತದಲ್ಲಿನ ವಿಮಾನ ನಿಲ್ದಾಣದಲ್ಲಿದ್ದೇನೆಂದು ನನಗೆ ನಂಬಲು ಆಗುತ್ತಿಲ್ಲ ಎಂದು ಹೇಳುವ ಮೂಲಕ ಏರ್‌ಪೋರ್ಟ್ ಸೌಂದರ್ಯವನ್ನು ಕಂಡು ಆಶ್ಚರ್ಯಗೊಂಡಿದ್ದಾರೆ.
ನವೆಂಬರ್ 13ರಂದು ಅಂದರೆ ಬುಧವಾರ ಹಂಚಿಕೊಳ್ಳಲಾದ ಈ ವಿಡಿಯೋಗೆ ಹಲವಾರು ಕಾಮೆಂಟ್ಸ್‌ಗಳು ಬಂದಿವೆ.ಒಬ್ಬ ಬಳಕೆದಾರರು "ವಾವ್ಹ್ ನಿಜಕ್ಕೂ ಈ ಏರ್‌ಪೋರ್ಟ್ ಅದ್ಭುತವಾಗಿದೆ," ಎಂಬ ಕಾಮೆಂಟ್ ಮಾಡಿದ್ಬದಾರೆ. ಮತ್ತೊಬ್ಬರು "ಆಹಾ ಸುಂದರ ದೃಶ್ಯ," ಎಂದು ವರ್ಣಿಸಿದ್ದಾರೆ. ಹೀಗೆ ಇನ್ನು ತುಂಬಾ ಜನ ಈ ಬಗ್ಗೆ ವರ್ಣನೆ ಮಾಡಿದ್ದಾರೆ.












Click it and Unblock the Notifications