ರೆಡ್ಡಿ ಆಪ್ತ ಅಲಿಖಾನ್‌ ನ ಜಾಮೀನು ರದ್ದು ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು, ನವೆಂಬರ್ 09: ಆಂಬಿಡೆಂಟ್ ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಅವರ ಮಧ್ಯಂತರ ನಿರೀಕ್ಷಣಾ ಜಾಮೀನು ರದ್ದು ಮಾಡಬೇಕೆಂದು ಸಿಸಿಬಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮುಂದಕ್ಕೆ ಹೋಗಿದೆ.

ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಸಿಸಿಬಿಯು ಅರ್ಜಿ ಸಲ್ಲಿಸಿತ್ತು, ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದಾರೆ. ಅಲ್ಲದೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ್ದಾರೆ.

ಅಲಿಖಾನ್ ಜನಾರ್ದನ ರೆಡ್ಡಿ ಅವರ ಆಪ್ತರಾಗಿದ್ದಾರೆ. ಅವರೇ ಜನಾರ್ದನ ರೆಡ್ಡಿ ಹಾಗೂ ಆಂಬಿಡೆಂಟ್ ಲಂಚ ವ್ಯವಹಾರಕ್ಕೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದರು ಹಾಗೂ ಲಂಚದ ಹಣ ಇವರ ಮೂಲಕವೇ ಪರಭಾರೆ ಆಗಿದೆ ಎಂದು ಸಿಸಿಬಿ ಆರೋಪಿಸಿದೆ.

Janardhan Reddys personal secretory Alikhans bail inquiry postponed

ಅಲಿಖಾನ್‌ಗೆ ಎರಡು ದಿನಗಳ ಮೊದಲು ಮಧ್ಯಂತರ ನಿರೀಕ್ಷಣಾ ಜಾಮೀನು ದೊರೆತಿತ್ತು. ಆದರೆ ಅದನ್ನು ರದ್ದು ಮಾಡಬೇಕು ಎಂದು ಸಿಸಿಬಿ ಮನವಿ ಸಲ್ಲಿಸಿತ್ತು. ಜನಾರ್ದನ ರೆಡ್ಡಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಹ ಇಂದೇ ವಿಚಾರಣೆ ಮಾಡಲಾಗುತ್ತಿದ್ದು ಕೆಲವೇ ಕ್ಷಣಗಳಲ್ಲಿ ಅದರ ಆದೇಶವೂ ಹೊರಬೀಳಲಿದೆ.

ಮತ್ತೊಬ್ಬ ಆರೋಪಿ ರಮೇಶ್‌ ಅವರಿಗೆ ಸಿಸಿಬಿ ಅವರು ಹಲ್ಲೆ ಮಾಡಿದ್ದಾರೆ ಎಂದು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+